ಹೊಂಡಾ ಆ್ಯಕ್ಟೀವಾ 6G ಸ್ಕೂಟರ್ ಬಿಡುಗಡೆ; ಇಲ್ಲಿದೆ ಬೆಲೆ, ವಿಶೇಷತೆ!
ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಗರಿಷ್ಠ ಮಾರಾಟವಾದ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಹೊಂಡಾ ಆ್ಯಕ್ಟೀವಾ ಪಾತ್ರವಾಗಿದೆ. ಆ್ಯಕ್ಟೀವಾ ಸ್ಕೂಟರ್ ಕಾಲಕ್ಕೆ ತಕ್ಕಂತೆ ಅಪ್‌ಗ್ರೇಡ್ ಆಗುತ್ತಾ ಬಂದಿದೆ. ಇದೀಗ 6ನೇ ಪೀಳಿಗೆಯ ಆ್ಯಕ್ಟೀವಾ ಸ್ಕೂಟರ್ ಬಿಡುಗಡೆಯಾಗಿದೆ. ಹೊಂಡಾ ಆ್ಯಕ್ಟೀವಾ 6G ಸ್ಕೂಸ್ಕೂಟರ್ ಬೆಲೆ ಎಷ್ಟು? ವಿಶೇಷತೆ ಏನು? ಇಲ್ಲಿದೆ ವಿವರ.
ನವದೆಹಲಿ(ಜ.16): ಹೊಂಡಾ ಆ್ಯಕ್ಟೀವಾ ಸ್ಕೂಟರ್ ಮೊಟ್ಟ ಮೊದಲ ಬಾರಿಗೆ 2001ರಲ್ಲಿ ಭಾರತದ ರಸ್ತೆಗಿಳಿಯಿತು. 2001ರಿಂದ ದೇಶದ ಸ್ಕೂಟರ್ ಮಾರುಕಟ್ಟೆಯಲ್ಲಿ ಅಗ್ರಜನಾಗಿ ಮೆರೆಯುತ್ತಿರುವ ಹೊಂಡಾ ಆ್ಯಕ್ಟೀವಾ ಇದೀಗ 20ನೇ ವರ್ಷದ ಸಂಭ್ರಮದಲ್ಲಿದೆ. ಈ ಸಂಭ್ರಮದಲ್ಲಿ ಹೊಂಡಾ 6ನೇ ಪೀಳಿಗೆಯ ಹೊಂಡಾ ಆ್ಯಕ್ಟೀವಾ 6G ಸ್ಕೂಟರ್ ಬಿಡುಗಡೆ ಮಾಡಿದೆ. ಕೆಲ ಮಹತ್ವದ ಬದಲಾವಣೆಯೊಂದಿಗೆ ನೂತನ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಸ್ಕೂಟರ್ ಬೆಲೆ 63,912 ರೂಪಾಯಿಂದ ಆರಂಭವಾಗಲಿದೆ.
ಇದನ್ನೂ ಓದಿ: ಕೇವಲ 2 ಸಾವಿರ ರೂ.ಗೆ ಬುಕ್ ಮಾಡಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್!.
ನೂತನ ಹೊಂಡಾ ಆ್ಯಕ್ಟೀವಾ 6G ಬಿಎಸ್6 ಎಮಿಶನ್ ಎಂಜಿನ್ ಹೊಂದಿದೆ. ವಿನ್ಯಾಸದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಆ್ಯಕ್ಟೀವಾ 6G ಸ್ಕೂಟರ್ ಮುಂಭಾಗದ ಡಿಸೈನ್ ಕೊಂಚ ಬದಲಾವಣೆ ಮಾಡಲಾಗಿದ್ದು, ಹಿಂದಿಗಿಂತ ಆಕರ್ಷಕವಾಗಿದೆ. LED ಹೆಡ್‌ಲ್ಯಾಂಪ್ಸ್ ಹಾಗೂ ಸೈಡ್ ಪ್ಯಾನೆಲ್ ಡಿಸೈನ್ ಕೂಡ ಬದಲಾಗಿದೆ.
ಇದನ್ನೂ ಓದಿ: ಮತ್ತಷ್ಟು ಆಕರ್ಷಕ ಲುಕ್; ಯಮಹಾ ಫ್ಯಾಸಿನೋ 125FI ಸ್ಕೂಟರ್ ಲಾಂಚ್!
ಆ್ಯಕ್ಟೀವಾ 6G ಲಾಂಗ್ ವೀಲ್ಹ್ ಬೇಸ್, ಲಾಂಗ್ ಹೆಚ್ಚು ಉದ್ದನೆಯ ಸೀಟ್ ಕೂಡ ಈ ಸ್ಕೂಟರ್ ವಿಶೇಷತೆಯಾಗಿದೆ. ಸ್ಟಾಂಡರ್ಡ್ ಹಾಗೂ ಡಿಲಕ್ಸ್ ಎಂಬ ಎರಡು ವೇರಿಯೆಂಟ್ ಲಭ್ಯವಿದೆ. ಒಟ್ಟು 6 ಬಣ್ಣಗಳಲ್ಲಿ ನೂತನ ಆ್ಯಕ್ಟೀವಾ 6G ಸ್ಕೂಟರ್ ಲಭ್ಯವಿದೆ. ಸದ್ಯ ಮಾರುಕಟ್ಟೆಯಲ್ಲಿ ಆ್ಯಕ್ಟೀವಾ ಸ್ಕೂಟರ್‌ಗಿಂತ ನೂತನ ಆ್ಯಕ್ಟೀವಾ 6G ಹೆಚ್ಚಿನ ಮೈಲೇಜ್ ನೀಡಲಿದೆ.
ವಾಹನ ರಿಜಿಸ್ಟ್ರೇಶನ್ ಶುಲ್ಕ ಏರಿಕೆ; ಕಾರು, ಬೈಕ್ ಈಗ ದುಬಾರಿ!.
ಆ್ಯಕ್ಟೀವಾ 6G 109 cc ಸಿಂಗಲ್ ಸಿಲಿಂಡರ್ ಎಂಜಿನ್, 7.68 bhp (@8,000 rpm) ಹಾಗೂ 8.79 Nm ಪೀಕ್ ಟಾರ್ಕ್( @ 5,250 rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಜನವರಿ ಅಂತ್ಯದಲ್ಲಿ ನೂತನ ಆ್ಯಕ್ಟೀವಾ 6G ಮಾರಾಟ ಆರಂಭಿಸಲಿದೆ. ಫೆಬ್ರವರಿಯಿಂದ ಬೈಕ್ ಡೆಲಿವರಿ ಆರಂಭವಾಗಲಿದೆ.