KTM ನೂತನ 125 ಡ್ಯೂಕ್ ಬೈಕ್ ಬಿಡುಗಡೆಗೆ ಮಾಡಿದೆ. 125 ಸಿಸಿ ಇಂಜಿನ್, ಕಡಿಮೆ ಬೆಲೆ ಮೂಲಕ ಯಮಹಾ, ಸುಜುಕಿ ಬೈಕ್‌ಗಳಿಗೆ ಸೆಡ್ಡು ಹೊಡೆಯಲು ಕೆಟಿಎಂ ಸಜ್ಜಾಗಿದೆ. KTM ಡ್ಯೂಕ್ 125 ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ನ.26): ಆಸ್ಟ್ರಿಯಾ ಸ್ಪೋರ್ಟ್ಸ್ ಬೈಕ್ ಕೆಟಿಎಂ ಇದೀಗ ಭಾರತದಲ್ಲಿ ನೂತನ 125 ಡ್ಯೂಕ್ ಬೈಕ್ ಬಿಡುಗಡೆ ಮಾಡಿದೆ. ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್(ABS) ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿರುವ ನೂತನ 125 ಡ್ಯೂಕ್ ಬೈಕ್ ಇತರ ಬೈಕ್‌ಗಳಿಗೆ ಭಾರಿ ಪೈಪೋಟಿ ನೀಡಲಿದೆ.

Add Asianetnews Kannada as a Preferred SourcegooglePreferred

ನೂತನ ಡ್ಯೂಕ್ 125 ಬೈಕ್ ಬೆಲೆ 1.18 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಡ್ಯೂಕ್ 390 ಬೈಕ್ ಮಾದರಿಯನ್ನೇ ಹೋಲುವು 125 ಡ್ಯೂಕ್ ಹೆಚ್ಚು ಆಕರ್ಷಕ ವಿನ್ಯಾಸ ಹೊಂದಿದೆ. ಜೊತೆಗೆ ಕೆಲ ಬದಲಾವಣೆ ಕೂಡ ಮಾಡಿದೆ. 

15ಪಿಎಸ್ ಎಂಜಿನ್, 6 ಸ್ಪೀಡ್ ಗೇರ್ ಹೊಂದಿದೆ. 390 ಡ್ಯೂಕ್ ಹಾಗೂ 125 ಡ್ಯೂಕ್ ವಿನ್ಯಾಸ ಹೆಚ್ಚೂ ಕಡಿಮೆ ಒಂದೇ ರೀತಿ ಇರಲಿದೆ. 17 ಇಂಚು ಆಲೋಯ್ ವೀಲ್ಹ್ಸ್, LED ಹೆಡ್‌ಲ್ಯಾಂಪ್ಸ್ ಹೊಂದಿದೆ. 125 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯೆಲ್ ಇಂಜೆಕ್ಟ್ ಮೋಟರ್ ಹೊಂದಿದೆ.