ನವದೆಹಲಿ(ಆ.27): ದುಬಾರಿ ಮೌಲ್ಯದ ಹಾರ್ಲೆ ಡೇವಿಡ್ಸನ್ ದುಬಾರಿ ಬೈಕ್ ಇದೀಗ ಭಾರತದಲ್ಲಿ ಹೊಸ ಬೈಕ್ ಅನಾವರಣ ಮಾಡಿದೆ. ಹಾರ್ಲೆ ಡೇವಿಡ್ಸನ್ ಕಂಪನಿಯ ಬಹುನಿರೀಕ್ಷಿತ ಎಲೆಕ್ಟ್ರಿಕ್ ಬೈಕ್  ಲೈವ್ ವೈರ್ ಅನಾವರಣಗೊಂಡಿದೆ. ಈ ಮೂಲಕ ಡೇವಿಡ್ಸನ್ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ. ಇದು ಮೊದಲ ಎಲೆಕ್ಟ್ರಿಕ್ ಬೈಕ್ ಆಗಿದ್ದು, ಬೆಲೆಯು ತುಸು ದುಬಾರಿಯಾಗಿದೆ. 

ಇದನ್ನೂ ಓದಿ: ಶೀಘ್ರದಲ್ಲೇ ಕೈಗೆಟುಕುವ ದರದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಬಿಡುಗಡೆ

ಹಾರ್ಲೆ ಡೇವಿಡ್ಸನ್ ಲೈವ್ ವೈರ್ ಎಲೆಕ್ಟ್ರಿಕ್ ಬೈಕ್ ಬೆಲೆ 40 ರಿಂದ 50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ 25 ಲಕ್ಷ ರೂಪಾಯಿ. ಹೀಗಾಗಿ ಡೇವಿಡ್ಸನ್ ಬೈಕ್ ಬೆಲೆ ದುಬಾರಿ ಮಾತ್ರವಲ್ಲ, ಸಾಮಾನ್ಯ ಶ್ರೀಮಂತರ ಕೈಗೆಟುಕುವಂತಿಲ್ಲ. ಕಂಪನಿ ಪ್ರಕಾರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೂತನ ಲೈವ್ ವೈರ್ ಎಲೆಕ್ಟ್ರಿಕ್ ಬೈಕ್ ತಯಾರಿಸಲಾಗಿದೆ. ಈಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಕಿಂಗ್‌ಗಾಗಿ ಜನರು ಕಾಯುತ್ತಿದ್ದಾರೆ ಎಂದು ಕಂಪನಿ ಹೇಳಿದೆ. 
 

ಇದನ್ನೂ ಓದಿ: ಬೈಕ್ ರೈಡ್ ಮಾಡಿದರೆ ಒತ್ತಡ ನಿವಾರಣೆ- ಅಧ್ಯಯನದಿಂದ ಬಹಿರಂಗ!

103.5 bhp of ಪವರ್ ಹಾಗೂ  116 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  0 to 100 kmph ತಲುಪಲ  ಈ ಬೈಕ್ 3 ಸೆಕೆಂಡ್ ತೆಗೆದುಕೊಳ್ಳಲಿದೆ.  4.3 ಇಂಚಿನ ಟಚ್ ಸ್ಕ್ರೀನ್ ಹೊಂದಿದ್ದು, abs ಸೇರಿದಂತೆ ಎಲ್ಲಾ ಸುರಕ್ಷತಾ ಫೀಚರ್ಸ್ ಲಭ್ಯವಿದೆ. ಲೀಥಿಯಂ -ಐಯಾನ್ ಬ್ಯಾಟರಿ ಹೊಂದಿದೆ. 

ಒಂದು ಬಾರಿ ಚಾರ್ಜ್ ಮಾಡಿದರೆ 225 ಕಿ.ಮೀ ಮೈಲೈಜ್ ರೇಂಜ್ ನೀಡಲಿದೆ. ಮನೆಯಲ್ಲಿನ ಸಾಮಾನ್ಯ ಚಾರ್ಜರ್ ಮೂಲಕ ಚಾರ್ಜಿಂಗ್ ಮಾಡೋದಾದರೆ 12 ಗಂಟೆ ಸಮಯ ತೆಗೆದುಕೊಳ್ಳಲಿದೆ. DC ಫಾಸ್ಟ್ ಚಾರ್ಜಿಂಗ್ ಮೂಲಕ 60 ನಿಮಿಷದಲ್ಲಿ ಚಾರ್ಜ್ ಮಾಡಬಹುದಾಗಿದೆ.