ಮುಂಬೈ(ಅ.06): ಜಾವಾ ಮೋಟರ್ ಬೈಕ್ ಭಾರತದಲ್ಲಿ ಮತ್ತೆ ಹೊಸ ಶಕೆ ಆರಂಭಿಸಿದೆ. 2018ರಲ್ಲಿ ಬಿಡುಗಡೆಯಾದ ಜಾವಾ ಮೋಟಾರ್ ಬೈಕ್ ದಾಖಲೆಯ ಬುಕಿಂಗ್ ಹಾಗೂ ಮಾರಾಚ ಕಂಡಿದೆ. ಇದೀಗ ಜಾವಾ ಹೊಸ 3 ಬೈಕ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ನವೆಂಬರ್ 15 ರಂದು ಹೊಸ 3 ಬೈಕ್‌ಗಳ ಕುರಿತು ಜಾವಾ ಮಾಹಿತಿ ಬಹಿರಂಗ ಮಾಡಲಿದೆ.

ಇದನ್ನೂ ಓದಿ: ಜಾವಾ ಪೆರಾಕ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಕಳೆದ ವರ್ಷ ಜಾವಾ ಕ್ಲಾಸಿಕ್ 300 ಹಾಗೂ ಜಾವಾ 42 ಬೈಕ್ ಬಿಡುಗಡೆಯಾಗಿತ್ತು. ಇದೇ ವೇಳೆ ಜಾವಾ ಪರೇಕ್ ಬೈಕ್ ಅನಾವರಣ ಮಾಡಲಾಗಿತ್ತು. ಇದೀಗ ಜಾವಾ ಪರೇಕ್ 2019ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಇದನ್ನು ಹೊರತು ಪಡಿಸಿದರೆ ಜಾವಾ ಆಫ್ ರೋಡ್ ಹಾಗೂ ಜಾವಾ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆಯಾಗುವು ಸಾಧ್ಯತೆ ಇದೆ.

ಇದನ್ನೂ ಓದಿ: ಜಾವಾ- ಜಾವಾ 42 ಬೈಕ್ ಮೈಲೇಜ್ ಬಹಿರಂಗ!

2018ರಲ್ಲಿ ಜಾವಾ ಬೈಕ್ ಬಿಡುಗಡೆಗೂ ಮುನ್ನ ಸ್ಕೆಚ್ ರಿಲೀಸ್ ಮಾಡಿತ್ತು. ಇದೀಗ ನವೆಂಬರ್ 15 ರಂದು ನೂತನ ಬೈಕ್ ಕುರಿತು ಸ್ಕೆಚ್ ಹಾಗೂ ಎಂಜಿನ್ ಮಾಹಿತಿ ಬಹಿರಂಗ ಪಡಿಸಲಿದೆ ಜಾವಾ ಪರೇಕ್ ಬೈಕ್ 334cc ಎಂಜಿನ್ ಹೊಂದಿದ್ದು 30 hp ಪವರ್ ಹಾಗೂ 31 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಜಾವಾ ಮೋಟರ್ ಸೈಕಲ್ ಮೂಲಗಳ ಪ್ರಕಾರ 2021ರಲ್ಲಿ ನೂತನ ಬೈಕ್ ಬಿಡುಗಡೆಯಾಗಲಿದೆ.