ಗುರುಗಾಂವ್(ನ.17): ಹೋಂಡಾ ಮೋಟರ್‍ಸೈಕಲ್ & ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್  ಸ್ಪೇನ್‍ನ ಅತಿದೊಡ್ಡ ಪೆಟ್ರೋಲಿಯಂ ಕಂಪನಿ ರೆಪ್ಸೋಲ್ ಜತೆ ಪ್ರಮುಖ ಪಾಲುದಾರಿಕೆ ಒಪ್ಪಂದ ಮಾಡಿಕೊಂಡು 'ಹೋಂಡಾ ರೆಪ್‍ಸೋಲ್ ಮೋಟೊ ಬೈಕರ್ & ಮೋಟೊ ಸ್ಕೂಟರ್' ಎಂಜಿನ್ ಆಯಿಲ್ ಬಿಡುಗಡೆ ಮಾಡಿದೆ. 

ಭಾರತದ ರಸ್ತೆಗಿಳಿದ H Ness-CB350, ವಿತರಣೆ ಆರಂಭಿಸಿದ ಹೊಂಡಾ!.

ಜಪಾನ್‍ನ ಹೋಂಡಾ ಮೋಟರ್ ಕಂಪನಿ ಲಿಮಿಟೆಡ್‍ನಿಂದ ಪರೀಕ್ಷಿಸಲ್ಪಟ್ಟು, ಶಿಫಾರಸ್ಸು ಮಾಡಲಾದ ಎಂಜಿನ್ ಆಯಿಲ್ ಅನ್ನು ಹೋಂಡಾ ರೆಪ್ಸೋಲ್ ಮೋಟೊ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ ಹಾಗೂ ಇದನ್ನು ವಿಶೇಷವಾಗಿ ಹೋಂಡಾ ದ್ವಿಚಕ್ರ ವಾಹನಗಳಿಗಾಗಿಯೇ ಉತ್ಪಾದಿಸಲಾಗುತ್ತದೆ.

ಭಾರತದಿಂದ ಯುರೋಪ್ ಮಾರುಕಟ್ಟೆಗೆ ರಫ್ತು, ಹೊಸ ದಾಖಲೆ ನಿರ್ಮಿಸಿದ ಹೋಂಡಾ!

ಸುಧೀರ್ಘ ಎಂಜಿನ್ ಬಾಳ್ವಿಕೆ ಸುರಕ್ಷೆಯನ್ನು ಒದಗಿಸುವ ಜತೆಗೆ ಇದು ಇಂಧನ ಕ್ಷಮತೆಯನ್ನು ಹೆಚ್ಚಿಸುವುದಲ್ಲದೇ ಕಡಿಮೆ ನಿರ್ವಹಣಾ ವೆಚ್ಚಕ್ಕೂ ಸಹಕಾರಿಯಾಘಲಿದೆ. 'ಹೋಂಡಾ ರೆಪ್‍ಸೋಲ್ ಮೋಟೊ ಬೈಕರ್ & ಮೋಟೊ ಸ್ಕೂಟರ್' ಎಂಜಿನ್ ಆಯಿಲ್, ಕ್ಷಿಪ್ರ ವೇಗವರ್ಧನೆಯೊಂದಿಗೆ ತ್ವರಿತ ಚಾಲನೆಗೆ ಮತ್ತು ಎಂಜಿನ್ ಬಿಡಿಭಾಗಗಳು ಕಲ್ಮಶ ಮುಕ್ತವಾಗಿರಲು ನೆರವಾಗುತ್ತದೆ.

ಸಹ ಬ್ರಾಂಡ್‍ನ ಎಂಜಿನ್ ಆಯಿಲ್ ಎರಡು ವಿಶೇಷ ಗ್ರೇಡ್‍ಗಳಲ್ಲಿ ಬಿಡುಗಡೆಯಾಗಿದ್ದು, ಹೋಂಡಾ ಮೋಟರ್ ಸೈಕಲ್‍ಗಳಿಗಾಗಿ ಹೋಂಡಾ ರೆಪ್ಸೋಲ್ ಮೋಟೊ ಬೈಕರ್ 10W30MA ಮತ್ತು ಹೋಂಡಾ ಸ್ಕೂಟರ್‍ಗಳಿಗಾಗಿ ಹೋಂಡಾ ರೆಪ್ಸೋಲ್ ಮೋಟೊ ಸ್ಕೂಟರ್ 10W30MB ಎಂಜಿನ್ ಆಯಿಲ್ ಬಿಡುಗಡೆ ಮಾಡಿದೆ.

ಎರಡೂ ಬಗೆಯ ಎಂಜಿನ್ ಆಯಿಲ್‍ಗಳು 800 ಮಿಲಿಲೀಟರ್, 900 ಮಿಲಿಲೀಟರ್ ಮತ್ತು 1000 ಮಿಲಿಲೀಟರ್ ಪ್ಯಾಕ್‍ಗಳಲ್ಲಿ ಲಭ್ಯವಿದ್ದು, ಮುಕ್ತ ಮಾರುಕಟ್ಟೆಯಲ್ಲಿ ನವೆಂಬರ್‌ನಿಂದಲೇ ಲಭ್ಯವಿದೆ.

ಗ್ರಾಹಕ ತೃಪ್ತಿಯು ಹೋಂಡಾ 2ವ್ಹೀಲರ್ಸ್ ಇಂಡಿಯಾದ ಪ್ರಮುಖ ಧ್ಯೇಯವಾಗಿದೆ. ಗುಣಮಟ್ಟದ ಉತ್ಪನ್ನಗಳು ಮತ್ತು ಸವೆಯನ್ನು ನಮ್ಮ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ನಾವು ರೆಪ್ಸೋಲ್ ಲ್ಯೂಬ್ರಿಕೆಂಟ್ ಜತೆ ಕೈಜೋಡಿಸಿ ಹೋಂಡಾ ರೆಪ್ಸೋಲ್ ಮೋಟೊ ಎಂಬ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದ್ದೇವೆ. ಇದನ್ನು ವಿಶೇಷವಾಗಿ ಜಪಾನ್‍ನ ಹೋಂಡಾ ಮೋಟರ್ ಕಂಪನಿ ಲಿಮಿಟೆಡ್ ಹೋಂಡಾ ದ್ವಿಚಕ್ರ ವಾಹನ ಎಂಜಿನ್‍ಗಳಿಗಾಗಿಯೇ ಅಭಿವೃದ್ಧಿಪಡಿಸಿದೆ & ಅನುಮೋದಿಸಿದೆ. ಈ ಪ್ರಮುಖ ಹೆಜ್ಜೆಯಿಂದಾಗಿ ಎಲ್ಲ ಜಿಪಿ ಪೆಟ್ರೋಲಿಯಂ ಮಳಿಗೆಗಳಲ್ಲಿ ಗ್ರಾಹಕರಿಗೆ ಎಂಜಿನ್ ಆಯಿಲ್ ಲಭ್ಯವಾಗಲಿದ್ದು, ಈ ಮೂಲಕ ಸವಾರಿ ಹಾಗೂ ಮಾಲೀಕತ್ವ ಅನುಭವ ವಿಸ್ತಾರಗೊಳ್ಳಲಿದೆ ಎಂದು  ಹೋಂಡಾ ಮೋಟರ್‍ಸೈಕಲ್ & ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಗ್ರಾಹಕ ಸೇವಾ ವಿಭಾಗದ ಹಿರಿಯ ಉಪಾಧ್ಯಕ್ಷ ಪ್ರದೀಪ್ ಕುಮಾರ್ ಪಾಂಡೆ, ಹೇಳಿದರು.

ರೆಪ್ಸೋಲ್ ಮತ್ತು ಹೋಂಡಾ ಕಳೆದ 26 ವರ್ಷಗಳಿಂದ ರೆಪ್ಸೋಲ್ ಹೋಂಡಾ ಮೋಟೊ ಜಿಪಿ ತಂಡದ ಪಾಲುದಾರರಾಗಿವೆ. ಹೀಗೆ ಪಡೆದ ಎಲ್ಲ ಅನುಭವಗಳ ಆಧಾರದಲ್ಲಿ ಬೇಡಿಕೆ ಹಂತದ ಸ್ಪರ್ಧೆಯನ್ನು ಮೀರಿ ಲ್ಯೂಬ್ರಿಕೆಂಟ್‍ಗಳನ್ನು ಅಭಿವೃದ್ಧಿಪಡಿಸಿ ಇದನ್ನು ವಾಣಿಜ್ಯ ಉತ್ಪನ್ನವಾಗಿ ರೂಪಿಸಲು ಸಾಧ್ಯವಾಗಿದೆ. ಸಹ ಬ್ರಾಂಡ್ ಲ್ಯೂಬ್ರಿಕೆಂಟ್‍ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ ಈ ಮೈತ್ರಿಯನ್ನು ಬಲಪಡಿಸಲು ನಮಗೆ ಅತೀವ ರೋಮಾಂಚನವಾಗಿದೆ ಜತೆಗೆ ಇದು ನಮ್ಮ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಲು ಅವಕಾಶ ಮಾಡಿಕೊಟ್ಟಿದೆ" ಎಂದು ವಿವರಿಸಿದ್ದಾರೆ.
ಈ ಉತ್ಪನ್ನ ಬಿಡುಗಡೆ ಬಗ್ಗೆ ಮಾತನಾಡಿದ ಜಿಪಿ ಪೆಟ್ರೋಲಿಯಮ್ಸ್ ಲಿಮಿಟೆಡ್‍ನ ಸಿಇಓ ಪ್ರಶಾಂತ್ ಆಚಾರ್, "ಹೋಂಡಾ ಜತೆ ಪಾಲುದಾರಿಕೆ ಮಾಡಿಕೊಂಡು ಭಾರತೀಯ ಮೋಟರ್‍ಸೈಕಲ್ ಮತ್ತು ಸ್ಕೂಟರ್ ಉತ್ಸಾಹಿಗಳಿಗಾಗಿ  ಸಹ ಬ್ರಾಂಡ್‍ಪ್ಯಾಕ್ ಬಿಡುಗಡೆ ಮೂಲಕ ರೆಪ್ಸೋಲ್ ಹೋಂಡಾ ಗೆಲುವಿನ ಸೂತ್ರವನ್ನು ಭಾರತಕ್ಕೆ ತರಲು ನಮಗೆ ಅತೀವ ಸಂತಸವಾಗುತ್ತಿದೆ. ಹೋಂಡಾ ರೆಪ್ಸೋಲ್ ಮೋಟೊ ಎಂಜಿಲ್ ಆಯಿಲ್ ಅನ್ನು ಅತ್ಯುತ್ಕøಷ್ಟ ಗುಣಮಟ್ಟದ ಬೇಸ್ ಆಯಿಲ್ ಮತ್ತು ಸಂಯೋಜನೆಗಳಿಗೆ ಉತ್ಪಾದಿಸಲಾಗಿದೆ. ಈ ಪಾಲುದಾರಿಕೆಯು ಒಇಎಂ ಚಾಲಿತ ಸಹ ಬ್ರಾಂಡ್‍ನ ದ್ವಿಚಕ್ರ ವಾಹನ ಲ್ಯೂಬ್ರಿಕೆಂಟ್ ವಲಯದಲ್ಲಿ  ನಮ್ಮ ಪ್ರವೇಶಕ್ಕೆ ಕಾರಣವಾಗಿದೆ ಎಂದು ರೆಪ್ಸೋಲ್‍ನ ಲ್ಯೂಬ್ರಿಕೆಂಟ್ಸ್ ವಭಾಗದ ನಿರ್ದೇಶಕಿ ಕ್ಲಾರಾ ವೆಲಾಸ್ಕೊ ಹೇಳಿದರು.