ನವದೆಹಲಿ(ಜ.29): ಹೊಂಡಾ ಅಮೇಜ್ ಡೀಸೆಲ್ ಹಾಗೂ ಪೆಟ್ರೋಲ್ ಕಾರು  BS6 ಎಂಜಿನ್ ಅಪ್‌ಗ್ರೇಡ್ ಆಗಿದೆ. ನೂತನ ಪೆಟ್ರೋಲ್ ಎಂಜಿನ್ ಕಾರಿನ ಬೆಲೆ 15,000 ರೂಪಾಯಿ ಹೆಚ್ಚಳವಾಗಿದ್ದರೆ, ಡೀಸೆಲ್ ಕಾರಿನ ಬೆಲ 50, 000 ರೂಪಾಯಿ ಹೆಚ್ಚಾಗಿದೆ. BS6 ಎಂಜಿನ್ ಅಮೇಜ್ ಕಾರಿನ ಬೆಲೆ 6.10 ಲಕ್ಷ ರೂಪಾಯಿಯಿಂದ ಆರಂಭವಾಗುತ್ತಿದ್ದು, ಟಾಪ್ ಮಾಡೆಲ್ ಬೆಲೆ 9.96 ಲಕ್ಷ  ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: 30 ನಿಮಿಷ ಚಾರ್ಜ್, 201 ಕಿ.ಮಿ ಮೈಲೇಜ್- ಬರುತ್ತಿದೆ ಹೊಂಡಾ ಜಾಝ್ ಎಲೆಕ್ಟ್ರಿಕ್ ಕಾರು!.

ಹೊಂಡಾ ಅಮೇಜ್ BS6 ಎಂಜಿನ್ ಕಾರು 1.2 ಲೀಟರ್, i-VTEC ಪೆಟ್ರೋಲ ಎಂಜಿನ್ ಹೊಂದಿದ್ದು,   90 PS  ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  5- ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹಾಗೂ  CVT ಆಯ್ಕೆ ಲಭ್ಯವಿದೆ.   BS6 1.5-ಲೀಟರ್ i-DTEC ಡೀಸೆಲ್ ಎಂಜಿನ್ ಕಾರು,  100 PS ಪವರ್ ಹಾಗೂ 200 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  

ಇದನ್ನೂ ಓದಿ: ಆಕರ್ಷಕ ಲುಕ್ ಹಾಗೂ ವಿನ್ಯಾಸ, ಹೊಸ ಅವತಾರದಲ್ಲಿ ಹೊಂಡಾ ಜಾಝ್!

ಅಮೇಜ್ ಕಾರು, ಮಾರುತಿ ಸುಜುಕಿ, ಫೋರ್ಡ್ ಆಸ್ಪೈರ್, ಹ್ಯುಂಡೈ ಔರಾ ಸೇರಿದಂತೆ ಸೆಡಾನ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.  ನೂತನ ಕಾರಿನ ಬೆಲ ಪಟ್ಟಿ ಇಲ್ಲಿದೆ.

ಅಮೇಜ್ ಪೆಟ್ರೋಲ್ BS6
ಹೊಂಡಾ ಅಮೇಜ್ E MT -  6.10 ಲಕ್ಷ ರೂಪಾಯಿ
ಹೊಂಡಾ ಅಮೇಜ್ S MT - 6.82 ಲಕ್ಷ ರೂಪಾಯಿ
ಹೊಂಡಾ ಅಮೇಜ್ V MT - 7.45 ಲಕ್ಷ ರೂಪಾಯಿ
ಹೊಂಡಾ ಅಮೇಜ್ VX MT - 7.93 ಲಕ್ಷ ರೂಪಾಯಿ
ಹೊಂಡಾ ಅಮೇಜ್ S CVT -  7.72 ಲಕ್ಷ ರೂಪಾಯಿ
ಹೊಂಡಾ ಅಮೇಜ್ V CVT - 8.35 ಲಕ್ಷ ರೂಪಾಯಿ
ಹೊಂಡಾ ಅಮೇಜ್ VX CVT - 8.76 ಲಕ್ಷ ರೂಪಾಯಿ

ಅಮೇಜ್ ಡೀಸೆಲ್ BS6
ಹೊಂಡಾ ಅಮೇಜ್ E MT - 7.56 ಲಕ್ಷ ರೂಪಾಯಿ
ಹೊಂಡಾ ಅಮೇಜ್ S MT - 8.12 ಲಕ್ಷ ರೂಪಾಯಿ
ಹೊಂಡಾ ಅಮೇಜ್ V MT - 8.75 ಲಕ್ಷ ರೂಪಾಯಿ
ಹೊಂಡಾ ಅಮೇಜ್ VX MT 9.23 ಲಕ್ಷ ರೂಪಾಯಿ
ಹೊಂಡಾ ಅಮೇಜ್ S CVT - 8.92 ಲಕ್ಷ ರೂಪಾಯಿ
ಹೊಂಡಾ ಅಮೇಜ್ V CVT -9.55 ಲಕ್ಷ ರೂಪಾಯಿ
ಹೊಂಡಾ ಅಮೇಜ್ VX CVT -9.96 lakh