ಮುಂಬೈ(ಜ.12): ಜಾವಾ ಪೆರಾಕ್ ಬೊಬ್ಬರ್ ಮೋಟಾರ್ ಬೈಕ್‌ನತ್ತ ಎಲ್ಲರೂ ಚಿತ್ತ ಹರಿಸಿದ್ದಾರೆ. ಜನವರಿ 1 ರಿಂದ ಪೆರಾಕ್ ಬೈಕ್ ಬುಕಿಂಗ್ ಆರಂಭಗೊಂಡಿದೆ. ಎಪ್ರಿಲ್ 1 ರಿಂದ ಬುಕ್ ಮಾಡಿದ ಗ್ರಾಹಕರಿಗೆ ಬೈಕ್ ಡೆಲಿವರಿಯಾಗಲಿದೆ. ಇದೀಗ ಬೈಕ್ ಖರೀದಿಸಲು ಬಯಸುವ ಗ್ರಾಹಕರಿಗೆ ಮತ್ತೊಂದು ಭರ್ಜರಿ ಆಫರ್ ಘೋಷಿಸಿದೆ.

ಇದನ್ನೂ ಓದಿ: 10 ಸಾವಿರ ರೂಗೆ ಬುಕ್ ಮಾಡಿ ಜಾವಾ ಪೆರಾಕ್ ಬೈಕ್!

ಪೆರಾಕ್ ಬೈಕ್ ಬುಕ್ ಮಾಡಲು ಬಯಸುವವರು ಮುಂಗಡ ಹಣ ಹೊಂದಿಸುವ ಚಿಂತೆ ಇಲ್ಲ. ಯಾವುದೇ ಡೌನ್‌ಪೇಮೆಂಟ್ ಇಲ್ಲದೆ ಬೈಕ್ ಖರೀದಿಸುವ ಅವಾಕಾಶವಿದೆ. ಪ್ರತಿ ತಿಂಗಳಿಗೆ 6,666 ಕಂತು ಪಾವತಿಸುವ ಯೋಜನೆಯಲ್ಲಿ ಝೀರೋ ಡೌನ್‌ಪೇಮೆಂಟ್ ಮೂಲಕ ಪೆರಾಕ್ ಬೈಕ್ ಖರೀದಿಸಬಹುದು.

ಇದನ್ನೂ ಓದಿ: ಜಾವಾ ಪೆರಾಕ್ ಬೈಕ್ ಬುಕಿಂಗ್ ದಿನಾಂಕ ಬಹಿರಂಗ!

ಜಾವಾ ಪೆರಾಕ್ ಬೈಕ್ ಬೆಲೆ 1.94 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಮೊದಲು ಬುಕ್ ಮಾಡಿದವರಿಗೆ ಆದ್ಯತೆ ಸಿಗಲಿದೆ. ಬುಕಿಂಗ್ ಕೆಲ ತಿಂಗಳುಗಳಿಗೆ ಸೀಮಿತಗೊಳಿಸಲಾಗಿದೆ. ಜಾವಾ ಕ್ಲಾಸಿಕ್ ಹಾಗೂ ಜಾವಾ 42 ಬೈಕ್ ಬಿಡುಗಡೆಯಾದ ಬಳಿಕ ಡೆಲಿವರಿ ವಿಳಂಬವಾಗಿತ್ತು. ಹೀಗಾಗಿ ಈ ತಪ್ಪು ಆಗದಂತೆ ಜಾವಾ ಎಚ್ಚರಿಕೆ ವಹಿಸಿದೆ. 

ಹೆಚ್ಚು ಆಕರ್ಷಕ, ಹಲವು ವಿಶೇಷತೆ; ಜಾವಾ ಪೆರಾಕ್ ಬೈಕ್ ಬಿಡುಗಡೆ!

ಜಾವಾ ಪೆರಾಕ್ ಬೈಕ್ BS6 ಎಂಜಿನ್ ಹೊಂದಿದೆ.   334cc ಎಂಜಿನ್,  30bhp ಪವರ್ ಹಾಗೂ   31Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಬೆನೆಲಿ, ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿಯಾಗಿರುವ ಜಾವಾ ಹೊಸ ಆಫರ್ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಸೂಚನೆ: ನೂತನ ಆಫರ್, ನಗರದಿಂದ ನಗರಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆಯಾಗುವ ಸಾಧ್ಯತೆ ಇದೆ. ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಕುರಿತು ವಿಚಾರಿಸಿ ಬುಕ್ ಮಾಡಿ