ಜರ್ಮನಿ(ನ.09):  ಇದು ಶತಮಾನದ ಆಫರ್.  3 ಕೋಟಿ ರೂಪಾಯಿ ಬೆಲೆಯ ಪೊರ್ಶೆ 911 ಟರ್ಬೋ S ಕಾರು ಸಂಪೂರ್ಣ ಉಚಿತವಾಗಿ ಪಡೆಯುವ ಅವಕಾಶವಿದೆ.  ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ ಬಹುತೇಕ ಕಂಪನಿಗಳು ಡಿಸ್ಕೌಂಟ್ ಸೇರಿದಂತೆ ಇತರ ಆಫರ್‌‌ಗಳನ್ನು ಘೋಷಿಸಿದೆ. ಇದರ ನಡುವೆ ಜರ್ಮನಿಯ ಪೊರ್ಶೆ ಹಾಗೂ  ಬ್ರೆಜಿಲ್ ಮೂಲದ ಎಂಬ್ರೆರ್ ಚಾಪರ್ ಕಂಪನಿ ಸಹಭಾಗಿತ್ವದಲ್ಲಿ ವಿಶೇಷ ಆಫರ್ ಘೋಷಿಸಿದೆ. ಈ ಆಫರ್ ಮೂಲಕ ಉಚಿವಾಗಿ ಪೊರ್ಶೆ 911 ಟರ್ಬೋ S ಕಾರು ಸಿಗಲಿದೆ.

ದುಬಾರಿ ಪೊರ್ಶೆ 911 ಕ್ಯಾರೆರಾ S ಕಾರು ಖರೀದಿಸಿದ ನಟ ಫಹದ್ ಫಾಸಿಲ್, ನಾಜ್ರಿಯಾ !.

ಪೊರ್ಶೆ 911 ಟರ್ಬೋ S ಕಾರು ಉಚಿತವಾಗಿ ಪಡೆಯಲು ಒಂದು ಕಂಡೀಷನ್ ಇದೆ. ಫೊನೆಮ್ 300E ಪ್ರೈವೇಟ್ ಜೆಟ್ ಖರೀದಿಸಿದರೆ, ಪೊರ್ಶೆ 911 ಟರ್ಬೋ S ಕಾರು ಉಚಿತವಾಗಿ ಸಿಗಲಿದೆ. ಆದರೆ ಫೊನೆಮ್ 300E ಪ್ರೈವೇಟ್ ಜೆಟ್ ಬೆಲೆ ಸರಿಸುಮಾರು 74 ಕೋಟಿ ರೂಪಾಯಿ. 

74 ಕೋಟಿ ರೂಪಾಯಿ ಮೌಲ್ಯದ   ಜೆಟ್ ಖರೀದಿಸಲು ಸಾಧ್ಯವಾಗದಿದ್ದರೆ, ಉತಿಕ ಪೊರ್ಶೆ ಕಾರು ಖರೀದಿಸಲು ಸಾಧ್ಯವಾಗುವುದಿಲ್ಲ.  ವಿಶೇಷ ಅಂದರೆ ಜೆಟ್ ಬಣ್ಣದಲ್ಲೇ ಪೊರ್ಶೆ ಕೂಡ ಲಭ್ಯವಿದೆ. ಫೊನೆಮ್ 300E ಪ್ರೈವೇಟ್ ಜೆಟ್ ಹಾಗೂ ಉಚಿತ ಪೊರ್ಶೆ ಎರಡೂ ಒಂದೇ ಕಲರ್‌ನಲ್ಲಿ ಲಭ್ಯವಿದೆ. ಇನ್ನು ಪೊರ್ಶೆ ಲಿಮಿಟೆಡ್ ಎಡಿಶನ್ ಕಾರಾಗಿದೆ.

ದುಬಾರಿ ಆಫರ್ ಖರೀದಿಸುವ ಸರಾಸರಿ ಸಂಖ್ಯೆ  0.01% ಮಾತ್ರ. ಕಾರಣ 74 ಕೋಟಿ ರೂಪಾಯಿ ಮೌಲ್ಯದ ಪ್ರೈವೇಟ್ ಜೆಟ್ ಖರೀದಿಸುವವರ ಸಂಖ್ಯೆ ತೀರಾ ವಿರಳ. ಆಗರ್ಭ ಶ್ರೀಮಂತರಿಗೆ ಮಾತ್ರ ಸಾಧ್ಯ. ಹೀಗಾಗಿ ಉಚಿತ ಪೊರ್ಶೆ ಕಾರಿನ ಆಸೆ ಎಲ್ಲರಿಗೂ ಸಾಧ್ಯವಿಲ್ಲ.