6 ವರ್ಷಗಳ ಬಳಿಕ ಹೊಂಡಾ ಸಿವಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಹೊಸ ವಿನ್ಯಾಸ ಹಾಗೂ ಬಲಿಷ್ಠ ಎಂಜಿನ್ ಸಾಮರ್ಥ್ಯದೊಂದಿಗೆ ಸಿವಿಕ್ ಕಾರು ರಸ್ತೆಗಿಳಿಯುತ್ತಿದೆ. ನೂತನ ಕಾರಿನ ಬುಕಿಂಗ್ ಆರಂಭಗೊಂಡಿದೆ. ಈ ಕಾರು ಬಿಡುಗಡೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನವದೆಹಲಿ(ಫೆ.17): ಲಕ್ಸುರಿ ಕಾರು ಎಂದೇ ಹೆಸರುವಾಸಿಯಾಗಿರುವ ಹೊಂಡಾ ಸಿವಿಕ್ ಕಾರು ನೂತನ ಕಾರು ಬಿಡುಗಡೆಗೆ ಸಜ್ಜಾಗಿದೆ. 2013ರಲ್ಲಿ ಭಾರತದಲ್ಲಿ ಮಾರಾತ ಸ್ಥಗಿತಗೊಳಿಸಿದ ಹೊಂಡಾ ಸಿವಿಕ್ ಇದೀಗ 6 ವರ್ಷಗಳ ಬಳಿಕ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಕಾರು ಮಾರ್ಚ್ 7 ರಂದು ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಹೊಂಡಾ ಸಿವಿಕ್ ಕಾರಿನ ಬುಕಿಂಗ್ ಆರಂಭಗೊಂಡಿದೆ.

Scroll to load tweet…

ಇದನ್ನೂ ಓದಿ: ಟಾಟಾ ನೆಕ್ಸಾನ್ ಮೇಲೆ ಬ್ತಿತು ಪಿಲ್ಲರ್ - ಸುರಕ್ಷತಾ ಕಾರಿನ ಪ್ರಯಾಣಿಕರೆಲ್ಲರು ಸೇಫ್

ಸ್ಕೋಡಾ ಒಕ್ಟಿವಾ, ಟೊಯೊಟಾ ಕೊರೊಲಾ ಹಾಗೂ ಹ್ಯುಂಡೈ ಎಲಾಂಟ್ರ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಹೊಂಡಾ ಸಿವಿಕ್ ರಸ್ತೆಗಿಳಿಯುತ್ತಿದೆ. 31,000 ರೂಪಾಯಿಗೆ ನೂತನ ಹೊಂಡಾ ಸಿವಿಕ್ ಕಾರು ಬುಕಿಂಗ್ ಮಾಡಬಹುದು. 

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಕೇಂದ್ರ ಸರ್ಕಾರ ನೀಡಲಿದೆ 50 ಸಾವಿರ ರೂ!

ನೂತನ ಹೊಂಡಾ ಸಿವಿಕ್ ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನ್ ಕಾರು ಲಭ್ಯವಿದೆ. 1.6 ಲೀಟರ್ ಡೀಸೆಲ್ ಎಂಜಿನ್, 120 ಬಿಹೆಚ್‌ಪಿ ಪವರ್ ಹಾಗೂ 300nm ಟಾರ್ಕ್ ಉತ್ವಾದಿಸಲಿದೆ. ಇನ್ನು 1.8 ಲೀಟರ್ ಪೆಟ್ರೋಲ್ ಎಂಜಿನ್ 139 bhp ಪವರ್ ಹಾಗೂ 174 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 1.6 ಡೀಸೆಲ್ ಎಂಜಿನ್ ಕಾರು 118 bhp ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.