ಮುಂಬೈ(ನ.15): ಬರೋಬ್ಬರಿ 22 ವರ್ಷಗಳ ಬಳಿಕ ಜಾವಾ ಮೋಟರ್ ಬೈಕ್ ಭಾರತದಲ್ಲಿ ಮತ್ತೆ ಬಿಡುಗಡೆಯಾಗಿದೆ. ಜಾವಾ ಬೈಕ್ ಎಂದ ತಕ್ಷಣ ಹಲವರಿಗೆ ತಮ್ಮ ಹಳೇ ಕಾಲದ ನೆನಪು ತೆರೆದುಕೊಳ್ಳುತ್ತೆ. ಅದರಲ್ಲೂ ವಿಶೇಷವಾಗಿ ಸಿನಿ ತಾರೆಯರಿಗೆ ಜಾವಾ ಬೈಕ್ ಹಲವು ನೆನಪುಗಳನ್ನ ಕಟ್ಟಿಕೊಟ್ಟಿದೆ. ಕಾರಣ 1950 ರಿಂದ 1996 ವರೆಗೆ ಸಿನಿಮಾ ರಂಗದಲ್ಲಿ ಜಾವಾ ಬೈಕ್ ವಿಶೇಷ ಪಾತ್ರ ವಹಿಸಿದೆ. 

ಇದನ್ನೂ ಓದಿ: ಮತ್ತೆ ರಸ್ತೆಗಿಳಿದ ದಿಗ್ಗಜ-ಜಾವಾ ಮೋಟರ್ ಬೈಕ್ ಬಿಡುಗಡೆ!

ಜಾವಾ ಮೋಟರ್ ಬೈಕ್ ಬಿಡುಗಡೆಯಾದ ಬೆನ್ನಲ್ಲೇ, ಬಾಲಿವುದ್ ಬಾದ್ ಷಾ ಶಾರುಖ್ ಖಾನ್ ತಮ್ಮ ಹೇಳೆ ನನೆಪನ್ನ ಬಿಚ್ಚಿಟ್ಟಿದ್ದಾರೆ. ಈ ಬೈಕ್ ಕಾಲಘಟ್ಟದಲ್ಲೇ ನಾವೆಲ್ಲ ಬೆಳೆದಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. 

 

 

ಶಾರುಖ್ ಖಾನ್ ಅಭಿನಯದ ಕಬಿ ಹಾ, ಕಬಿ ನಾ ಬಾಲಿವುಡ್ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಜಾವಾ  ಮೋಟರ್ ಬೈಕ್ ಬಳಸಿದ್ದಾರೆ. ಇಷ್ಟೇ ಅಲ್ಲ ಈ ಚಿತ್ರಗಳೆಲ್ಲಾ ಸೂಪರ್ ಹಿಟ್ ಆಗಿವೆ. ಹೀಗಾಗಿ ಜಾವಾ ಬೈಕ್‌ಗೂ ಶಾರುಖ್ ಖಾನ್‌ಗೂ ಅವಿನಾಭಾವ ಸಂಬಂಧವಿದೆ.  

ಇದನ್ನೂ ಓದಿ:ಜಾವಾ ಬೈಕ್‌ಗೂ ಉಂಟು ಮೈಸೂರಿನ ನಂಟು!

ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರೋ ಈ ಬೈಕ್ ಜಾವಾ, ಜಾವ 42 ಹಾಗೂ ಜಾವಾ ಪೆರಾಕ್ ಎಂಬ ಮೂರು ಮಾಡೆಲ್‌ಗಳಲ್ಲಿ ಬಿಡುಗಡೆಯಾಗಿದೆ. ಜಾವಾ ಹಾಗೂ ಜಾವಾ 42 ಎರಡೂ ಬೈಕ್ ರೆಟ್ರೋ ಲುಕ್ ಹೊಂದಿದೆ. ಈ ಹಿಂದೆ ಇದ್ದ ಜಾವಾ ಬೈಕ್ ಲುಕನ್ನೇ ನೂತನ ಬೈಕ್ ಹೊಂದಿದೆ. ಎಂಜಿನ್‌ಗಳಲ್ಲೂ ಹೆಚ್ಚಿನ ಬದಲಾವಣೆ ಇಲ್ಲ. 293 ಸಿಸಿ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಲಿಕ್ವಿಡ್ ಕೂಲ್‌ಡ್ ಎಂಜಿನ್ ಹೊಂದಿದೆ.

ಜಾವಾ 42 ಬೈಕ್ ಬೆಲೆ 1.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ), ಜಾವಾ ಬೈಕ್ ಬೆಲೆ 1.64 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ), ಜಾವಾ ಪೆರಾಕ್(ಕಸ್ಟಮೈಸಡ್ ಬಾಬರ್) ಬೈಕ್ ಬೆಲೆ 1.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ).ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಿಡುಗಡೆಯಾಗಿರುವ ನೂತನ ಜಾವಾ ಬೈಕ್‌ಗಳಲ್ಲಿ ಸಿಂಗಲ್ ಚಾನೆಲ್ ಎಬಿಎಸ್(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.