Asianet Suvarna News Asianet Suvarna News

ಕಾರು ಪಾರ್ಕ್ ಮಾಡಿ ನೆಮ್ಮದಿಯ ನಿದ್ದೆಗೆ ಜಾರಿದ ಮಾಲೀಕರು, ಬೆಳಗ್ಗೆದ್ದಾಗ 2 ಕಾರಿನ ಚಕ್ರ ಮಾಯ!

ಕೊರೋನಾ ವೈರಸ್ ಕಾರಣ ನಗರದಲ್ಲಿ ಕಾರು ತೆಗೆಯದೇ ಮೆಟ್ರೋ, ಸೇರಿದಂತೆ ಇತರ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಿದ್ದ ಬಹುತೇಕರು ಇದೀಗ ಕಾರಿನಲ್ಲೇ ಓಡಾಡುತ್ತಿದ್ದಾರೆ. ಹೀಗೆ ಕೆಲಸ ಮುಗಿಸಿ ಮನೆಗೆ ಬಂದು ತಮ್ಮ ಮನೆ ಸನಿಹದಲ್ಲೇ ಇಬ್ಬರು ಮಾಲೀಕರು ತಮ್ಮ ಹ್ಯುಂಡೈ ಕ್ರೆಟಾ ಹಾಗೂ ಕಿಯೋ ಸೆಲ್ಟೋಸ್ ಕಾರು ಪಾರ್ಕ್ ಮಾಡಿದ್ದಾರೆ. ಆದರೆ ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಬೆಚ್ಚಿ ಬಿದ್ದಿದ್ದಾರೆ.
 

Hyundai Creta Kia Seltos Stolen four wheels of each vehicle stolen in Delhi
Author
Bengaluru, First Published Jul 5, 2020, 5:44 PM IST

ದೆಹಲಿ(ಜು.05):  ಕೊರೋನಾ ವೈರಸ್ ಹೊಡೆತದಿಂದ ಉದ್ಯೋಗ ಕಡಿತ, ವೇತನ ಕಡಿತ ಸೇರಿದಂತೆ ಹಲವು ಸಂಕಷ್ಟ ಎದುರಾಗಿದೆ. ಇನ್ನು ದಿನಗೂಲಿ ನೌಕರರಿಗೆ ಕೆಲಸವೇ ಇಲ್ಲ. ಕಾರ್ಮಿಕರಿಗೂ ಉದ್ಯೋಗಿವಿಲ್ಲ. ಅತ್ತ ರೈತನ ಬೆಳೆಯನ್ನು ಸಾಗಿಸಲು, ಖರೀದಿಸಲು ಯಾರು ಮುಂದೆ ಬರುತ್ತಿಲ್ಲ. ಕಳೆದ 4 ತಿಂಗಳಿನಿಂದ ಭಾರತದ ಆರ್ಥಿಕ ಪರಿಸ್ಥಿತಿ ಹಡಗೆಟ್ಟಿದೆ. ಹೀಗಾಗಿ ಕಳ್ಳತನ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ದೆಹಲಿಯಲ್ಲಿ ಮನೆ ಸನಿಹದಲ್ಲಿ ನಿಲ್ಲಿಸಿದ್ದ ಎರಡು ಕಾರಿನ ಒಟ್ಟು 8 ಚಕ್ರಗಳನ್ನು ಕಳ್ಳರು ಕದ್ದಿದ್ದಾರೆ.

ಪೊಲೀಸರ ನೋಡಿ ಕದ್ದ ಕಾರಿನ ವೇಗ ಹೆಚ್ಚಿಸಿದ ಕಳ್ಳ, ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ!

ರಾಜಕುಮಾರ್ ಗುಪ್ತ ಹಾಗೂ ಪಂಕಜ್ ಗರ್ಗ್ ಇಬ್ಬರು ಅಕ್ಕಪಕ್ಕದ ಮನೆಯವರು. ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದ ಇಬ್ಬರು ಜೊತೆಯಾಗಿ ಅಕ್ಕಪಕ್ಕದಲ್ಲಿ ಕಾರು ಪಾರ್ಕ್ ಮಾಡಿದ್ದಾರೆ.  ಮರುದಿನ ಬೆಳೆಗ್ಗೆ ನೋಡಿದಾಗ ತಮ್ಮ ಹ್ಯುಂಡೈ ಕ್ರೆಟಾ ಹಾಗೂ ಕಿಯಾ ಸೆಲ್ಟೋಸ್ ಕಾರಿನ ಒಟ್ಟು 8 ಚಕ್ರಗಳನ್ನು ಕಳ್ಳರು ಕದ್ದಿದ್ದಾರೆ. 

60 ಲಕ್ಷದ ಬೈಕ್‌ಗೆ 42 ಲಕ್ಷ ರೂ ದಂಡ; ವಾಹನಕ್ಕಾಗಿ 14 ತಿಂಗಳು ಕಾನೂನು ಹೋರಾಟ!

ಹ್ಯುಂಡೈ ಕ್ರೇಟಾ ಹಾಗೂ ಸೆಲ್ಟೋಸ್ ಎರಡೂ ಕಾರು ಟಾಪ್ ಮಾಡೆಲ್ ಆಗಿದೆ. 17 ಇಂಚಿನ 8 ಮ್ಯಾಗ್ ವೀಲ್ ಕಳ್ಳತನವಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ. ಸಿಸಿಟಿವಿ ಸೇರಿದಂತೆ ಇತರ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಸದ್ಯ ಕೊರೋನಾ ವೈರಸ್ ಕಾರಣ ತನಿಖೆ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮಾಲೀಕರು ಹೇಳಿದ್ದಾರೆ.

Follow Us:
Download App:
  • android
  • ios