ನವದೆಹಲಿ(ಜ.01): ಭಾರತ ಬೈಕ್ ಮಾರುಕಟ್ಟೆ ಅಗ್ರಜ ರಾಯಲ್ ಎನ್‌ಫೀಲ್ಡ್ ಬೈಕ್ ಯುವಕರ ನೆಚ್ಚಿನ ಬೈಕ್ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಜಾವಾ ಮೋಟಾರ್ ಬೈಕ್ ಬಿಡುಗಡೆಯಾದ ಬಳಿಕ ರಾಯಲ್ ಎನ್‌ಫೀಲ್ಡ್‌ಗೆ ತೀವ್ರ ಪೈಪೋಟಿ ಎದುರಾಗಿದೆ. 

ಇದನ್ನೂ ಓದಿ: 2019ರಲ್ಲಿ ಮರೆಯಾಗಲಿರುವ ಭಾರತದ 6 ಕಾರುಗಳು!

ಡಿಸೆಂಬರ್, 2018ರ ರಾಯಲ್ ಎನ್‌‌ಫೀಲ್ಡ್ ಮಾರಾಟದಲ್ಲಿ ಇಳಿಕೆಯಾಗಿದೆ. ಇದು ಜಾವಾ ಬೈಕ್ ಬಿಡುಗಡೆಯಾದ ಎಫೆಕ್ಟ್ ಎಂದೇ ಹೇಳಲಾಗುತ್ತಿದೆ. ಡಿಸೆಂಬರ್‌ನಲ್ಲಿ ಶೇಕಡಾ 13 ರಷ್ಟು ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ರಾಯಲ್ ಎನ್‌ಫೀಲ್ಡ್ ಹೇಳಿದೆ.

ಇದನ್ನೂ ಓದಿ: 2019ರಲ್ಲಿ ಬಿಡುಗಡೆಯಾಗಲಿರುವ ಕಡಿಮೆ ಬೆಲೆ ಕಾರುಗಳು!

2017ರ ಡಿಸೆಂಬರ್‌ನಲ್ಲಿ 66,968 ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟವಾಗಿತ್ತು. ಆದರೆ 2018ರ ಡಿಸೆಂಬರ್‌ನಲ್ಲಿ 56,026 ಬೈಕ್ ಮಾರಾಟವಾಗಿದೆ. ಈ ಮೂಲಕ 13% ಮಾರಾಟ ಇಳಿಕೆಯಾಗಿದೆ. ಆದರೆ ಡಿಸೆಂಬರ್‌ನಲ್ಲಿ ವಿದೇಶಗಳಿಗೆ ರಫ್ತು ಆಗಿರೋ ಬೈಕ್ ಪ್ರಮಾಣದಲ್ಲಿ ಏರಿಕೆಯಾಗಿದೆ. ಶೇಕಡಾ 41 ರಷ್ಟು ಏರಿಕೆ ಕಂಡಿದೆ ಎಂದು ಕಂಪೆನಿ ವರದಿ ಬಿಡುಗಡೆ ಮಾಡಿದೆ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: