59KM ಮೈಲೇಜ್, ಬಿಡುಗಡೆಯಾಗಲಿದೆ ಹೊಂಡಾ ಸ್ಕೂಪಿ ಸ್ಕೂಟರ್!
ಪೆಟ್ರೋಲ್ ಬೆಲೆ ಕುರಿತು ಬಿಡಿಸಿ ಹೇಳಬೇಕಾಗಿಲ್ಲ. ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ದಿನ ನಿತ್ಯದ ಬಳಕೆಯ ವಾಹನಗಳು ಹೆಚ್ಚು ಮೈಲೇಜ್ ನೀಡಿದರೆ ಉತ್ತಮ. ಇದೀಗ ಹೊಂಡಾ ಸ್ಕೂಪಿ ಸ್ಕೂಟರ್ ಗ್ರಾಹಕರ ಬಹುದಿನದ ಬೇಡಿಕೆ ಈಡೇರಿಸಲಿದೆ. 1 ಲೀಟರ್ ಪೆಟ್ರೋಲ್‌ಗೆ 59 ಕಿ.ಮೀ ಮೈಲೇಜ್ ನೀಡಲಿದೆ.
ನವದೆಹಲಿ(ನ.15): ಶೀಘ್ರದಲ್ಲೇ ಗರಿಷ್ಠ ಮೈಲೇಜ್ ನೀಡಬಲ್ಲ ಸ್ಕೂಟರ್ ಬಿಡುಗಡೆಯಾಗಲಿದೆ. ಹೊಂಡಾ ವಿಶ್ವದಾದ್ಯಂತ ಬಿಡುಗಡೆ ಮಾಡಲಿರುವ ಸ್ಕೂಪಿ ಸ್ಕೂಟರ್ ಮೈಲೇಜ್ 59 ಕಿಲೋಮೀಟರ್. ಈಗಾಗಲೇ ಇಂಡೋನೇಷಿಯಾದಲ್ಲಿ ಈ ಸ್ಕೂಟರ್ 2010ರಲ್ಲಿ ಬಿಡುಗಡೆಯಾಗಿದೆ.
2030 ರಿಂದ ಪೆಟ್ರೋಲ್, ಡೀಸೆಲ್ ವಾಹನ ಮಾರಾಟ ಸಂಪೂರ್ಣ ನಿಷೇಧಕ್ಕೆ ನಿರ್ಧಾರ!.
ಇಂಡೋನೇಷಿಯಾದಲ್ಲಿ ಬಿಡುಗಡೆಯಾಗಿರುವ ಈ ಸ್ಕೂಟರ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಇದೀಗ ವಿಶ್ವದ್ಯಂತ ಈ ಸ್ಕೂಟರ್ ಬಿಡುಗಡೆ ಮಾಡಲು ಹೊಂಡಾ ನಿರ್ಧರಿಸಿದೆ.
ಇಂಡೋನೇಷಿಯಾದಲ್ಲಿ ಇದರ ಬೆಲೆ 19.95 ಮಿಲಿಯನ್ IDR. ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಸ್ಕೂಪಿ ಸ್ಕೂಟರ್ ಬೆಲೆ 1.05 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಸ್ಕೂಟರ್ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಇದೆ. LED ಹೆಡ್‌ಲೈಟ್ ಸೇರಿದಂತೆ ಮುಂಭಾಗದ ಶೈಲಿ ಬದಲಾಗಿದೆ.
3 ಕೋಟಿ ಬೆಲೆಯ ಪೊರ್ಶೆ 911 ಟರ್ಬೋ S ಕಾರು ಸಂಪೂರ್ಣ ಉಚಿತ; ಒಂದೇ ಕಂಡೀಷನ್!.
ಸ್ಪೊರ್ಟಿ, ಫ್ಯಾಶನ್ ಸೇರಿದಂತೆ ನಾಲ್ಕು ವೇರಿಯೆಂಟ್‌ಗಳಲ್ಲಿ ಸ್ಕೂಪಿ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಇನ್ನು 15.4 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. USB ಚಾರ್ಜರ್ ಸೇರಿದಂತೆ ಹಲವು ಫೀಚರ್ಸ್ ಈ ಸ್ಕೂಟರ್‌ನಲ್ಲಿದೆ.