ನವದೆಹಲಿ(ಫೆ.02): ಭಾರತದಲ್ಲಿ SUV ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪೈಪೋಟಿ ಜೋರಾಗಿದೆ. ಪ್ರತಿ ಆಟೋಮೊಬೈಲ್ ಕಂಪನಿಗಳು ಹೊಸ ಹೊಸ SUV ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ವೋಕ್ಸ್‌ವ್ಯಾಗನ್ ಸರದಿ. ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ವೋಕ್ಸ್‌ವ್ಯಾಗನ್ AO ಕಾರು ಸೋಮವಾರ(ಫೆ.03) ಬಿಡುಗಡೆಯಾಗುತ್ತಿದೆ. 

ಇದನ್ನೂ ಓದಿ: ಮಹತ್ತರ ಬದಲಾವಣೆಯೊಂದಿಗೆ ಬರುತ್ತಿದೆ ಹ್ಯುಂಡೈ ಕ್ರೆಟಾ ಕಾರು!

ವೋಕ್ಸ್‌ವ್ಯಾಗನ್ AO ಕಾರು  2,651mm ವೀಲ್ಹ್‌ಬೇಸ್ ಹೊಂದಿದೆ.  ನೂತನ ಕಾರು 2 ಪೆಟ್ರೋಲ್ ಎಂಜಿನ್ ವೇರಿಯೆಂಟ್‌ನಲ್ಲಿ ಬಿಡುಗಡೆಯಾಗವ ಸಾಧ್ಯತೆ ಇದೆ.  1.0 ಲೀಟರ್, 3 ಸಿಲಿಂಡರ್, ಟರ್ಬೋಚಾರ್ಜ್ಡಡ್ ಎಂಜಿನ್, 115bhp ಪವರ್ ಹೊಂದಿದೆ. ಇನ್ನು 1.5-ಲೀಟಪ್ EVO TSI ಎಂಜಿನ್ ವೇರಿಯೆಂಟ್ ಬಿಡುಗಡೆಯಾಗುವ ಸಾಧ್ಯತೆ ಇದೆ.  6 ಮ್ಯಾನ್ಯುಯೆಲ್ ಹಾಗೂ 7 ಸ್ಪೀಡ್ ಡ್ಯುಯೆಲ್ ಕ್ಲಚ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

ಇದನ್ನೂ ಓದಿ: BS6 ಹೊಂಡಾ ಅಮೇಜ್ ಬಿಡುಗಡೆ; ಬೆಲೆ 6.10 ಲಕ್ಷ ರೂ!

ಹೆಚ್ಚು ಆಕರ್ಷಕ ಹಾಗೂ ಬಲಿಷ್ಠ SUV ಕಾರು ಇದಾಗಿದ್ದು, ಗ್ರಾಹಕರಿಗೆ ಆರಾಮದಾಯದ ಪ್ರಯಾಣ ನೀಡಲಿದೆ ಎಂದು ಕಂಪನಿ ಹೇಳಿದೆ. ನೂತನ SUV ಜೊತೆಗೆ ವೋಕ್ಸ್‌ವ್ಯಾಗನ್ ಟಿಗ್ವಾನ್ ಅಪ್‌ಗ್ರೇಡ್ ಸೇರಿದಂತೆ 4 ಕಾರುಗಳನ್ನು ನವದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ಪೋದಲ್ಲಿ ಅನಾವರಣ ಮಾಡಲಾಗುತ್ತಿದೆ.