ನವದೆಹಲಿ(ಡಿ.23): ಯಮಹಾ ಮೋಟಾರ್ ಇಂಡಿಯಾ ತನ್ನ ನೆಚ್ಚಿನ ಸ್ಕೂಟರ್ ಫ್ಯಾಸಿನೋ ಅಪ್‌ಗ್ರೇಡ್ ಮಾಡಿದೆ. ಸದ್ಯ 113 cc ಯಮಹಾ ಫ್ಯಾಸಿನೋ ಮಾರುಕಟ್ಟೆಯಲ್ಲಿದೆ. ಇದೇ ಸ್ಕೂಟರ್ ಅಪ್‌ಗ್ರೇಡ್ ಮಾಡಿರುವ ಯಮಹಾ ಇದೀಗ ಫ್ಯಾಸಿನೋ 125FI ವರ್ಶನ್ ಬಿಡುಗಡೆ ಮಾಡಿದೆ. ವಿಶೇಷವಾಗಿ ಫ್ಯಾಸಿನೋ ಮತ್ತಷ್ಟು ಆಕರ್ಷಕವಾಗಿದೆ, ಜೊತೆಗೆ ಕೆಲ ಫೀಚರ್ಸ್ ಸೇರಿಸಲಾಗಿದೆ.

ಇದನ್ನೂ ಓದಿ: ಹೊಸ ವಿನ್ಯಾಸದಲ್ಲಿ 2020ರ ಸುಜುಕಿ ಹಯಬುಸಾ ಬಿಡುಗಡೆ!.

Bs6 ಎಮಿಶನ್ ಎಂಜಿನ್ ಹೊಂದಿರುವ ನೂತನ  ಫ್ಯಾಸಿನೋ 125FI ಸ್ಕೂಟರ್ ಕ್ಲಾಸಿಕ್ ಯುರೋಪಿಯನ್ ರೆಟ್ರೋ ಸ್ಟೈಲ್ ಬಳಸಿಕೊಳ್ಳಲಾಗಿದೆ. ತ್ರಿಕೋನ ಆಕಾರದ ಹೆಡ್‌ಲ್ಯಾಂಪ್ಸ್, ಲಾರ್ಜ್ ಕ್ರೋಮ್, ಕ್ರೋಮ್ ಫಿನೀಶಡ್ ವೆಂಟ್ಸ್, ವಿ ಶೇಫ್ ಟೈಲ್ ಲೈಟ್ಸ್ ಹೊಂದಿದೆ. ನೂತನ ಸ್ಕೂಟರ್‌ನಲ್ಲಿ ಅಲೋಯ್ ವೀಲ್ಹ್ ಬಳಕೆಯಿಂದ ಮತ್ತಷ್ಟು ಆಕರ್ಷವಾಗಿದೆ.

ಇದನ್ನೂ ಓದಿ: ನಗರಗಳಲ್ಲಿ ಹೆಲ್ಮೆಟ್ ಕಡ್ಡಾಯವಲ್ಲ; ಸಾರಿಗೆ ಸಚಿವರಿಂದ ಬಂಪರ್ ಆಫರ್!.

ಮುಂಭಾಗದಲ್ಲಿ 12 ಇಂಚಿನ ಯುನಿಟ್ ಅಲೋಯ್ ವೀಲ್ದ್ ಹಾಗೂ ರೇರ್ 10 ಇಂಚಿನ ಯುನಿಟ್ ಬಳಸಲಾಗಿದೆ. ಸ್ಟಾರ್ಟ್ ಹಾಗೂ ಸ್ಟಾಪ್ ಬಟನ್ ಹೆಚ್ಚುವರಿಯಾಗಿ ಸೇರಿಸಲಾಗಿದೆ. ನೂತನ  ಫ್ಯಾಸಿನೋ ಸ್ಕೂಟರ್ 125 cc ಸಿಂಗಲ್ ಸಿಲಿಂಡರ್, ಬ್ಲೂ ಕೋರ್ ಎಂಜಿನ್ ಹೊಂದಿದ್ದು,  8 bhp ಪವರ್ 9.7 Nm  ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ನೂತನ ಯಮಹಾ  125 FI ಬೆಲೆ  66,430 ರೂಪಾಯಿಂದ ಆರಂಭಗೊಳ್ಳುತ್ತಿದ್ದು, ಗರಿಷ್ಠ ಬೆಲೆ 69,930 ರೂ(ಎಕ್ಸ್  ಶೋ ರೂಂ ದೆಹಲಿ)

ಡಿಸೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ