ನವದೆಹಲಿ(ಆ.25):  ಹೊಂಡಾ ಜಾಝ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದೀಗ 2020ರ ಹೊಂಡಾ ಜಾಝ್ ಹಲವು ಬದಲಾವಣೆ, ಹೆಚ್ಚು ಅಗ್ರೆಸ್ಸೀವ್, ಸ್ಪೋರ್ಟೀವ್ ಲುಕ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಪ್ರೀ ಬುಕಿಂಗ್ ಕೂಡ ಆರಂಭಗೊಂಡಿದೆ. ನಾಳೆ(ಆ.26)ಕ್ಕೆ ನೂತನ ಹೊಂಡಾ ಜಾಝ್ ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ.

21 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹೊಸ ಹೊಂಡಾ ಜಾಝ್!

ನೂತನ ಜಾಝ್ ಕಾರಿನ ಮಹತ್ತರ ಬದಲಾವಣೆ ಅಂದರೆ ಸನ್‌ರೂಫ್, ಟಾಪ್ ವೇರಿಯೆಂಟ್ ಕಾರಿನಲ್ಲಿ ಸನ್‌ರೂಪ್ ಲಭ್ಯವಿದೆ. ಇನ್ನು ಫೇಸ್‌ಲಿಫ್ಟ್ ಜಾಝ್ ಕಾರು ಕೇವಲ ಪೆಟ್ರೋಲ್ ವೇರಿಯೆಂಟ್ ಎಂಜಿನ್ ಲಭ್ಯವಿದೆ. ಡೀಸೆಲ್ ಎಂಜಿನ್ ಕಾರು ಲಭ್ಯವಿಲ್ಲ. ಪೆಟ್ರೋಲ್ ವೇರಿಯೆಂಟ್‌ನಲ್ಲಿ V, VX ಹಾಗೂ ZX ಎಂಬ 3 ಮಾಡೆಲ್ ಲಭ್ಯವಿದೆ.

ಮೇಡ್ ಇನ್ ಇಂಡಿಯಾ ಹೈಬ್ರಿಡ್ ಕಾರು ಬಿಡುಗಡೆಗೆ ಮಾಡಲಿದೆ ಹೊಂಡಾ!

1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ನೂತನ ಜಾಝ್ 90PS ಹಾಗೂ 110Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ CVT ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.  2020 ಹೊಂಡಾ ಜಾಝ್ ಕಾರಿನ ಬೆಲೆ 7.5 ಲಕ್ಷ ರೂಪಾಯಿಯಿಂದ 9 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ