ನವದಹೆಲಿ(ಏ.28): ಮಾರುತಿ ಸುಜುಕಿ ಬಲೆನೊ ಕಾರು ಮಾರಾಟದಲ್ಲಿ ದಾಖಲೆ ಬರೆದಿದೆ. ಹ್ಯಾಚ್‌ಬ್ಯಾಕ್ ಕಾರು ವಿಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಬಲೆನೊ ಕಾರಿನ ಬೆಲೆ ಹೆಚ್ಚಳವಾಗಿದೆ. ಮಾರುತಿ ಬಲೆನೊ ಡೀಸೆಲ್ ಹಾಗೂ ಬಲೆನೋ RS ಕಾರಿನ ಬೆಲೆ ಹೆಚ್ಚಳ ಮಾಡಲಾಗಿದೆ. ಗರಿಷ್ಠ 20,000 ರೂಪಾಯಿ ಹೆಚ್ಚಳವಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಟೊಯೊಟಾ ಘಟಕದಲ್ಲಿ ಮಾರುತಿ ಬ್ರೆಜಾ ಕಾರು ಉತ್ಪಾದನೆ!

ಮಾರುತಿ ಬಲೆನೋ RS ಕಾರಿನ ಬೆಲೆ 12,000 ರೂಪಾಯಿ ಹೆಚ್ಚಳವಾಗಿದೆ. ಹೀಗಾಗಿ RS ಕಾರಿನ ನೂತನ ಬೆಲೆ 8.76 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನ ಬಲೆನೆ ಬೇಸ್ ಮಾಡಲೆ ಸಿಗ್ಮಾ ಡೀಸೆಲ್ ಕಾರಿನ ಬೆಲೆ 13,300 ರೂಪಾಯಿ ಹೆಚ್ಚಳವಾಗಿದೆ. ಹೀಗಾಗಿ 6.61 ಲಕ್ಷ ರೂಪಾಯಿ ಇದ್ದ ಬಲೆನೊ ಸಿಗ್ಮಾ ಡೀಸೆಲ್ ಇದೀಗ 6.71 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆಗಿದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಕಾರಿನ AC ಎಫೆಕ್ಟೀವ್ ಮಾಡಲು ಇಲ್ಲಿದೆ 5 ಸರಳ ಟಿಪ್ಸ್!

ಬೆಲನೊ ಡೆಲ್ಟಾ ಡೀಸೆಲ್ ಕಾರಿನ ಬೆಲೆ 19,000 ರೂಪಾಯಿ ಹೆಚ್ಚಳವಾಗಿದೆ. 7.32 ಲಕ್ಷ ರೂಪಾಯಿ ಇದ್ದ ಬಲೆನೊ ಡೆಲ್ಟಾ ಕಾರು ಇದೀಗ 7.51 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆಗಿದೆ. ಇನ್ನೂ ಝಿಟಾ ಹಾಗೂ ಆಲ್ಫಾ ವೇರಿಯೆಂಟ್ ಕಾರಿನ ಬೆಲೆಯಲ್ಲಿ 12,300 ಹಾಗೂ 12,900 ರೂಪಾಯಿ ಹೆಚ್ಚಳವಾಗಿದೆ. ಝಿಟಾ ನೂತನ ಬೆಲೆ 8.13 ಲಕ್ಷ ಹಾಗೂ ಆಲ್ಫಾ ನೂತನ ಬೆಲೆ 8.73 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಆಗಿದೆ.