Asianet Suvarna News Asianet Suvarna News

21 ಸಾವಿರಕ್ಕೆ ಬುಕ್ ಮಾಡಿ ನೂತನ ಹ್ಯುಂಡೈ ವೆನ್ಯೂ!

ಹ್ಯಂಡೈ ನೂತನ ವೆನ್ಯೂ ಕಾರಿನ ಬುಕಿಂಗ್ ಆರಂಭಗೊಂಡಿದೆ. ಮಾರುತಿ ಬ್ರೆಜಾ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಈ ಕಾರು ಹೊಸ ಸಂಚಲನ ಮೂಡಿಸಲಿದೆ. ಇಲ್ಲಿದೆ ಬುಕಿಂಗ್ ಹಾಗೂ ಕಾರಿನ ಮಾಹಿತಿ.

Maruti brezza competitor Hyundai venue car booking opens
Author
Bengaluru, First Published May 2, 2019, 4:46 PM IST

ನವದೆಹಲಿ(ಮೇ.02): ಹ್ಯುಂಡೈ ಕಂಪನಿಯ ನೂತನ ವೆನ್ಯೂ ಸಬ್‌ ಕಾಂಪಾಕ್ಟ್ SUV ಕಾರು ಮೇ.21ಕ್ಕೆ ಬಿಡುಗಡೆಯಾಗಲಿದೆ. ಆಕರ್ಷಕ ಲುಕ್, ಬಲಿಷ್ಠ ಎಂಜಿನ್ ಹೊಂದಿರುವ ವೆನ್ಯುೂ ಕಾರು ಮಾರುತಿ ಬ್ರಿಜಾ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಸೇರಿದಂತೆ SUV ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ. ಇದೀಗ ನೂತನ ವೆನ್ಯೂ ಕಾರಿನ ಬುಕಿಂಗ್ ಆರಂಭಗೊಂಡಿದೆ. 

ಇದನ್ನೂ ಓದಿ: ಹ್ಯುಂಡೈ ವೆನ್ಯು to ಟಾಟಾ ಅಲ್ಟ್ರೋಜ್- ಬಿಡುಗಡೆಯಾಗಲಿದೆ ಟಾಪ್ 5 ಕಾರು!

ಅನ್‌ಲೈನ್ ಮೂಲಕ ಹ್ಯುಂಡೈ ವೆನ್ಯೂ ಕಾರಿನ ಬುಕಿಂಗ್ ಆರಂಭಗೊಂಡಿದೆ. 21,000 ರೂಪಾಯಿ ನೀಡಿದ ಆಕರ್ಷಕ ವೆನ್ಯೂ ಕಾರನ್ನು ಬುಕ್ ಮಾಡಿಕೊಳ್ಳಬಹುದು. ಕಂಪನಿ ವೆಬ್‌ಸೈಟ್ ಹಾಗೂ ಎಲ್ಲಾ ಡೀಲರ್‌ಶಿಪ್ ಬಳಿ ನೂತನ ಕಾರನ್ನು ಬುಕ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ನೂತನ್ ಹ್ಯುಂಡೈ ವೆನ್ಯೂ ಕಾರು, ಈ ಹಿಂದಿನ ಹ್ಯುಂಡೈ ಕಾರುಗಳಿಗಿಂತ ಭಿನ್ನವಾಗಿದೆ. ಹೊಸ ವಿನ್ಯಾಸ, ಮುಂಭಾಗದ ಗ್ರಿಲ್, ಕ್ರೋಮ್ ಲೈನ್ ಮೆಶ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.  ನೂತನ ಕಾರಿನ ಬೆಲೆ 8 ರಿಂದ 12 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ 1 ಲಕ್ಷ ರೂ ಸಬ್ಸಿಡಿ ಘೋಷಿಸಿದ ಸರ್ಕಾರ!

ಹ್ಯುಂಡೈ  ವೆನ್ಯೂ ಕಾರಿನಲ್ಲಿ 3 ವೇರಿಯೆಂಟ್‌ಗಳು ಲಭ್ಯವಿದೆ. 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಪೆಟ್ರೋಲ್ ಟರ್ಬೋ ಹಾಗೂ 1.4 ಲೀಟರ್ ಡೀಸೆಲ್ ವೇರಿಯೆಂಟ್ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಕಾರು 83hp ಪವರ್ ಹಾಗೂ 115Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಇನ್ನು  1.0-ಲೀಟರ್ ಪೆಟ್ರೋಲ್ ಕಾರು, 2 ಸಿಲಿಂಡರ್, ಡೈರೆಕ್ಟ್ ಇಂಜೆಕ್ಷನ್ ಟರ್ಬೋ ಹೊಂದಿದ್ದು, 120hp ಪವರ್ ಹಾಗೂ 172Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು  1.4  ಡೀಸೆಲ್  ಕಾರು 90hp ಪವರ್ 220Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

Follow Us:
Download App:
  • android
  • ios