ಮುಂಬೈ(ಡಿ.12): ಐತಿಹಾಸಿಕ ಜಾವಾ ಬೈಕ್ ಬಿಡುಗಡೆಯಾಗಿ ಒಂದು ತಿಂಗಳಾಗಿದೆ. ಇದೀಗ ಗ್ರಾಹಕರ ಕೈ ಸೇರಲು ಜಾವಾ ಬೈಕ್ ಸಿದ್ಧವಾಗಿದೆ. ಬುಕಿಂಗ್ ಮಾಡಿದ ಗ್ರಾಹಕರಿಗೆ ಶೀಘ್ರದಲ್ಲೇ ಜಾವಾ ಬೈಕ್ ಸಿಗಲಿದೆ. ಇನ್ನು ಕೆಲದಿನಗಳಲ್ಲೇ ರಸ್ತೆಗಳಲ್ಲಿ ಜಾವಾ ಸದ್ದು ಮಾಡಲಿದೆ.

ಇದನ್ನೂ ಓದಿ: 5 ಸಾವಿರ ನೀಡಿ ಜಾವಾ ಮೋಟರ್ ಬೈಕ್ ಬುಕ್ ಮಾಡಿ!

ಜಾವಾ ಹಾಗೂ ಜಾವಾ 42 ಬೈಕ್ ಡೆಲಿವರಿಗೆ ಸಿದ್ಧವಾಗಿದೆ. ಡಿಸೆಂಬರ್ 15 ರಂದು ಭಾರತದ ಡೀಲರ್‌ಗಳಿಗೆ ರವಾನೆಯಾಗಲಿದೆ. ಇಷ್ಟೇ ಅಲ್ಲ ಗ್ರಾಹಕರಿಗೂ ತಲುಪಲಿದೆ.  ಸಿದ್ಧವಾಗಿರೋ ಜಾವಾ ಬೈಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಜಾವಾ ಬೈಕ್‌ಗೂ ಉಂಟು ಮೈಸೂರಿನ ನಂಟು!

ಮಹೀಂದ್ರ ಹಾಗೂ ಕ್ಲಾಸಿಕ್ ಲೆಜೆಂಡ್ ಸಹಯೋಗದೊಂದಿಗೆ ಈಗಾಗಲೇ ಜಾವಾ ಮೋಟರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಜಾವಾ 42 ಬೈಕ್ ಬೆಲೆ 1.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ), ಜಾವಾ 300 ಬೈಕ್ ಬೆಲೆ 1.64 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ), ಜಾವಾ ಪೆರಾಕ್(ಕಸ್ಟಮೈಸಡ್ ಬಾಬರ್) ಬೈಕ್ ಬೆಲೆ 1.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ). 

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಜಾವಾ ಬೈಕ್ ಲಾಂಚ್-ಇಲ್ಲಿದೆ ಚಿತ್ರಗಳು!

ಜಾವಾ ಹಾಗೂ ಜಾವಾ 42 ಎರಡೂ ಬೈಕ್ ರೆಟ್ರೋ ಲುಕ್ ಹೊಂದಿದೆ. ಈ ಹಿಂದೆ ಇದ್ದ ಜಾವಾ ಬೈಕ್ ಲುಕನ್ನೇ ನೂತನ ಬೈಕ್ ಹೊಂದಿದೆ. ಎಂಜಿನ್‌ಗಳಲ್ಲೂ ಹೆಚ್ಚಿನ ಬದಲಾವಣೆ ಇಲ್ಲ. 293 ಸಿಸಿ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಲಿಕ್ವಿಡ್ ಕೂಲ್‌ಡ್ ಎಂಜಿನ್ ಹೊಂದಿದೆ.

ಬೋರ್ ಸ್ಟ್ರೋಕ್ 76*65mm, ಕಂಪ್ರೆಶನ್ 11:1, 27bhp ಪೀಕ್ ಪವರ್ ಹಾಗೂ 28nm ಟಾರ್ಕ್ ಉತ್ಪಾದಿಸಲಿದೆ. ಟ್ವಿನ್ ಸೈಲೆನ್ಸರ್ ಹಾಗೂ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇಷ್ಟೇ ಅಲ್ಲ, ನೂತನ BS6 ಎಂಜಿನ್ ಆಗಿರೋದರಿಂದ ಸುಪ್ರೀಂ ಕೋರ್ಟ್ ಎಮಿಶನ್ ನಿಯಮವನ್ನೂ ಜಾವಾ ಪಾಲಿಸಿದೆ.