20ಕ್ಕಿಂತ ಹೆಚ್ಚು ವಾಹನ ಕ್ಯೂ ಇದ್ದರೆ ಟೋಲ್ ಕಟ್ಟಬೇಕಿಲ್ಲ!
ಟೋಲ್ ಫೀ ಕಟ್ಟುವುದು ಅತೀ ದೊಡ್ಡ ಸಮಸ್ಯೆ. ಅದರಲ್ಲೂ ಕ್ಯೂ ನಿಂತು, ಟೋಲ್ ಕಟ್ಟಿ ಮುಂದೆ ಸಾಗುವುದು ಇನ್ನಷ್ಟು ತಲೆನೋವು. ಇನ್ಮುಂದೆ 20ಕ್ಕಿಂತ ಹೆಚ್ಚು ವಾಹನ ಟೋಲ್ ಕಟ್ಟಲು ಸಾಲು ನಿಂತಿದ್ದರೆ, ಯಾವುದೇ ಹಣ ಕಟ್ಟಬೇಕಿಲ್ಲ. ಹೊಸ ಆದೇಶ ಜಾರಿ ಮಾಡಲಾಗಿದೆ.
ಹೈದರಾಬಾದ್(ಮಾ.01): ಟೋಲ್ ಗೇಟ್ ಬಳಿ ಕ್ಯೂ ನಿಲ್ಲುವುದೇ ಅತೀ ದೊಡ್ಡ ಕಿರಿಕಿರಿ. ಅದರಲ್ಲೂ ವೀಕೆಂಡ್ ಬಂದರೆ ಸಾಕು ಟೋಲ್ ಗೇಟ್ ಬಳಿ ಟ್ರಾಫಿಕ್ ಸಮಸ್ಯೆ ಅನುಭವಿಸಿದವರಿಗೆ ಗೊತ್ತು. ಇನ್ಮುಂದೆ 20ಕ್ಕಿಂತ ಹೆಚ್ಚು ವಾಹನ ಕ್ಯೂನಲ್ಲಿದ್ದರೆ ಟೋಲ್ ಕಟ್ಟಬೇಕಿಲ್ಲ. ಇದು ನಿಜ, ಆದರೆ ಕರ್ನಾಟಕದಲ್ಲಲ್ಲ. ಈ ನಿಯಮ ಜಾರಿಯಾಗಿರುವುದು ಹೈದರಾಬಾದ್‌ನಲ್ಲಿ.
ಇದನ್ನೂ ಓದಿ: ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ!
ಹೈದರಾಬಾದ್ ಔಟರ್ ರಿಂಗ್ ರೋಡ್‌ಗಲ್ಲಿರುವ ಟೋಲ್ ಗೇಟ್‌ನಲ್ಲಿ ಕ್ಯೂ ನಿಂತು ಟೋಲ್ ಕಟ್ಟೋ ಸಮಸ್ಯೆ ತಪ್ಪಿಸಲು ಹೊಸ ನಿಯಮ ಜಾರಿಗೆ ತರಲಾಗಿದೆ. 20ಕ್ಕಿಂತ ಹೆಚ್ಚು ವಾಹನಗಳೂ ಕ್ಯೂನಲ್ಲಿದ್ದರೆ ಯಾವುದೇ ಟೋಲ್ ಫೀ ಕಟ್ಟಬೇಕಿಲ್ಲ.
ಇದನ್ನೂ ಓದಿ: ನೀರವ್ ಮೋದಿಗೆ ಮತ್ತೊಂದು ಶಾಕ್ ನೀಡಿದ ಕೇಂದ್ರ
ಹೈದರಾಬಾದ್ ಮೆಟ್ರೋಪೊಲಿಟಿಯನ್ ಡೆವಲಪ್‌ಮೆಂಟ್ ಅಥಾರಿಟಿ(HMDA)ಈ ಆದೇಶ ಹೊರಡಿಸಿದೆ. ಎಪ್ರಿಲ್ 1 ರಿಂದ ಈ ನಿಯಮ ಜಾರಿಯಾಗಲಿದೆ. ಶಂಸಾಬಾದ್ ಹಾಗೂ ನಾನಕ್ರಂಗುಡ ಟೋಲ್‌ಗಳಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ.