ನವದೆಹಲಿ(ಜು.27): ಎಲೆಕ್ಟ್ರಿಕ್ ವಾಹನದ ಮೇಲಿನ GST(ತೆರಿಗೆ) 12% ರಿಂದ 5%ಕ್ಕೆ ಇಳಿಸಲಾಗಿದೆ. GST ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ಎಲೆಕ್ಟ್ರಿಕ್ ವಾಹನ ಮೇಲಿನ ಬೆಲೆ ಕೂಡ  ಕಡಿತಗೊಳ್ಳುತ್ತಿದೆ. ಇದೀಗ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ ಇಳಿಸಲು ಕಂಪನಿ ನಿರ್ಧರಿಸಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ; GST ಇಳಿಕೆ, ಕೈಗೆಟುಕಲಿದೆ ಕಾರು!

GST ಇಳಿಕೆಯಿಂದ ನೂತನ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆಯಲ್ಲಿ 1.5 ಲಕ್ಷ ರೂಪಾಯಿ ಕಡಿತಗೊಳಿಸಲು ಮುಂದಾಗಿದೆ. ನೂತನ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ  25.3 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಬೆಲೆ ಕಡಿತ ಬಳಿಕ ಕೋನಾ ಕಾರಿನ ಬೆಲೆ 23.8 ಲಕ್ಷ ರೂಪಾಯಿ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ: ವಾಹನ ರಿಜಿಸ್ಟ್ರೇಶನ್ ಶುಲ್ಕ ಏರಿಕೆ; ಕಾರು, ಬೈಕ್ ಈಗ ದುಬಾರಿ!

ಕೋನಾ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ.  ಕೋನಾ ಮಾತ್ರವಲ್ಲ, ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಎಲೆಕ್ಟ್ರಿಕ್ ಕಾರು ಹಾಗೂ ಸ್ಕೂಟರ್ ಬೆಲೆ ಕಡಿತವಾಗಲಿದೆ. ಈ ಮೂಲಕ ಭಾರತದಲ್ಲಿ ಎಲೆಕ್ಟ್ರಿಕ್ ಕಾರಿಗೆ ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.