ಗುರುಗ್ರಾಂ(ಅ.22): ಕುತೂಹಲದಿಂದ ಎದುರು ನೋಡುತ್ತಿದ್ದ ‘ಹೈನೆಸ್‍ನ ಘರ್ಜನೆ’ಯು ಈಗ ಭಾರತದ ರಸ್ತೆಗಳಿಗೆ ಇಳಿದಿದ್ದು, ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಗ್ರಾಹಕರಿಗೆ H Ness-CB350 ವಿತರಿಸಲು ಇಂದು ಚಾಲನೆ ನೀಡಿದೆ. ಈ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದ್ದ  H Ness-CB350 ಹೋಂಡಾದ ಮಧ್ಯಮ ಗಾತ್ರದ 350 ರಿಂದ 500 ಸಿಸಿ ಸಾಮಥ್ರ್ಯದ ಮೋಟರ್ ಸೈಕಲ್ ವಿಭಾಗದಲ್ಲಿನ ಭಾರತದ ಮೊದಲ ವಾಹನವಾಗಿದೆ.

ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ H'Ness CB 350 ಬೈಕ್ ಬಿಡುಗಡೆ!

ಹೋಂಡಾದ ಸಿಬಿ ಬ್ರ್ಯಾಂಡ್‍ನ ಶ್ರೀಮಂತ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ  H Ness-CB350 ಅನ್ನು ಸುಧಾರಿತ ಹೊಸ ಸೌಲಭ್ಯಗಳು ಮತ್ತು ಶ್ರೇಷ್ಠ ಗುಣಮಟ್ಟದ ಹಳೆಯ ಹೊಳಪಿನೊಂದಿಗೆ ಅಭಿವೃದ್ಧಿಪಡಿಸಲಾಗಿದೆ.  H Ness-CB350 ಇದು ಹೋಂಡಾದ ಸಂಪೂರ್ಣ ಪ್ರೀಮಿಯಂನ ಅತ್ಯುನ್ನತ ಬೈಕ್‍ಗಳ ವಿಭಾಗವಾಗಿರುವ ಬಿಗ್‍ವಿಂಗ್ ಖಾತೆಯಲ್ಲಿನ 3ನೇ ಬಿಎಸ್6 ಮಾದರಿ ಬೈಕ್ ಆಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯುತ್ತಮ ದರ್ಜೆಯ ಸೌಲಭ್ಯಗಳು  H Ness-CB350 ಅನ್ನು ಘನತೆ - ಗೌರವ ವಿಸ್ತರಿಸುವ ನಿಜವಾದ ಸಂಗಾತಿಯನ್ನಾಗಿ ರೂಪಿಸಿವೆ.  ಭಾರತದಲ್ಲಿ ರಂಜನೀಯ ಬೈಕ್ ಸವಾರಿ ಅನುಭವ ವಿಸ್ತರಿಸುವ ನಮ್ಮ ಬದ್ಧತೆಗೆ  H Ness-CB350 ಸಾಕ್ಷಿಯಾಗಿದೆ. ಹೋಂಡಾದ ಸಿಬಿ ಡಿಎನ್‍ಎದ ಶ್ರೀಮಂತ ಪರಂಪರೆಯನ್ನು ಹೆಮ್ಮೆಯಿಂದ ಮುಂದುವರೆಸಿಕೊಂಡು ಹೋಗುತ್ತಿರುವ   H Ness-CB350 ಮಧ್ಯಮ ಗಾತ್ರದ ಮೋಟರ್ ಸೈಕಲ್‍ನ ಮಾಲೀಕತ್ವ ಹೊಂದುವ ಉತ್ಸಾಹಿಗಳ ನಿರೀಕ್ಷೆಗಳನ್ನು ನಿಜ ಮಾಡಲಿದೆ. ಗ್ರಾಹಕರಿಗೆ ವಿತರಿಸುವುದಕ್ಕೆ ಇಂದು ಚಾಲನೆ ನೀಡುವ ಮೂಲಕ ಭಾರತದ ರಸ್ತೆಗಳಲ್ಲಿ ಬೈಕ್ ಸವಾರಿಯ ಹೊಸ ಮೋಜು ತಂದಿದ್ದೇವೆ ಎಂದು ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.

ಅಗತ್ಯ ವಿಶ್ವಾಸಾರ್ಹತೆ ಗ್ರಾಹಕರ ಸಂತಸ ಹೆಚ್ಚಿಸಲು ಹೋಂಡಾ, ಈ ವಿಭಾಗದಲ್ಲಿ ಮೊದಲ ಬಾರಿಗೆ 6 ವರ್ಷಗಳ ವಾರಂಟಿ ಪ್ಯಾಕೇಜ್* ನೀಡುತ್ತಿದೆ (* 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ + 3 ವರ್ಷಗಳ ವಾರಂಟಿ ವಿಸ್ತರಣೆಯ ಆಯ್ಕೆ ಸೌಲಭ್ಯ)