ನವದೆಹಲಿ(ಮಾ.02): ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಭಾರತದ ಟಾಟಾ ನೆಕ್ಸಾನ್ ಕಾರು  ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಗೆಗೆ ಪಾತ್ರವಾಗಿದೆ. ಇದೇ ಮೊದಲ ಬಾರಿಗೆ 5 ಸ್ಟಾರ್ ರೇಟಿಂಗ್ ಪಡೆಯೋ ಮೂಲಕ ಇತಿಹಾಸ ರಚಿಸಿತ್ತು. ಇದೀಗ ಮತ್ತೊಂದು ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ.

ಇದನ್ನೂ ಓದಿ: 20ಕ್ಕಿಂತ ಹೆಚ್ಚು ವಾಹನ ಕ್ಯೂ ಇದ್ದರೆ ಟೋಲ್ ಕಟ್ಟಬೇಕಿಲ್ಲ!

ಹೊಂಡಾ ಕಾರು ಸಂಸ್ಥೆ ಕಳೆದ ವರ್ಷ ಹೊಂಡಾ CR-V ಕಾರು ಬಿಡುಗಡೆ ಮಾಡಿತ್ತು. SUV ಕಾರಿನ ಸುರಕ್ಷತೆ ಪರೀಕ್ಷೆ ಮುಕ್ತಾಯಗೊಂಡಿದೆ. ಯುರೋ NCAP ಕ್ರಾಶ್ ಟೆಸ್ಟ್‌ನಲ್ಲಿ ಹೊಂಡಾ CR-V ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ. 

ಇದನ್ನೂ ಓದಿ: ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ!

ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ಗಳಲ್ಲಿ ಕಾರು ಲಭ್ಯವಿದೆ. ನೂತನ ಹೊಂಡಾ CR-V ಕಾರಿನ ಬೆಲೆ 28.15 ಲಕ್ಷ ರೂಪಾಯಿ. 2.0 ಲೀಟರ್ ಪೆಟ್ರೋಲ್ ಹಾಗೂ 1.6 ಲೀಟರ್ ಟರ್ಬೋಚಾರ್ಜ್‌ಡ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ.  ನೂತನ ಹೊಂಡಾ CR-V ಲಕ್ಸುರಿ ಕಾರುಗಳಲ್ಲಿ ಗರಿಷ್ಠ ಸೇಫ್ಟಿ ನೀಡುತ್ತಿದೆ. ಆದರೆ ಕಡಿಮೆ ಬೆಲೆಯಲ್ಲಿ ಗರಿಷ್ಠ ಸುರಕ್ಷತೆ ನೀಡುವ ಹೆಗ್ಗಳಿಗೆ ಟಾಟಾ ನೆಕ್ಸಾನ್ ಮೇಲಿದೆ.