ಬೆಂಗಳೂರು(ಫೆ.26): ಕರ್ನಾಟಕದ ಮೊಟ್ಟ ಮೊದಲ ವಿಂಟೇಜ್ ಕಾರು ಪಾರ್ಕ್ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಫೆ.27 ರಂದು  ಬೊಮ್ಮನಹಳ್ಳಿಯಲ್ಲಿ ವಿನೂತ ಪಾರ್ಕ್ ಉದ್ಘಾಟನೆಗೊಳ್ಳಲಿದೆ. ವಿಶೇಷ ಅಂದರೆ ಈ ಪಾರ್ಕ್ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡಿದೆ.

ಇದನ್ನೂ ಓದಿ: ಪಾರ್ಕಿಂಗ್ ದುರಂತ: 158 ಕಾರು ಮಾಲೀಕರಿಗೆ ಸಿಗುತ್ತಿಲ್ಲ ತಮ್ಮ ಕಾರಿನ ಗುರುತು!

ಕಲ್ಲಿನ ಪಾರ್ಕ್ ಮಾಡಲು ಪ್ಲಾನ್ ರೆಡಿ ಮಾಡಿದ್ದ ಬೊಮ್ಮನಹಳ್ಳಿ ಬಿಬಿಎಂಪಿ ಕಾರ್ಪೋರೇಟರ್ ಸತೀಶ್ ರೆಡ್ಡಿ ಬಳಿಕ ವಿಂಟೇಜ್ ಕಾರು ಪಾರ್ಕ್ ಮಾಡಲು ನಿರ್ಧರಿಸಿದ್ದರು.  ಅನಂತ್ ಕುಮಾರ್ ಕುಮಾರ್ ಸೂಕ್ತ ಸಹಾಯದಿಂದ ಈ ಪಾರ್ಕ್ ಇದೀಗ ಉದ್ಘಾಟನೆಗೊಳ್ಳುತ್ತಿದೆ ಎಂದು ಪಾರ್ಕ್ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಸತೀಶ್ ರೆಡ್ಡಿ ಹೇಳಿದ್ದಾರೆ. 

ವಿಂಟೇಜ್ ಕಾರು ಪಾರ್ಕ್‌ನಲ್ಲಿ ಹಳೇ ಕಾರುಗಳನ್ನ ಇಡಲಾಗಿದೆ. ಜೊತೆಗೆ ಮಕ್ಕಳಿಗೆ ಆಟವಾಡೋ ಹಲವು ಪರಿಕರಗಳನ್ನೂ ಇಡಲಾಗಿದೆ. ಈ ಎಲ್ಲಾ ಕಾರುಗಳ ಒಳಗೆ ಕೂತು ಮಕ್ಕಳು ಆಟವಾಡ ಬಹುದು. 

ಇದನ್ನೂ ಓದಿ: ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?

ವಿನೂತ ವಿಂಟೇಜ್ ಕಾರು ಪಾರ್ಕನ್ನ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಉದ್ಘಾಟಿಸಲಿದ್ದಾರೆ. ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಪಾರ್ಕ್ ನಿರ್ಮಾಣ ಜವಾಬ್ದಾರಿ ಹೊತ್ತ ಸತೀಶ್ ರೆಡ್ಡಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.