ನವದೆಹಲಿ(ಅ.13): ಸ್ಕೂಟರ್, ಬೈಕ್, ಕಾರು, ಬಳಿಕ ಇದೀಗ ಎಲೆಕ್ಟ್ರಿಕ್  ರಿಕ್ಷಾ ಬಿಡುಗಡೆಯಾಗಿದೆ. ಕೈನೆಟಿಕ್ ಗ್ರೀನ್ ಎನರ್ಜಿ ಹಾಗೂ ಪವರ್ ಸೊಲ್ಯುಶನ್ ಲಿಮಿಟೆಡ್ ನೂತನ ರಿಕ್ಷಾ ಬಿಡುಗಡೆ ಮಾಡಿದೆ. ಲೀಥಿಯಂ ಐಯನ್ ಬ್ಯಾಟರಿ ಚಾಲಿತ ಈ  ರಿಕ್ಷಾ ಶಕ್ತಿಶಾಲಿ ಎಂಜಿನ್ ಹೊಂದಿದೆ.

ಇದನ್ನೂ ಓದಿ: 3 ತಿಂಗಳಲ್ಲಿ ಕಿಯಾ ಸೆಲ್ಟೋಸ್ ದಾಖಲೆ; SUV ಕಾರಿಗೆ ಭಾರಿ ಬೇಡಿಕೆ!

ನೂತನ ಕೈನೆಟಿಕ್ ಸಫರ್ ಎಲೆಕ್ಟ್ರಿಕ್ ರಿಕ್ಷಾ ಬೆಲೆ 2.20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ರಿಕ್ಷಾ  400 ಕೆಜಿ ತೂಕವನ್ನು ಸರಾಗವಾಗಿ ಹೊತ್ತೊಯ್ಯಲಿದೆ.  3 ವರ್ಷ ಬ್ಯಾಟರಿ ವ್ಯಾರೆಂಟಿಯನ್ನು ಕಂಪನಿ ನೀಡುತ್ತಿದೆ.

 

ಇದನ್ನೂ ಓದಿ: ಲೈಸೆನ್ಸ್, ದಾಖಲೆ ಯಾವುದೂ ಬೇಡ; ಬಿಡುಗಡೆಯಾಗಿದೆ 35,000 ರೂಪಾಯಿ ಬೈಕ್!

ಒಂದು ಬಾರಿ ಚಾರ್ಜ್ ಮಾಡಿದರೆ 130 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಗರಿಷ್ಠ ವೇಗ 40 ಕಿ.ಮೀ ಪ್ರತಿ ಗಂಟೆಗೆ. 2 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಪ್ರಯಾಣಿಕರನ್ನು, ವಸ್ತುಗಳನ್ನು ಸಾಗಿಸಲು ಇದು ಅತ್ಯುತ್ತಮ ವಾಹನ. ಮಾಲಿನ್ಯ ರಹಿತ ಕೈನೆಟಿಕ್ ಸಫರ್ ಅತೀ ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಪ್ರಯಾಣಿಸಲಿದೆ ಎಂದು ಸಂಸ್ಥಾಪಕ ನಿರ್ದೇಸಕ ಸಾಲುಜ್ಜಾ ಫಿರೋದಿಯಾ ಮೋಟ್ವಾನಿ ಹೇಳಿದ್ದಾರೆ. ಭಾರತದಲ್ಲಿರುವ 150 ಡೀಲರ್‌ಗಳಲ್ಲಿ ಕೈನೆಟಿಕ್ ಸಫರ್ ಲಭ್ಯವಿದೆ.