ಭಾರತದಲ್ಲಿ ಹೆಚ್ಚು ಆಕರ್ಷಣೆಯಾಗಿರುವ ಜೀಪ್ ಕಂಪಾಸ್ ಇದೀಗ ಬರೋಬ್ಬರಿ 1 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಆಫರ್ ಕೆಲ ದಿನಗಳು ಮಾತ್ರ. ಇಲ್ಲಿದೆ ಹೆಚ್ಚಿನ ವಿವರ.

ಮುಂಬೈ(ನ.22): ಭಾರತದಲ್ಲಿ ಅತೀ ಕಡಿಮೆ ಅವಧಿಯಲ್ಲಿ SUV ಕಾರು ಸೆಗ್ಮೆಂಟ್‌ನಲ್ಲಿ ಜನಮನ್ನಣೆಗಳಿಸಿದ ಜೀಪ್ ಕಂಪಾಸ್ ಕಾರುಗಳ ಮೇಲೆ ಬರೋಬ್ಬರಿ 1 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಆಫರ್ ನವೆಂಬರ್ 30 ರ ವರೆಗೆ ಮಾತ್ರ ಅನ್ವಯವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್‌ನ್ನ ವಿಂಗಡಿಸಲಾಗಿದೆ. ಹಳೇ ಕಾರು ಎಕ್ಸ್‌ಚೇಂಜ್ ಬೋನಸ್ 50,000 ರೂಪಾಯಿ ನೀಡಲಾಗಿದೆ. ಇನ್ನು ಕೆಲ ಡೀಲರ್‌ಗಳು 25,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದ್ದಾರೆ. ಇನ್ನು ಕಾರ್ಪೊರೇಟರ್ ಡಿಸ್ಕೌಂಟ್ 15,000 ರೂಪಾಯಿ ಸೇರಿದಂತೆ ಒಟ್ಟು 1 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಪೆಟ್ರೋಲ್ ವೇರಿಯೆಂಟ್ ಜೀಪ್ ಕಾಂಪಾಸ್‌ಗಿಂತ ಡೀಸೆಲ್ ವೇರಿಯೆಂಟ್ ಕಾರಿಗೆ ಹೆಚ್ಚಿನ ಡಿಸ್ಕೌಂಟ್ ಸಿಗಲಿದೆ. 15-25 ಲಕ್ಷ ರೂಪಾಯಿಯ ಜೀಂಪ್ ಕಂಪಾಸ್ ಕಾರು ಇತ್ತೀಚೆಗೆ ಇತರ ಬ್ರ್ಯಾಂಡ್ ಕಾರುಗಳಿಂದ ಭಾರಿ ಪೈಪೋಟಿ ಎದುರಿಸುತ್ತಿದೆ.