Asianet Suvarna News Asianet Suvarna News

ಪಾರ್ಕಿಂಗ್ ದುರಂತ: 158 ಕಾರು ಮಾಲೀಕರಿಗೆ ಸಿಗುತ್ತಿಲ್ಲ ತಮ್ಮ ಕಾರಿನ ಗುರುತು!

ಏರೋ ಇಂಡಿಯಾ ಶೋನ ನಡೆದ ಪಾರ್ಕಿಂಗ್ ದುರಂತದಲ್ಲಿ 277 ಕಾರುಗಳು ಸುಟ್ಟು ಹೋಗಿವೆ.  ಇದರಲ್ಲಿ 113 ಕಾರುಗಳನ್ನ ಮಾಲೀಕರು ಪತ್ತೆ ಹಚ್ಚಿದ್ದರೆ, ಇನ್ನುಳಿದ ಕಾರುಗಳ ಮಾಲೀಕರಿಗೆ ತಮ್ಮ ಕಾರು ಯಾವುದೇ ಎಂದು ಪತ್ತೆ ಹಚ್ಚಲು  ಸಾಧ್ಯವಾಗಿಲ್ಲ.
 

Aero India show Fire 158 car owner not able to identify their vehicle
Author
Bengaluru, First Published Feb 25, 2019, 5:07 PM IST

ಬೆಂಗಳೂರು(ಫೆ.25): ಏರೋ ಇಂಡಿಯಾ ಶೋನ ಬೆಂಕಿ ದುರಂತದಲ್ಲಿ 277 ಕಾರುಗಳು ಬೆಂಕಿಯಲ್ಲಿ ಭಸ್ಮವಾಗಿದೆ.  RTO ಅಧಿಕಾರಿಗಳು, ವಿಮಾ ಕಂಪೆನಿಗಳು, ಕಾರು ಕಂಪೆನಿಗಳು ಸ್ಥಳದಲ್ಲೇ ಸಹಾಯ ಕೇಂದ್ರಗಳನ್ನ ತೆರದು ಮಾಲೀಕರಿಗೆ ನೆರವಾಗುತ್ತಿದ್ದಾರೆ. ಆದರೆ ಇದರ ನಡುವೆ ಬಹುದೊಡ್ಡ ಸಮಸ್ಯೆ ಎದುರಾಗಿದೆ.

ಇದನ್ನೂ ಓದಿ: ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?

ಬೆಂಕಿ ದುರಂತದಲ್ಲಿ 277 ಕಾರುಗಳು ಬೆಂಕಿಯಲ್ಲಿ ಬೆಂದು ಹೋಗಿವೆ. ಇದರಲ್ಲಿ 251 ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿವೆ. 26 ವಾಹನಗಳು ಅರ್ಧ ಹಾಗೂ  ಕೆಲ ಬಿಡಿ ಭಾಗಗಳು ಸುಟ್ಟು ಹೋಗಿವೆ. 277 ವಾಹನಗಳ ಪೈಕಿ 119 ವಾಹನಗಳನ್ನು ಮಾಲೀಕರು ಗುರುತಿಸಿದ್ದಾರೆ. ಆದರೆ  ಉಳಿದ 158 ವಾಹನಗಳ ಮಾಲೀಕರು ತಮ್ಮ ಕಾರು ಯಾವುದು ಎಂದು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. 

Aero India show Fire 158 car owner not able to identify their vehicle

ಇದನ್ನೂ ಓದಿ: ಪಾರ್ಕಿಂಗ್ ಅಗ್ನಿ ಅವಘಡ - ಕಾರು ಮಾಲೀಕರ ನೆರವಿಗೆ ಟೊಯೋಟಾ!

ಯಲಹಂಕ RTO ಅಧಿಕಾರಿಗಳು ಇದೀಗ ಕಾರು ಮಾಲೀಕರ ನೆರವಿಗೆ ಧಾವಿಸಿದ್ದಾರೆ. ಇಷ್ಟೇ ಅಲ್ಲ ಕಾರು ಕಳೆದುಕೊಂಡ ಮಾಲೀಕರು ನೆರವನ್ನ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ. ಕಚೇರಿ ಮುಂಭಾಗದಲ್ಲಿ ಸೂಚನ ಫಲಕ ಅಳವಡಿಸಿ RTO ಅಧಿಕಾರಿಗಳು ಮಾಲೀಕರಿಗೆ ನೆರವು ನೀಡುತ್ತಿದ್ದಾರೆ. ಯಲಹಂಕ ಆರ್.ಟಿ.ಓ ಕಚೇರಿ ಕೆಲ ದಿನಗಳ ಹಿಂದೆಯಷ್ಟೆ ಸ್ಥಳಾಂತರಗೊಂಡಿದೆ. ಹೀಗಾಗಿ ಕೆಲ ಕಾರು ಮಾಲೀಕರು ನೂತನ RTO ಕಚೇರಿ ವಿಳಾಸ ಗೊತ್ತಿಲ್ಲದೆ ಪರದಾಡಿದ್ದಾರೆ. ಹೀಗಾಗಿ ನೂತನ ವಿಳಾಸ ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ರಾಜಧಾನಿ ರಸ್ತೆಯಲ್ಲಿ ಪ್ರತಿ ದಿನ ಓಡಾಡುತ್ತಿದೆ 1.09 ಕೋಟಿ ವಾಹನ !

ಹೆಬ್ಬಾಳ-ಬ್ಯಾಟರಾಯನಪುರ-ಅಳ್ಳಾಸಂದ್ರ-ಯಲಹಂಕ ಎನ್.ಇ.ಎಸ್- ಪುಟ್ಟೇನಹಳ್ಳಿ-ಸಿ.ಆರ್.ಪಿ.ಎಫ್-ಸಿಂಗನಾಯಕನಹಳ್ಳಿ ಯಿಂದ ಎಡ ತಿರುವು - ನೂತನ RTO ಕಚೇರಿ

ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ಸಿಂಗನಾಯಕನಹಳ್ಳಿ ಇಂದ ಎಡ ತಿರುವು ಪಡೆದು 2.5 km  ಬರಬೇಕು -ನೂತನ RTO ಕಚೇರಿ
 

Follow Us:
Download App:
  • android
  • ios