ಬೆಂಗಳೂರು(ನ.01): ಭಾರತದ ಮಾರುಕಟ್ಟೆಯಲ್ಲಿ ಅಗ್ರಜನಾಗಿ ಮೆರದ ಹ್ಯುಂಡೈ ಸ್ಯಾಂಟ್ರೋ ಹೊಸ ಅವತಾರದಲ್ಲಿ ಬಿಡುಗಡೆಯಾಗಿ ದಾಖಲೆ ಬರೆಯುತ್ತಿದೆ. ನೂತನ ಸ್ಯಾಂಟ್ರೋ ಕಾರು 22 ದಿನದಲ್ಲಿ 28,800 ಕಾರು ಬುಕ್ ಆಗೋ ಮೂಲಕ ದಾಖಲೆ ಬರೆದಿದೆ.

ಭಾರತದಲ್ಲಿ ಹ್ಯುಂಡೈ ಸ್ಯಾಂಟ್ರೋ ಕಾರು ಬರೋಬ್ಬರಿ 2 ದಶಕಗಳ ಕಾಲ ಅಧಿಪತ್ಯ ಸಾಧಿಸಿತ್ತು. 1998ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಸ್ಯಾಂಟ್ರೋ ಕಾರು ಬಿಡುಗಡೆಯಾಗಿತ್ತು. ಇದೀಗ 20ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಹ್ಯುಂಡೈ ಸಂಸ್ಥೆ ನೂತನ ಸ್ಯಾಂಟ್ರೋ  ಕಾರನ್ನ ಬಿಡುಗಡೆಗೊಳಿಸಿದೆ.

ಟಚ್ ಸ್ಕ್ರೀನ್, ರಿವರ್ಸ್ ಕ್ಯಾಮಾರ, ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್‌ಗಳು ನೂತನ ಸ್ಯಾಂಟ್ರೋಗೆ ನೀಡಲಾಗಿದೆ. 1.1 ಲೀಟರ್ ಪೆಟ್ರೋಲ್ ಎಂಜಿನ್ 64 ಬಿಹೆಚ್‌ಪಿ ಪವರ್ ಹಾಗೂ 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ.

ನೂತನ ಸ್ಯಾಂಟ್ರೋ ಕಾರು,  ಮಾರುತಿ ಸೆಲೆರಿಯೋ, ಮಾರುತಿ ವ್ಯಾಗ್ನರ್ ಹಾಗೂ ಟಾಟಾ ಟಿಯಾಗೋ ಸೇರಿದಂತೆ ಹಲವು ಹ್ಯಾಚ್‌ಬ್ಯಾಕ್ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ಈ  ನೂತನ ಸ್ಯಾಂಟ್ರೋ ಇದೀಗ ಮಾರಾಟದಲ್ಲೂ ದಾಖಲೆ ಬರೆಯಲು ಸಜ್ಜಾಗಿದೆ.