350 ಸಿಸಿಯ ಹೋಂಡಾ ಹೈನೆಸ್ ಬಂತು ದಾರಿಬಿಡಿ!
ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಲಾಂಗ್ ರೈಡ್, ವೀಕೆಂಡ್ ಟ್ರಿಪ್ ಮತ್ತೆ ಆರಂಭಗೊಂಡಿದೆ. ಇಷ್ಟೇ ಅಲ್ಲ ಹೆಚ್ಚಿನವರು ತಮ್ಮ ಒತ್ತಡದ ಬದುಕಿನಿಂದ ಮುಕ್ತರಾದಲು ಬೈಕ್ ಟ್ರಿಪ್ ಆಯೋಜಿಸುವುದು ಸಾಮಾನ್ಯ. ಇದೀಗ ಹೀಗೆ ಟ್ರಿಪ್ ಮಾತ್ರವಲ್ಲ, ಕಚೇರಿ, ದಿನನಿತ್ಯದ ಬಳಕೆಗೂ ಉಪಯುಕ್ತವಾಗುವ 250 ಸಿಸಿಯ ಹೊಂಡಾ ಹೈನೆಸ್ ಬೈಕ್ ಬಿಡುಗಡೆಯಾಗಿದೆ
ತರುಣ, ತರುಣಿಯರೆಲ್ಲಾ ಲಾಂಗ್‌ರೈಡ್ ಆಶೆಯನ್ನು ಹೊತ್ತು ಓಡಾಡುವ ಹೊತ್ತಿಗೆ ಹೋಂಡಾ ಕಂಪನಿ ಅವರೆಲ್ಲರ ಚಿತ್ತವನ್ನು ತಮ್ಮೆಡೆಗೆ ಸೆಳೆಯಲು 350 ಸಿಸಿಯ ಒಂದು ಮಾಸ್ಟರ್ ಬೈಕ್ ಅನ್ನು ಹೊರತಂದಿದೆ. ನೋಡುವುದಕ್ಕೆ ಚೆನ್ನಾಗಿಯೂ ಓಡಿಸಲೂ ಆರಾಮದಾಯಕವಾಗಿಯೂ ಇರಬಹುದು ಎಂದೆನ್ನಿಸುವ ಈ ಬೈಕಿನ ಹೆಸರು ಹೋಂಡಾ ಹೈನೆಸ್ ಸಿಬಿ 350. ಇದರ ಆರಂಭಿಕ ಬೆಲೆ ರು.1.90 ಲಕ್ಷ.
ಹೊಂಡಾ ಗ್ರೇಸಿಯಾ 125 BS6 ಆಟೋಮ್ಯಾಟಿಕ್ ಸ್ಕೂಟರ್ ಬಿಡುಗಡೆ!..
ಎಲ್‌ಇಡಿ ಲೈಟುಗಳು, ಟ್ರಾಕ್ಷನ್ ಕಂಟ್ರೋಲ್, ಡ್ಯುಯಲ್ ಎಬಿಎಸ್ ಇದರ ಪ್ರಮುಖ ಆಕರ್ಷಣೆಗಳು. ಫೋನಿಗೆ ಬ್ಲೂಟೂಥ್ ಮೂಲಕ ಸ್ಮಾರ್ಟ್‌ಫೋನ್ ಕನೆಕ್ಟ್ ಮಾಡಿಕೊಂಡರೆ ಧ್ವನಿ ಮೂಲಕವೇ ಸಂಗೀತ, ಕಾಲ್ ಮ್ಯಾನೇಜ್ ಮಾಡಬಹುದಾದ ಸ್ಮಾರ್ಟ್ ವಾಯ್‌್ಸ ಕಂಟ್ರೋಲ್ ಸಿಸ್ಟಮ್ ವ್ಯವಸ್ಥೆ ಈ ಬೈಕಿನ ಸೂಪರ್ ಫೀಚರ್. ಡಿಎಲ್‌ಎಕ್ಸ್ ಮತ್ತು ಡಿಎಲ್‌ಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಈ ಬೈಕು ಲಭ್ಯವಿದೆ.
ಆಕರ್ಷಕ ವಿನ್ಯಾಸ, ಹೊಸತನಗಳೊಂದಿಗೆ ಹೊಂಡಾ ಲಿವೊ BS6 ಬೈಕ್ ಬಿಡುಗಡೆ.
5 ಸ್ಟೊ್ರೕಕ್ ಓಎಚ್ಸಿ ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿರುವ ಹೈನೆಸ್ 3000 ಆರ್‌ಪಿಎಂಗೆ 30 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎಂಥಾ ರೋಡುಗಳಲ್ಲೂ ಚಲಿಸುವಂತೆ ಬೈಕು ರೂಪಿಸಲಾಗಿದೆ ಎನ್ನುವುದು ಹೋಂಡಾದ ಭರವಸೆ. 1107 ಮಿಮೀ ಎತ್ತರ, 181 ಕೆಜಿ ಭಾರದ ಈ ಬೈಕು 166 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಆರು ಬಣ್ಣಗಳ ಆಯ್ಕೆ ಸಿಗಲಿದೆ. ನಿಮ್ಮಿಷ್ಟದ ಬಣ್ಣಕ್ಕೆ ಜಯವಾಗಲಿ
.
ಬೈಕು ಮೆಚ್ಚುವವರು 5000 ರೂ ಟೋಕನ್ ಅಡ್ವಾನ್ಸ್ ಕೊಟ್ಟು ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. ಆದಷ್ಟುಶೀಘ್ರ ಬೈಕು ಕೈಗೆ ಸೇರಿಸುವ ಭರವಸೆ ಕಂಪನಿ ಕೊಡುತ್ತಿದೆ. ಈ ಬೈಕನ್ನು ಹೋಂಡಾ ಸಂಸ್ಥೆಯ ಮ್ಯಾನೇಜಿಂಗ್ ಆಫೀಸರ್ ನೋರಿಯಾಕಿ ಅಬೆ, ಆಪರೇಟಿಂಗ್ ಆಫೀಸರ್ ಮಸಯುಕಿ ಇಗಾರಸಿ, ಇಂಡಿಯಾ ವಿಭಾಗ ಮುಖ್ಯಸ್ಥ ಅತ್‌ಸುಶಿ ಓಗಾಟ ಬಿಡುಗಡೆಗೊಳಿಸಿದ್ದಾರೆ.