ದೆಹಲಿ(ಅ.22): ಹೋಂಡಾ 2ವೀಲರ್ಸ್ ಇಂಡಿಯಾ, ‘ಹೋಂಡಾ ಸೂಪರ್ 6’ ಕೊಡುಗೆ ಮೂಲಕ ಈ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಗ್ರಾಹಕರಿಗೆ ಅತ್ಯುತ್ತಮ ಉಳಿತಾಯದ ಕೊಡುಗೆ ನೀಡಲು ಮುಂದಾಗಿರುವ ಹೋಂಡಾ 2ವೀಲರ್ಸ್ ಇಂಡಿಯಾ, ತನ್ನ ಗ್ರಾಹಕರ ವಿವಿಧ ಅಗತ್ಯಗಳನ್ನು ಈಡೇರಿಸಲು ಅವರ ಉಳಿತಾಯಗಳನ್ನೆಲ್ಲ ಒಟ್ಟುಗೂಡಿಸಿ ರೂ. 11,000ವರೆಗೆ ಉಳಿತಾಯ ಮಾಡಬಹುದಾದ ಆಕರ್ಷಕ 6 ಬಗೆಯ ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸಿದೆ.

350 ಸಿಸಿಯ ಹೋಂಡಾ ಹೈನೆಸ್‌ ಬಂತು ದಾರಿಬಿಡಿ!..

ಗ್ರಾಹಕರಿಗೆ ಕೊಡ ಮಾಡಿರುವ ಉತ್ತೇಜಕರ ಕೊಡುಗೆಗಳ ಬಗ್ಗೆ ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಅವರು ವಿವರಿಸಿದ್ದಾರೆ.  ಹೊಸ ಸಹಜ ಬದುಕಿನಲ್ಲಿ ಅನೇಕ ಹೊಸ ಗ್ರಾಹಕರು ಸಾರ್ವಜನಿಕ ಸಾರಿಗೆ ಬದಲಿಗೆ ವೈಯಕ್ತಿಕ ಬಳಕೆಗೆ ಸ್ವಂತ ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ನೆಚ್ಚಿಕೊಳ್ಳುತ್ತಿದ್ದಾರೆ. ಈ ಬಾರಿಯ ಹಬ್ಬಗಳ ಋತುವು ಈ ಹಿಂದಿನಂತಿಲ್ಲ ಎನ್ನುವುದನ್ನು ಮನಗಂಡಿರುವ ಹೋಂಡಾ, ತನ್ನೆಲ್ಲ ವಹಿವಾಟಿನ ಜಾಲ ವ್ಯವಸ್ಥೆಯಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಿದೆ. ಸಮಗ್ರ ಸ್ವರೂಪದ ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕ್ರಮಗಳು ನಮ್ಮ ಗ್ರಾಹಕರ ಆತ್ಮವಿಶ್ವಾಸ ಹೆಚ್ಚಿಸಿವೆ. ಈಗ ನವರಾತ್ರಿ ಆರಂಭಗೊಂಡಿರುವ ಸಂದರ್ಭದಲ್ಲಿ ದ್ವಿಚಕ್ರ ವಾಹನ ಖರೀದಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯುವ, ವಾಹನ ಖರೀದಿ ಬುಕಿಂಗ್ ಮತ್ತು ಪರೀಕ್ಷಾರ್ಥ ಚಾಲನೆಗೆ ಗ್ರಾಹಕರಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. 

ಹೊಂಡಾ ಹಾರ್ನೆಟ್ 2.0 ಬೈಕ್ ಬಿಡುಗಡೆ: ಕಡಿಮೆ ಬೆಲೆಯಲ್ಲಿ 184cc ಬೈಕ್!.

ಈ ಹಬ್ಬದ ದಿನಗಳಲ್ಲಿ ಹೋಂಡಾ ತನ್ನ ಗ್ರಾಹಕರಿಗೆ ವಾಹನ ಖರೀದಿ ಕೈಗೆಟುಕುವುದನ್ನು ಇನ್ನಷ್ಟು ಸುಲಭಗೊಳಿಸಿದೆ. ಜತೆಗೆ ಆಕರ್ಷಕ ಉಳಿತಾಯದ ಕೊಡುಗೆಗಳನ್ನೂ ನೀಡುತ್ತಿದೆ. ಹೋಂಡಾದ ಬಿಎಸ್6 ವಾಹನಗಳ ಹೊಸ ಸೇರ್ಪಡೆಯ ಜತೆಗೆ ಹಬ್ಬದ ನಮ್ಮ ಆಶ್ಚರ್ಯ ಸ್ವರೂಪದ ಹೋಂಡಾ ಸೂಪರ್ 6 ಕೊಡುಗೆ ನೀಡಲಾಗುತ್ತಿದೆ. ಹೋಂಡಾ 2ವೀಲರ್ಸ್ ಗ್ರಾಹಕರು ಈಗ ರೂ 11,000ಗಳ ದೊಡ್ಡ ಉಳಿತಾಯದ ಜತೆ ತಮ್ಮ ಕನಸಿನ ಹೋಂಡಾ ದ್ವಿಚಕ್ರ ವಾಹನವನ್ನು ಮನೆಗೆ ಕೊಂಡೊಯ್ಯಲು ಇದು ಸುಸಂದರ್ಭವಾಗಿದೆ’ ಎಂದು ಅವರು ಹೇಳಿದ್ದಾರೆ.

ರಿಟೇಲ್ ಹಣಕಾಸು ನೆರವಿನಲ್ಲಿ ರೂ. 11,000ವರೆಗೆ ಉಳಿತಾಯ: 
ಕೈಗೆಟುಕುವ ಬೆಲೆಯೊಂದಿಗೆ ಗ್ರಾಹಕರಿಗೆ ನಿಜವಾದ ನೆಮ್ಮದಿ ಒದಗಿಸಲಾಗುತ್ತಿದೆ. ಹೋಂಡಾ ಗ್ರಾಹಕರು ಈಗ ವಾಹನದ ಬೆಲೆಯ ಶೇ 100ರಷ್ಟು ಸಾಲ ಪಡೆಯಬಹುದು. ಇದುವರೆಗಿನ ಅತ್ಯಂತ ಕಡಿಮೆ ಮಟ್ಟವಾಗಿರುವ ಶೇ 7.99ರಿಂದ ಆರಂಭವಾಗುವ ಬಡ್ಡಿ ದರ ಮತ್ತು ಮೊದಲ 3 ತಿಂಗಳ ಇಎಂಐ ಪಾವತಿಗೆ ಶೇ50ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಹೋಂಡಾದ ವಿವಿಧ ಹಣಕಾಸು ಪಾಲುದಾರ ಸಂಸ್ಥೆಗಳಾಗಿರುವ ಐಡಿಎಫ್‍ಸಿ ಫಸ್ಟ್ ಬ್ಯಾಂಕ್, ಎಲ್‍ಆ್ಯಂಡ್‍ಟಿ ಫೈನಾನ್ಶಿಯಲ್ ಸರ್ವಿಸಸ್, ಇಂಡಸ್‍ಇಂಡ್ ಬ್ಯಾಂಕ್, ಮುತ್ತೂಟ್ ಕ್ಯಾಪಿಟಲ್, ಚೋಳಮಂಡಲಂ ಫೈನಾನ್ಸ್, ಟಾಟಾ ಕ್ಯಾಪಿಟಲ್‍ನ ದ್ವಿಚಕ್ರ ವಾಹನ ಸಾಲ ಮುಂತಾದ ಕಡೆಗಳಿಂದ ಗ್ರಾಹಕರು ಸುಲಭವಾಗಿ ಸಾಲ ಪಡೆಯಬಹುದು. 

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳಿಗೆ ರೂ. 5,000ವರೆಗೆ ಆಕರ್ಷಕ ಕ್ಯಾಷ್‍ಬ್ಯಾಕ್:
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳ ಮೂಲಕ ದ್ವಿಚಕ್ರ ವಾಹನ ಖರೀದಿಸುವವರಿಗೆ ರೂ. 5,000ವರೆಗಿನ ಶೇ 5ರಷ್ಟು ಸೂಪರ್ ಹಣ ಮರಳಿಸುವ (ಕ್ಯಾಷ್‍ಬ್ಯಾಕ್) ಸೌಲಭ್ಯದ ಮೂಲಕ ಹೋಂಡಾ ತನ್ನ ಗ್ರಾಹಕರನ್ನು ಖುಷಿಪಡಿಸಲಿದೆ. ಇಎಂಐಗಳಿಗೆ ಕ್ಯಾಷ್‍ಬ್ಯಾಕ್ ಕೊಡುಗೆಯು ತುಂಬ ಸುಲಭವಾಗಿದ್ದು ಗ್ರಾಹಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿರಲಿದೆ. ಖರೀದಿ ಸಂದರ್ಭದಲ್ಲಿ ವಾಹನವನ್ನು ಹಣಕಾಸು ಸಂಸ್ಥೆಗಳಿಗೆ ಅಡಮಾನ ಇಡದೇ ತಕ್ಷಣಕ್ಕೆ ಖರೀದಿಸಬಹುದು. ಈ ಸ್ಕೀಮ್, 5 ಪ್ರಮುಖ ಬ್ಯಾಂಕ್‍ಗಳಾದ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಯೆಸ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಫೆಡರಲ್ ಬ್ಯಾಂಕ್‍ನ ಕ್ರೆಡಿಟ್ ಕಾರ್ಡ್ ಇಎಂಐ (ಸಮಾನ ಮಾಸಿಕ ಕಂತು) ಗಳಿಗೆ ಅನ್ವಯಿಸಲಿದೆ. ಬ್ಯಾಂಕ್ ಆಫ್ ಬರೋಡಾದ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ 5ರಷ್ಟು ಕ್ಯಾಷ್‍ಬ್ಯಾಕ್ ಕೊಡುಗೆಯು ಇಎಂಐ ಆಯ್ಕೆ ಇಲ್ಲದೆಯೂ ದೊರೆಯಲಿದೆ. ಐಸಿಐಸಿಐ ಬ್ಯಾಂಕ್‍ನ ಗ್ರಾಹಕರು ಡೆಬಿಟ್ ಕಾರ್ಡ್ ಇಎಂಐಗಳ ಮೇಲೆಯೂ ಕ್ಯಾಷ್‍ಬ್ಯಾಕ್ ಸೌಲಭ್ಯ ಪಡೆದುಕೊಳ್ಳಬಹುದು.

TVS ಅಪಾಚೆ ಪ್ರತಿಸ್ಪರ್ಧಿ, ಹೊಂಡಾ X-Blade ಬೈಕ್ ಬಿಡುಗಡೆ

ಹೋಂಡಾ ಗ್ರಾಹಕರು ಪೇಟಿಎಂ ಮೂಲಕ ರೂ. 2,500ವರೆಗೆ ಕ್ಯಾಷ್‍ಬ್ಯಾಕ್ ಪ್ರಯೋಜನ ಪಡೆದುಕೊಳ್ಳಬಹುದು. ಈ ಹಬ್ಬದ ಸಂದರ್ಭದಲ್ಲಿ, ಹಬ್ಬಗಳ ಸಂಭ್ರಮೋಲ್ಲಾಸವನ್ನು ಎಲ್ಲರೂ ಸುರಕ್ಷತೆಯೊಂದಿಗೆ ಆಚರಿಸೋಣ ಎನ್ನುವುದು ಹೋಂಡಾ ಕುಟುಂಬದ ಆಶಯವಾಗಿದೆ. ಸಂಪರ್ಕ ರಹಿತ ಖರೀದಿ ಅನುಭವದ ಜತೆ ಉಳಿತಾಯ ಪಡೆಯಬಹುದು. ಹೋಂಡಾ ಗ್ರಾಹಕರು ಈಗ ತಮ್ಮ ಮೆಚ್ಚಿನ ಹೋಂಡಾ 2ವೀಲರ್ ಅನ್ನು ಹೋಂಡಾದ ಸುರಕ್ಷಿತ ಮತ್ತು ಸರಳ ಆನ್‍ಲೈನ್ ಬುಕಿಂಗ್ ಮೂಲಕವೂ ಖರೀದಿಸಬಹುದು. ಮನೆಯಲ್ಲಿ ಆರಾಮವಾಗಿ ಕುಳಿತುಕೊಂಡು ಹೊಂಡಾ ಅಧೀಕೃತ ವೆಬ್‌ಸೈಟ್ ಮೂಲಕವೂ ವಾಹನ ಖರೀದಿಸಬಹುದು.

ಹೊಂಡಾ ಗ್ರೇಸಿಯಾ 125 BS6 ಆಟೋಮ್ಯಾಟಿಕ್ ಸ್ಕೂಟರ್ ಬಿಡುಗಡೆ!.

ಕ್ಲಿಕ್ ಮೂಲಕ ಬುಕ್ ಮಾಡಿ ನಿಶ್ಚಿಂತೆಯಿಂದ ಇರಿ!
ಹೋಂಡಾ ಕುಟುಂಬವು ತನ್ನೆಲ್ಲ ಗ್ರಾಹಕರು ಸುರಕ್ಷತಾ ಉಪಕ್ರಮಗಳಾದ ಮುಖಗವಸು ಧರಿಸುವುದು, ಎಲ್ಲ ಸಂಪರ್ಕ ಜಾಲದ ಸ್ಪರ್ಶ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಅನುಸರಿಸಲು ಕೇಳಿಕೊಳ್ಳುತ್ತದೆ. ಹೋಂಡಾ ಜಾಯ್ ಕ್ಲಬ್‍ನ ಸರಿಸಾಟಿ ಇಲ್ಲದ ಲಾಭಗಳು  ಹೋಂಡಾ ದ್ವಿಚಕ್ರ ವಾಹನ ಖರೀದಿಯ ಸಂತೋಷವು ನಂತರವೂ ಮುಂದುವರೆಯಲಿದೆ. ಗ್ರಾಹಕರು ಹೋಂಡಾ ಜಾಯ್ ಕ್ಲಬ್‍ನ ಸದಸ್ಯರಾಗುವ ಮೂಲಕ ಗರಿಷ್ಠ ಪ್ರಮಾಣದಲ್ಲಿ ಸವಲತ್ತು, ಪುರಸ್ಕಾರ ಮತ್ತು ಸರಿಸಾಟಿ ಇಲ್ಲದ ಇತರ ಪ್ರಯೋಜನಗಳನ್ನು ಪಡೆದುಕೊಳ್ಳಲಿದ್ದಾರೆ. 

ದ್ವಿಚಕ್ರ ವಾಹನ ಉದ್ದಿಮೆಯಲ್ಲಿ ಮೊದಲ ಬಾರಿಗೆ ಪರಿಚಯಿಸಿರುವ ಡಿಜಿಟಲ್ ಲಾಯಲ್ಟಿ ಪ್ರೋಗ್ರಾಂನ ಪ್ರಯೋಜನ ಪಡೆದುಕೊಳ್ಳಬಹುದು. ಕೇವಲ ರೂ 349 ಪಾವತಿಸಿ ಸದಸ್ಯರಾದವರಿಗೆ ಪ್ರಯೋಜನಗಳ ದೊಡ್ಡ ಪಟ್ಟಿಯೇ ಇದೆ. ತಕ್ಷಣವೇ ಮೊಬಿಕ್ವಿಕ್‍ನಲ್ಲಿ ರೂ. 200 ಹಣ ಮರುಪಾವತಿ, 340 ಹೋಂಡಾ ಕರೆನ್ಸಿಗಳ ಕ್ರೆಡಿಟ್ ಮತ್ತು ರೂ. 1 ಲಕ್ಷ ಮೊತ್ತದ ವೈಯಕ್ತಿಕ ಅಪಘಾತ ವಿಮೆ ಸೌಲಭ್ಯ ದೊರೆಯಲಿದೆ. ಹೋಂಡಾ ಜಾಯ್ ಕ್ಲಬ್‍ನ ಸದಸ್ಯರಾದವರು ವಾಹನದ ಸರ್ವಿಸ್, ಬಿಡಿಭಾಗ, ಲೇಬರ್ ಚಾರ್ಜಸ್, ಫ್ರೀ ಪಿಕ್ ಅಪ್ ಮತ್ತು ಡ್ರಾಪ್ ಮತ್ತಿತರ ಸೌಲಭ್ಯ ಪಡೆದುಕೊಳ್ಳಲಿದ್ದಾರೆ. ಈ ಸೌಲಭ್ಯಗಳನ್ನು ದೇಶದಾದ್ಯಂತ ಇರುವ ಹೋಂಡಾ ಜಾಲದಲ್ಲಿ ಪಡೆದುಕೊಳ್ಳಬಹುದು. ಹೋಂಡಾದ ದ್ವಿಚಕ್ರ ವಾಹನ ಖರೀದಿಸಲು ಇತರರನ್ನು ಉತ್ತೇಜಿಸಿದರೆ ಅಥವಾ ತಮ್ಮ ಹಾಲಿ ಹೋಂಡಾ 2ವೀಲರ್ ಅನ್ನು ಹೊಸ ವಾಹನಕ್ಕೆ ವಿನಿಮಯ ಮಾಡಿಕೊಂಡರೆ ಬೋನಸ್ ಪಾಯಿಂಟ್ಸ್‍ಗಳನ್ನು ಗಳಿಸಬಹುದು. ಇದಿಷ್ಟೇ ಅಲ್ಲ. ಗಳಿಸಿದ ಪಾಯಿಂಟ್ಸ್‍ಗಳನ್ನು ಇತರ 30 ಮುಂಚೂಣಿ ಬ್ರ್ಯಾಂಡ್ ಮಳಿಗೆಗಳಲ್ಲಿ ಬಳಸಬಹುದು. ರೆಸ್ಟೊರೆಂಟ್ಸ್, ಔಷಧಿ, ಮನರಂಜನೆ, ಜೀವನಶೈಲಿಯ ಉತ್ಪನ್ನ, ವಸ್ತ್ರ ಮತ್ತು ಕಲ್ಯಾಣ್ ಜುವೆಲರಿಯಲ್ಲಿಯೂ ವೆಚ್ಚ ಮಾಡಬಹುದು. *ಉಳಿತಾಯವನ್ನು ಮಾರುಕಟ್ಟೆಯಲ್ಲಿನ ಸಾಮಾನ್ಯ ಯೋಜನೆಗಳಿಗೆ ಹೋಲಿಸಿ ನಿರ್ದಿಷ್ಟ ಸಾಲದ ಮೊತ್ತ ಮತ್ತು ಅವಧಿಗೆ ಲೆಕ್ಕ ಹಾಕಲಾಗುವುದು. ಸಾಲದ ಮೊತ್ತ ಮತ್ತು ಮರುಪಾತಿ ಅವಧಿ ಆಧರಿಸಿ ಉಳಿತಾಯವು ವ್ಯತ್ಯಾಸಗೊಳ್ಳುತ್ತದೆ.