Asianet Suvarna News Asianet Suvarna News

ಜಾವಾ ಪೆರಾಕ್ ಬೈಕ್ ಬುಕಿಂಗ್ ದಿನಾಂಕ ಬಹಿರಂಗ!

ಜಾವಾ ಪೆರಾಕ್ ಬೈಕ್‌ಗಾಗಿ ಕಾಯುತ್ತಿರುವ ಗ್ರಾಹಕರಿಗೆ ಗುಡ್ ನ್ಯೂಸ್. ಹೊಸ ವರ್ಷದಲ್ಲಿ ಬೈಕ್ ಗ್ರಾಹಕರ ಕೈಸೇರುವುದು ಖಚಿತ. ಕಾರಣ ಜಾವಾ ಮೋಟಾರ್‌ಸೈಕಲ್ ಪೆರಾಕ್ ಬುಕಿಂಗ್ ದಿನಾಂಕ ಬಹಿರಂಗ ಪಡಿಸಿದೆ. ಪೆರಾಕ್ ಬೈಕ್ ಬೆಲೆ, ವಿಶೇಷತೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Jawa perak bobber bike bookings to begins in January 2020 on wards
Author
Bengaluru, First Published Dec 30, 2019, 6:41 PM IST
  • Facebook
  • Twitter
  • Whatsapp

ನವದೆಹಲಿ(ಡಿ.30): ಬೈಕ್ ಪ್ರಿಯರು ಇದೀಗ ಹೊಸ ವರ್ಷಕ್ಕೆ ಕಾಯುತ್ತಿದ್ದಾರೆ. ಕಾರಣ ಹೊಸ ವರ್ಷದಲ್ಲಿ ಹಲವು ಬೈಕ್‌ಗಳು ಬಿಡುಗಡೆಯಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಜಾವಾ ಪೆರಾಕ್ ಬೊಬರ್ ಬೈಕ್. 2018ರ ನವೆಂಬರ್‌ನಲ್ಲಿ ಅನಾವರಣಗೊಂಡಿದ್ದ, ಪೆರಾಕ್, 2019ರ ನವೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಇದೀಗ 2020ರ ಜನವರಿ ಆರಂಭದಿಂದ ಪೆರಾಕ್ ಬುಕಿಂಗ್ ಆರಂಭಗೊಳ್ಳಲಿದೆ.

Jawa perak bobber bike bookings to begins in January 2020 on wards

ಇದನ್ನೂ ಓದಿ: ಹೆಚ್ಚು ಆಕರ್ಷಕ, ಹಲವು ವಿಶೇಷತೆ; ಜಾವಾ ಪೆರಾಕ್ ಬೈಕ್ ಬಿಡುಗಡೆ!.

ಜಾವಾ ಬೈಕ್ ಬುಕಿಂಗ್ ಹಾಗೂ ಡೆಲಿವರಿಯಲ್ಲಿ ಮಾಡಿದ ತಪ್ಪುಗಳನ್ನು ಪೆರಾಕ್ ಬೈಕ್‌ನಲ್ಲಿ ಮಾಡದಂತೆ ಜಾವಾ ಎಚ್ಚರವಹಿಸಿದೆ. ಪೆರಾಕ್ ಬೈಕ್ ಡೆಲಿವರಿ ಎಪ್ರಿಲ್‌ನಿಂದ ಆರಂಭಗೊಳ್ಳಲಿದೆ. ಕಾರಣ ಈಗಾಗಲೇ ಜಾವಾ ಬೈಕ್ ಬುಕಿಂಗ್ ಮಾಡಿದ ಗ್ರಾಹಕರ ಬೇಡಿಕೆ ಪೂರೈಕೆಯಾದ ಬಳಿಕ ಪೆರಾಕ್ ಡೆಲಿವರಿಯಾಗಲಿದೆ. ಪೆರಾಕ್ ಬೈಕ್ ಬುಕ್ ಮಾಡುವವರು ಹೆಚ್ಚಿನ ಸಮಯ ಕಾಯಬೇಕಾದ ಅವಶ್ಯಕತೆ ಇಲ್ಲ ಎಂದು ಜಾವಾ ಸ್ಪಷ್ಟಪಡಿಸಿದೆ.

Jawa perak bobber bike bookings to begins in January 2020 on wards

ಇದನ್ನೂ ಓದಿ: ಜಾವಾ- ಜಾವಾ 42 ಬೈಕ್ ಮೈಲೇಜ್ ಬಹಿರಂಗ!

ಜಾವಾ ಪೆರಾಕ್ ಬೈಕ್ ಬೆಲೆ 1.94 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ). ಬೊಬರ್ ಬೈಕ್ ಪೈಕಿ ಕಡಿಮೆ ಬೆಲೆ ಬೈಕ್ ಅನ್ನೋ ಹೆಗ್ಗಳಿಕೆಗೆ ಪೆರಾಕ್ ಪಾತ್ರವಾಗಿದೆ. 334 cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು,  30 bhp ಪವರ್ ಹಾಗೂ  31 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

Jawa perak bobber bike bookings to begins in January 2020 on wards 

ಪೆರಾಕ್ ಬೈಕ್ ಡ್ಯುಯೆಲ್ ಚಾನೆಲ್ ABS ಬ್ರೇಕ್ ಹೊಂದಿದೆ. ಮುಂಭಾಗದಲ್ಲಿ ಟಿಲಿಸ್ಕೋಪಿಕ್ ಫೊರ್ಕ್ , ಹಿಂಭಾಗದಲ್ಲಿ 7 ವಿಧಾನದ ಮೂಲಕ ಸರಿಹೊಂದಿಸಬಲ್ಲ ಮೊನೊಶಾಕ್ ಹೊಂದಿದೆ. ಬೈಕ್ ತೂಕ 179 ಕೆಜಿ ಇದ್ದು, ನಗರದ ಟ್ರಾಫಿಕ್‌ನಲ್ಲೂ ಸುಲಭವಾಗಿ ರೈಡ್ ಮಾಡಬುಹುದು.
 

Follow Us:
Download App:
  • android
  • ios