ಬೆಂಗಳೂರು(ಫೆ.14): ದೇಶದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರೋ ಬೆಂಗಳೂರಿನ ಎದರ್ ಸ್ಕೂಟರ್ ಇದೀಗ ಹೊಸ ಸೇವೆ ಆರಂಭಿಸಿತ್ತಿದೆ. ಹೊಸ ಗ್ರಾಹಕರನ್ನ ಆಕರ್ಷಿಸಲು ಎದರ್ ಎನರ್ಜಿ ಲೀಸ್‌ಗೆ ಸ್ಕೂಟರ್ ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಯೋಜನೆ ಜಾರಿಗೊಳಿಸಿದೆ.

ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!

ಎದರ್ ಎಲೆಕ್ಟ್ರಿಕ್ ಎನರ್ಜಿ ಇದೀಗ ಲೀಸ್‍‌ಗೆ ಸ್ಕೂಟರ್ ನೀಡಲಿದೆ. 13 ತಿಂಗಳು, 25 ತಿಂಗಳು ಹಾಗೂ 36 ತಿಂಗಳ 3 ಸ್ಕೀಮ್‌ಗಳಲ್ಲಿ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಿಗೆ ಲಭ್ಯವಾಗಲಿದೆ. 30,000 ರೂಪಾಯಿ ಪಾವತಿಸಿ 13 ತಿಂಗಳ ಲೀಸ್ ಸ್ಕೀಮ್‌ಗೆ ಗ್ರಾಹಕರು ಸೇರಿಕೊಳ್ಳಬಹುದು.

 

 

ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಯೋಜನೆ- ಎಲೆಕ್ಟ್ರಿಕ್ ವಾಹನಕ್ಕೆ ಸುಲಭ ಸಾಲ!

48,000 ರೂಪಾಯಿ ಮುಂಗಡ ಪಾವತಿಸಿ 25 ತಿಂಗಳ ವರೆಗೆ ಲೀಸ್(ಬಾಡಿಗೆ) ಸ್ಕೂಟರ್ ಪಡೆಯಬಹುದಾಗಿದೆ. ಇನ್ನು 65,000 ರೂಪಾಯಿ ನೀಡಿ 36 ತಿಂಗಳ ಕಾಲ ಲೀಸ್‌ಗೆ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಪಡೆಯಬಹುದು. ಈ ಮೂಲಕ ಹೊಸ ಗ್ರಾಹಕರನ್ನ ಆಕರ್ಷಿಸಿಲು ಸುಲಭ ಪ್ಲಾನ್ ಜಾರಿ ಮಾಡಿದೆ.