ಆ್ಯಂಬುಲೆನ್ಸ್ ಸೈರನ್ ಆಗಿ ಆಕಾಶವಾಣಿ ಟ್ಯೂನ್: ನಿತಿನ್ ಗಡ್ಕರಿ
- ವಾಹನಗಳು ಹಾರ್ನ್ ಮಾಡಿದಾಗ ಉಂಟಾಗುವ ಕರ್ಕಶ ಶಬ್ಧವನ್ನು ತಪ್ಪಿಸಲು ಹಾರ್ನ್ ಗಳಿಗೆ ಶಾಸ್ತ್ರೀಯ ವಾದ್ಯ
- ಆ್ಯಂಬುಲೆನ್ಸ್ ಸೈರನ್ ಆಗಿ ಆಕಾಶವಾಣಿಯ ಟ್ಯೂನ್ ಬಳಕೆ ಬಗ್ಗೆ ಯೋಚನೆ
ನಾಸಿಕ್ (ಅ.08): ವಾಹನಗಳು ಹಾರ್ನ್ (vehicle Horn) ಮಾಡಿದಾಗ ಉಂಟಾಗುವ ಕರ್ಕಶ ಶಬ್ಧವನ್ನು ತಪ್ಪಿಸಲು ಹಾರ್ನ್‌ಗಳಿಗೆ ಶಾಸ್ತ್ರೀಯ ವಾದ್ಯಗಳ ಶಬ್ದ ಬಳಸಲಾಗುವುದು ಎಂದು ಹೇಳಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಆ್ಯಂಬುಲೆನ್ಸ್ ಸೈರನ್ ಆಕಾಶವಾಣಿಯ ಟ್ಯೂನ್ (Akashwani Tune ಬಳಕೆ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಗುರುವಾರ ನಾಸಿಕ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಈ ನಿಯಮ ಜಾರಿಗೆ ಬಂದರೆ ಆ್ಯಂಬುಲೆನ್ಸ್ (Ambulance) ಜಾಗತಿಕವಾಗಿ ಬಳಸಲ್ಪಡುತ್ತಿರುವ ಸೈರನ್‌ಗೆ ಬದಲಾಗಿ ಶಾಸ್ತ್ರೀಯ ಸಂಗೀತ ಕೇಳಿಬರಲಿದೆ.
ಉತ್ತಮ ಹೆದ್ದಾರಿ ಬೇಕಾ? ಟೋಲ್ ಕಟ್ಟಿ: ಟೋಲ್ ವಿರೋಧಕ್ಕೆ ಗಡ್ಕರಿ ಉತ್ತರ
ಹಾರ್ನ್‌ಗಳು ಕರ್ಕಶವಾಗಿದ್ದು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತವೆ. ಹಾಗಾಗಿ ಶಾಸ್ತ್ರೀಯ ಸಂಗೀತ ವಾದ್ಯಗಳ ಶಬ್ಧ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಆ್ಯಂಬುಲೆನ್ಸ್‌ಗಳಲ್ಲಿ ಬಳಸುವ ಸೈರನ್ ಅನ್ನು ಸಹ ಬದಲಾಯಿಸಲಾಗುವುದು. ಈಗಿರುವ ಸೈರನ್‌ಗೆ ಬದಲಾಗಿ ಆಕಾಶವಾಣಿಯಲ್ಲಿ ಮುಂಜಾನೆ ಕೇಳಿಬರುವ ಸಂಗೀತ ಅಳವಡಿಸಿದರೆ ಜನರ ಮನಸ್ಸಿಗೆ ಆಪ್ಯಾಯಮಾನವಾದ ಶಬ್ಧ ಕೇಳಿಸುತ್ತದೆ ಎಂದರು.
ವಾಹನಗಳಿಗೆ ಶೀಘ್ರ ತಬಲಾ, ಕೊಳಲು, ಪಿಟೀಲು ಹಾರ್ನ್: ಕರ್ಕಶ ಧ್ವನಿ ತಪ್ಪಿಸಲು ಗಡ್ಕರಿ ಪ್ಲಾನ್!
ವಾಹನಗಳಿಗೆ ಶಾಸ್ತ್ರೀಯ ಸಂಗೀತ
ವಾಹನಗಳ ಹಾರ್ನ್ ಮಾಡಿದಾಗ ಅದರಿಂದ ಹೊರಹೊಮ್ಮುವ ಕರ್ಕಶ ಧ್ವನಿಗೆ ಬೇಸರ ಪಡುವವರೇ ಹೆಚ್ಚು. ಆದರೆ ಮುಂದಿನ ದಿನಗಳಲ್ಲಿ ಇಂಥ ಕರ್ಣಕಠೋರ ಶಬ್ದಕ್ಕೆ ಬದಲಾಗಿ ಭಾರತೀಯ ಸಂಗೀತದ ವಾದ್ಯಗಳು ಕೇಳಿಬರುವ ಸಾಧ್ಯತೆ ಇದೆ! ಅಂದರೆ ತಬಲಾ, ಪಿಟೀಲು, ಕೊಳಲು ಸೇರಿದಂತೆ ನಾನಾ ವಾದ್ಯಗಳ ಮಧುರ ಧ್ವನಿ ಕೇಳಿಬರಲಿದೆ.
ಶಿರಾಡಿ ಘಾಟ್‌ನಲ್ಲಿ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಅವಕಾಶ
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ, ‘ನಾನು ನಾಗಪುರದಲ್ಲಿರುವ ಕಟ್ಟಡದಲ್ಲಿ 11ನೇ ಅಂತಸ್ತಿನಲ್ಲಿ ವಾಸಿಸುತ್ತಿದ್ದೇನೆ. ಆದರೂ ಮುಂಜಾನೆ ಪ್ರಾಣಾಯಾಮ ಮಾಡುವಾಗ ವಾಹನಗಳ ಹಾರ್ನ್ ಏಕಾಗ್ರತೆ ಹಾಳು ಮಾಡುತ್ತದೆ.
ಈ ವೇಳೆ ಇಂಥ ಕರ್ಕಶ ಧ್ವನಿಗಳನ್ನು ಸರಿಪಡಿಸುವ ಅಗತ್ಯ ಅರಿವಾಯ್ತು. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ವೇಳೆ ಸಂಗೀತ ವಾದ್ಯಗಳ ಧ್ವನಿ ಅಳವಡಿಕೆ ಬಗ್ಗೆ ಪ್ರಸ್ತಾಪ ಬಂತು. ಅದನ್ನು ಜಾರಿ ಮಾಡುವ ಹಾದಿಯಲ್ಲಿ ಇದೀಗ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ. ಈ ಸಂಬಂಧ ನಾವು ಹೊಸ ಕಾಯ್ದೆ ಜಾರಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ.