Asianet Suvarna News Asianet Suvarna News

ದಾಖಲೆ ಬರೆದ ಇಟಾಲ್‌ಜೆಟ್ ಸ್ಕೂಟರ್, ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್!

ಕೆಲ ವಾಹನಗಳು ಬಿಡುಗಡೆಯಾಗುವುದನ್ನೇ ಗ್ರಾಹಕರು ಕಾಯುತ್ತಿರುತ್ತಾರೆ. ಲಾಂಚ್ ಆದ ಬೆನ್ನಲ್ಲೇ ಖರೀದಿಗೆ ಮುಗಿ ಬೀಳುತ್ತಾರೆ. ಇದೀಗ ಇನ್ನು ಲಾಂಚ್ ಆಗೇ ಇಲ್ಲ. ಫೋಟೋ ನೋಡಿಯೇ ಜನ ಸ್ಕೂಟರ್ ಬುಕ್ ಮಾಡಿದ್ದಾರೆ. ಹೀಗಾಗಿ ಲಿಮಿಟೆಡ್ ಎಡಿಶನ್ ಸ್ಕೂಟರ್ ಸೋಲ್ಡ್ ಔಟ್ ಆಗಿದೆ. ಬಿಡುಗಡೆಗೂ ಮುನ್ನ ದಾಖಲೆ ಬರೆದ ಸ್ಕೂಟರ್ ವಿವರ ಇಲ್ಲಿದೆ.

Italian scooter Italjet dragster sold out before launch
Author
Bengaluru, First Published Jun 16, 2020, 5:36 PM IST

ಇಟಲಿ(ಜೂ.16): ಗರಿಷ್ಠ ಮಾರಾಟ ದಾಖಲೆ, ಬಿಡುಗಡೆಯಾದ ಕೆಲ ದಿನಗಳಲ್ಲೇ ಸೋಲ್ಡ್ ಔಟ್..ಈ ರೀತಿ ದಾಖಲೆಗಳನ್ನು ಆಟೋಮೊಬೈಲ್ ಕ್ಷೇತ್ರದಲ್ಲಿ ನೋಡಿದ್ದೇವೆ. ಆದರೆ ಬಿಡುಗಡೆಗೂ ಮುನ್ನವೇ ಸ್ಕೂಟರ್  ಸೋಲ್ಡ್ ಔಟ್ ದಾಖಲೆ ಬರೆದಿದೆ. ಇಟಲಿ ಮೂಲಕ ಇಟಾಲ್‌ಜೆಟ್ ಮೋಟಾರ್ ಡ್ರ್ಯಾಗ್‌ಸ್ಟರ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಕೊರೋನಾ ವೈರಸ್ ಕಾರಣ ಸ್ಕೂಟರ್ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ.ಆದರೆ ಈಗಾಗಲೇ ಸ್ಕೂಟರ್ ಸೋಲ್ಡ್ ಔಟ್ ಆಗಿದೆ.

Italian scooter Italjet dragster sold out before launch

ಆ್ಯಂಪರ್ ಮ್ಯಾಗ್ನಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; 100 ಕಿ.ಮೀ ಮೇಲೈಜ್!

ಇಟಾಲ್‌ಜೆಟ್ ಡ್ರಾಗ್‍ಸ್ಟರ್ ಲಿಮಿಟೆಡ್ ಎಡಿಶನ್ ಸ್ಕೂಟರ್. ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದ ಇಟಾಲ್‌ಜೆಟ್‍‌ಗೆ ಕೊರೋನಾ ವೈರಸ್ ಹೊಡೆತ ನೀಡಿತು. ಇದೀಗ ಸ್ಕೂಟರ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿದೆ. ಆದರೆ ಆನ್‌ಲೈನ್ ಬುಕಿಂಗ್ ಮೂಲಕ ಗ್ರಾಹಕರು ಈಗಾಗಲೇ ಸ್ಕೂಟರ್ ಬುಕಿಂಗ್ ಮಾಡಿಕೊಂಡಿದ್ದಾರೆ.

ಭರ್ಜರಿ ಆಫರ್; 6.7 ಲಕ್ಷ ರೂ. ಡಿಸ್ಕೌಂಟ್ ಘೋಷಿಸಿದ ಇಂಡಿಯನ್ ಮೋಟರ್‌ಸೈಕಲ್!.

ಲಿಮಿಟೆಡ್ ಎಡಿಶನ್ ಸ್ಕೂಟರ್ ಆದ ಕಾರಣ ಕೇವಲ 499 ಸ್ಕೂಟರ್ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ. ಆನ್‌ಲೈನ್ ಬುಕಿಂಗ್ ಆರಂಭವಾದ ಬೆನ್ನಲ್ಲೇ ಗ್ರಾಹಕರು ನೇಕಡ್ ಸ್ಟೈಲ್ ಸ್ಕೂಟರ್ ಬುಕಿಂಗ್ ಮಾಡಿದ್ದಾರೆ. ಇದೀಗ ಎಲ್ಲಾ 499 ಸ್ಕೂಟರ್ ಮಾರಾಟವಾಗಿದೆ. 

Italian scooter Italjet dragster sold out before launch

ಇಟಾಲ್‌ಜೆಟ್ ಸ್ಕೂಟರ್ 125cc ಹಾಗೂ 200cc ಎಂಜಿನ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಬ್ಲಾಕ್, ರೆಡ್ ಹಾಗೂ ವೈಟ್ ಮೂರು ಬಣ್ಣಗಳಲ್ಲಿ ಸ್ಕೂಟರ್  ಬಿಡುಗಡೆಯಾಗಲಿದೆ. ಸಂಪೂರ್ಣ ಭಿನ್ನವಾಗಿರುವ ಈ ಸ್ಕೂಟರ್ ಅತ್ಯಂತ ಆಕರ್ಷಕ ಶೈಲಿ ಹೊಂದಿದೆ. ಕಂಪನಿ ಇದರ ಅಧೀಕೃತ ಬೆಲೆ ಕೂಡ ಬಹಿರಂಗ ಪಡಿಸಿಲ್ಲ. ಅಷ್ಟರಲ್ಲೇ ಗ್ರಾಹಕರು ಬುಕಿಂಗ್ ಮಾಡಿದ್ದಾರೆ.

Follow Us:
Download App:
  • android
  • ios