ನವದೆಹಲಿ(ಮೇ.02): ಬ್ರಿಟೀಷ್  ಮೂಲದ MG ಮೋಟಾರ್ಸ್ ಭಾರತಕ್ಕೆ ಕಾಲಿಟ್ಟಿದೆ. ಇದೀಗ ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಪ್ರತಿಸ್ಪರ್ಧಿಯಾಗಿ MG ಹೆಕ್ಟರ್ SUV ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಮೇ. 15 ರಂದು MG ಹೆಕ್ಟರ್ ಕಾರು ಭಾರತದಲ್ಲಿ ಅನಾವರಣಗೊಳ್ಳಲಿದೆ. ಅತ್ಯಾಧುನಿಕ ತಂತ್ರಜ್ಞಾನ ಈ ಕಾರಿನ ವಿಶೇಷತೆ.

ಇದನ್ನೂ ಓದಿ: 21 ಸಾವಿರಕ್ಕೆ ಬುಕ್ ಮಾಡಿ ನೂತನ ಹ್ಯುಂಡೈ ವೆನ್ಯೂ!

ಕಾರಿನ ಡೋರ್, ವಿಂಡೋ, ಎಸಿ ಸೇರಿದಂತೆ ಯಾವುದೇ ಸ್ವಿಚ್ ಆನ್ ಮಾಡಲು ಹೇಳಿದರೆ ಸಾಕು, ನಾವು ಕೈಯಿಂದ ಮಾಡಬೇಕಂತಿಲ್ಲ. ಆಧುನಿಕ ತಂತ್ರಜ್ಞಾನ ನಿಮ್ಮ ಮಾತನ್ನು ಕೇಳಿಸಿಕೊಂಡು ಕಾರ್ಯನಿರ್ವಹಿಸುತ್ತದೆ. ಹಲೋ MG ಎಂದು ಹೇಳಿ ಬಳಿಕ ಎಸಿ ಆನ್ ಅಥವಾ ಆಫ್ ಅಂದರೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಮಾರುತಿ ಸುಜುಕಿ ಎರ್ಟಿಗಾ 1.5 L ಡೀಸೆಲ್ ಕಾರು ಬಿಡುಗಡೆ!

ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೂ ಯಾವುದೇ ಸಮಸ್ಯೆ ಇಲ್ಲ. ಕಾರಣ ನೀವು ಕಾರಿನ ಜೊತೆ ಮಾತನಾಡುತ್ತಾ ಸಾಗಬಹುದು. ಸಾಗುವ ರಸ್ತೆಯ ಮಾಹಿತಿ, ಟ್ರಾಫಿಕ್ ಜಾಮ್, ಪಾರ್ಕಿಂಗ್, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳಬಹುದು. ಇಂತಹ ತಂತ್ರಜ್ಞಾನದ ಕಾರು ಇದೀಗ ಭಾರತದಲ್ಲಿ ಬಿಡುಗಡೆಯಾಗುತ್ತಿದೆ

ಇದನ್ನೂ ಓದಿ: ಮಾರುತಿ ಬಲೆನೊ ಕಾರಿನ ಬೆಲೆ ಹೆಚ್ಚಳ- ಇಲ್ಲಿದೆ ನೂತರ ದರ!

MG ಹೆಕ್ಟರ್ ಕಾರು ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 1.5 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 2.0 ಲೀಟರ್ FCA ಡೀಸೆಲ್ ಎಂಜಿನ್ ಕಾರು ಲಭ್ಯವಿದೆ. ನೂತನ ಕಾರಿನ ಬೆಲೆ 15 ರಿಂದ 20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.