Asianet Suvarna News Asianet Suvarna News

ಬಿಡುಗಡೆಯಾಯ್ತು ಲ್ಯಾಂಬೋರ್ಗಿನಿ ಕಾರು: ಬೆಲೆ 4 ಕೋಟಿಗೂ ಮೇಲು!

ದುಬಾರಿ ಸ್ಪೋರ್ಟ್ಸ್ ಕಾರು ಲ್ಯಾಂಬೋರ್ಗಿನಿ ನೂತನ ಕಾರು ಬಿಡುಗಡೆ ಮಾಡಿದೆ. ಹುರಾಕಾನ್ EVO ಸ್ಪೈಡರ್ ಕಾರು ಹಲವು ವಿಶೇಷತೆಗಳೊಂದಿಗೆ ಭಾರತಕ್ಕೆ ಕಾಲಿಟ್ಟಿದೆ. ಈ ಕಾರಿನ ಸಂಪೂರ್ಣ ವಿವರ ಇಲ್ಲಿದೆ.

Lamborghini huracan evo spider super car launched in India
Author
Bengaluru, First Published Oct 10, 2019, 8:50 PM IST

ಮುಂಬೈ(ಅ.10): ದುಬಾರಿ ಹಾಗೂ ಐಷಾರಾಮಿ ಸ್ಪೋರ್ಟ್ಸ್ ಕಾರುಗಳಲ್ಲಿ ಲ್ಯಾಂಬೋರ್ಗಿನಿಗೆ ಮೊದಲ ಸ್ಥಾನ. ಇದರ ಪರ್ಫಾಮೆನ್ಸ್, ಲುಕ್, ಎಂಜಿನ್‌ಗೆ ಸರಿಸಾಟಿ ಇಲ್ಲ. ಇದೀಗ ಲ್ಯಾಂಬೋರ್ಗಿನಿ ಹುರಾಕಾನ EVO ಸ್ಪೈಡರ್ ಸೂಪರ್ ಕಾರು ಬಿಡುಗಡೆಯಾಗಿದೆ. ಈ ಕಾರಿನ ಬೆಲೆ 4.1 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಸಾಫ್ಟ್ ರೂಪ್ ಕನ್‌ವರ್ಟೇಬಲ್ ಆಯ್ಕೆ ಕೂಡ ಲಭ್ಯವಿದೆ.

Lamborghini huracan evo spider super car launched in India

ಇದನ್ನೂ ಓದಿ: ಪಾಂಡ್ಯ ಖರೀದಿಸಿದ 4 ಕೋಟಿ ಮೌಲ್ಯದ ನೂತನ ಕಾರಿನ ಮೈಲೇಜ್ 7 ಕಿ.ಮೀ!

ಲ್ಯಾಂಬೋರ್ಗಿನಿ ಹುರಾಕಾನ್ EVO ಸ್ಪೈಡರ್ ಕಾರು 0-100 ಕಿ.ಮೀ ವೇಗ ತಲುಪಲು 3.1 ಸೆಕೆಂಡ್‌ಗಳು ತೆಗೆದುಕೊಳ್ಳುತ್ತೆ. ಈ ಕಾರಿನ ಗರಿಷ್ಠ ವೇಗ 325 kmph.ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಲ್ಯಾಂಬೋರ್ನಿಗಿ ಹುರಾಕಾನ್ ಕಾರಿನ ಎಂಜಿನ್ ಬಳಸಲಾಗಿದೆ.

Lamborghini huracan evo spider super car launched in India

ಇದನ್ನೂ ಓದಿ: ಡಿ ಬಾಸ್ ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನ್ ಉರುಸ್ ಕಾರಿನ ವಿಶೇಷತೆ ಇಲ್ಲಿದೆ!

5.2-ಲೀಟರ್ V10 ಮೋಟಾರ್ ಹೊಂದಿದ್ದು,   631 bhp(@8,000 rpm) ಪವರ್ 600 Nm (@6,500 rpm) ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 7 ಸ್ಪೀಡ್ ಲ್ಯಾಂಬೋರ್ಗಿನಿ ಫ್ರಿಜಿಯೊನ್(LDF) ಡ್ಯುಯೆಲ್ ಕ್ಲಚ್ ಟ್ರಾನ್ಸ್‌ಮಿಶನ್ ಹೊಂದಿದೆ. 

Lamborghini huracan evo spider super car launched in India

ಇದನ್ನೂ ಓದಿ: ಖರೀದಿಸಿದ 2 ನಿಮಿಷದಲ್ಲಿ ಕಾಪೌಂಡ್‌ಗೆ ಡಿಕ್ಕಿ- 2.2 ಕೋಟಿ ಲ್ಯಾಂಬೋರ್ಗಿನಿ ಪುಡಿ ಪುಡಿ!

20 ಇಂಚಿನ ಆಲೋಯ್ ವೀಲ್ಹ್ ,  P ಝಿರೋ ಟೈಯರ್ಸ್ ಹೊಂದಿದೆ. 8.4 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಈ ಮೂಲಕ ಕಾರನ್ನು ಕಂಟ್ರೋಲ್ ಮಾಡಬಹುದು. ಕ್ಲೈಮೇಟ್ ಕಂಟ್ರೋಲ್, ಸೆಲ್ ಫೋನ್ ಕೆನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

Follow Us:
Download App:
  • android
  • ios