ಬೆಂಗಳೂರು(ಜು.12): ಸೌತ್ ಕೊರಿಯಾದ ಕಿಯಾ ಮೋಟಾರ್ಸ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಕಾರು ಬಿಡುಗಡೆ ಮಾಡುತ್ತಿದೆ. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಸೇರಿದಂತೆ  SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಕಿಯಾ ಸೆಲ್ಟೊಸ್ ಬಿಡುಗಡೆಯಾಗುತ್ತಿದೆ. ಸೆಲ್ಟೊಸ್ ಕಾರಿನ ಡೀಲರ್ ಬುಕಿಂಗ್ ಆರಂಭಗೊಂಡಿದೆ. ಬೆಂಗಳೂರು ಹಾಗು ಗುರುಗಾಂವ್‌ಗಳಲ್ಲಿ ಡೀಲರ್ ಬಳಿ ಕಿಯಾ ಸೆಲ್ಟೊಸ್ ಕಾರು ಬುಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ- ಇಲ್ಲಿದೆ ಬೆಲೆ, ವಿಶೇಷತೆ!

25,000 ರೂಪಾಯಿ ನೀಡಿ ಕಿಯಾ ಸೆಲ್ಟೊಸ್ ಕಾರು ಬುಕ್ ಮಾಡಿಕೊಳ್ಳಬಹುದು.  ಮುಂದಿನ ವಾರ(ಜು.15 ರಿಂದ ಜು.21) ಕಿಯಾ ಸೆಲ್ಟೊಸ್ ಕಾರಿನ ಆನ್‌ಲೈನ್ ಬುಕಿಂಗ್  ಆರಂಭಗೊಳ್ಳಲಿದೆ. ಆಗಸ್ಟ್ 22 ರಂದು ಕಿಯಾ ಸೆಲ್ಟೊಸ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. 2018ರ ಆಟೋ ಎಕ್ಸ್ಪೋದಲ್ಲಿ ಸೆಲ್ಟೊಸ್ ಕಾರು ಪರಿಚಯಿಸಲಾಗಿತ್ತು.

ಇದನ್ನೂ ಓದಿ: MG ಹೆಕ್ಟರ್ SUV ಕಾರು ಬಿಡುಗಡೆ- ಟಾಟಾ ಹ್ಯಾರಿಯರ್‌ಗಿಂತ ಕಡಿಮೆ ಬೆಲೆ!

ನೂತನ ಕಾರಿನ ಬೆಲೆ 11 ರಿಂದ 17 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಸೆಲ್ಟೊಸ್ 5 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. TE, TK, TK+, TX ಹಾಗೂ TX+ ವೇರಿಯೆಂಟ್ ಲಭ್ಯವಿದೆ. 1.4 ಲೀಟರ್ ಟರ್ಬೊ GDI ಪೆಟ್ರೋಲ್ ಎಂಜಿನ್, 1.5 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದೆ. 7 ಸ್ಪೀಡ್ ಡ್ಯುಯೆಲ್ ಕ್ಲಚ್ ಟ್ರಾನ್ಸ್‌ಮಿನಶ್, 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್, CVT ಆಟೋಮ್ಯಾಟಿಕ್ ಹಾಗೂ 6 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಲಭ್ಯವಿದೆ.