Asianet Suvarna News Asianet Suvarna News

ಬೆಲೆ ಕಡಿತಕ್ಕೆ ಭಾರತದಲ್ಲೇ ಹ್ಯುಂಡೈ ಕೋನಾ ಕಾರು ಘಟಕ

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಭಾರತದಲ್ಲೇ ನಿರ್ಮಾಣವಾಗಲಿದೆ. ಈ ಮೂಲಕ ಕೋನಾ ಬೆಲೆ ಕಡಿಮೆಯಾಗಲಿದೆ. ದಕ್ಷಿಣ ಭಾರತದಲ್ಲಿ ಕಾರು ಘಟಕ ತಲೆ ಎತ್ತಲಿದೆ. ಹೀಗಾಗಿ ಸ್ಥಳೀಯರಿಗೆ 1500 ಉದ್ಯೋಗ ಸೃಷ್ಟಿಯಾಗಲಿದೆ. ಈ ಕುರಿತ ಹೆಚ್ಚಿನ ವಿವರ.
 

Hyundai Kona electric car will made in India for low coast
Author
Bengaluru, First Published Jan 30, 2019, 4:07 PM IST

ಚೆನ್ನೈ(ಜ.30): ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮಾಡಲು ಹ್ಯುಂಡೈ ಸಂಸ್ಥೆ  ತಯಾರಿ ಆರಂಭಿಸಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ತಯಾರಿಸಲು ಭಾರತದಲ್ಲೇ ನಿರ್ಮಾಣ ಘಟಕ ಆರಂಭಿಸುತ್ತಿದೆ. ಇದಕ್ಕಾಗಿ 7,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.

Hyundai Kona electric car will made in India for low coast

ಇದನ್ನೂ ಓದಿ: ಬಲೆನೊ RS ಫೇಸ್‌ಲಿಫ್ಟ್ ಕಾರು -ಬೆಲೆ 8.76 ಲಕ್ಷ ರೂಪಾಯಿ!

ತಮಿಳುನಾಡಿನ ಚೆನ್ನೈನಲ್ಲಿ ಹ್ಯುಂಡೈ ಎಲೆಕ್ಟ್ರಿಕ್ ಕಾರು ಘಟಕ ಆರಂಭಗೊಳ್ಳಲಿದೆ. ಕೋನಾ ಕಾರು ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣವಾಗಲಿದೆ. ಹೀಗಾಗಿ ಕೋನಾ ಕಾರಿನ ಬೆಲೆಯೂ ಕಡಿಮೆಯಾಗಲಿದೆ. ಜೊತೆಗೆ 1500 ಉದ್ಯೋಗ ಸೃಷ್ಟಿಯಾಗಲಿದೆ. 

Hyundai Kona electric car will made in India for low coast

ಇದನ್ನೂ ಓದಿ: ಅತ್ಯಾಧುನಿಕ ಟೊಯೊಟಾ ಕ್ಯಾಮ್ರಿ - ಹೇಗಿದೆ ಈ ಹೈಬ್ರಿಡ್ ಕಾರು?

ಕೋನಾ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 350 ಕಿ.ಮೀ ಪ್ರಯಾಣ ಮಾಡಲಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ 1 ಗಂಟೆಯಲ್ಲಿ ಶೇಕಡಾ 80 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ. 136ps ಪವರ್ ಹಾಗೂ 395nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
 

Follow Us:
Download App:
  • android
  • ios