ಹೀರೋ ಮೋಟಾರ್ ಸಂಪೂರ್ಣ ಡಿಜಿಟಲ್, ವಾಹನ ಖರೀದಿಗೆ ಸುಲಭ ಮಾರ್ಗ!
ಹೀರೋ ಮೋಟಾರ್ ಇದೀಗ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಿಸಿಕೊಂಡು ಮಾರಾಟ ಚುರುಕುಗೊಳಿಸಿದೆ. ಆನ್ ಲೈಟ್ ಮಾರಾಟ ವೇದಿಕೆ ನಿರ್ಮಿಸಿರುವ ಹೀರೋ, ಗ್ರಾಹಕರಿಗೆ ಸುಲಭವಾಗಿ, ಕೈಗೆಟುಕುವ ರೀತಿಯಲ್ಲಿ ವಾಹನ ವಿತರಿಸಲು ಮುಂದಾಗಿದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು(ಜೂ.08) : ಕೊರೋನಾ ವೈರಸ್ ಕಾರಣ ಇದೀಗ ಹೆಚ್ಚಿನವರು ಮನೆಯಿಂದ ಹೊರಬರುತ್ತಿಲ್ಲ. ವೈರಸ್ ಹರಡುವ ಭೀತಿ ಕಾಡುತ್ತಿದೆ. ಹೀರೋ ಮೋಟಾರ್ಸ್ ಈಗಾಗಲೇ ಆನ್‌ಲೈನ್ ಮಾರಾಟಕ್ಕೆ ಚಾಲನೆ ನೀಡಿದೆ. ಇದೀಗ ಸಂಪೂರ್ಣ ಡಿಜಿಟಲ್ ರೂಪದಲ್ಲಿ ವಾಹನ ಖರೀದಿಗೆ ಅವಕಾಶ ಮಾಡಿದೆ. ಗ್ರಾಹಕರು ನೇರವಾಗಿ ಹೀರೋ ಮೋಟಾರ್ ಅಧೀಕೃತ ವೆಬ್‍ಸೈಟ್ ಮೂಲಕ ವಾಹನವನ್ನು ಸುಲಭವಾಗಿ ಖರೀದಿಸಬಹುದು.
ಲಾಕ್‌ಡೌನ್ ನಡುವೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗೆ ಭರ್ಜರಿ ಆಫರ್, ಆನ್‌ಲೈನ್ ಮೂಲಕ ವ್ಯವಹಾರ!
ಆನ್‌ಲೈನ್ ಮೂಲಕ ವಾಹನ ಖರೀದಿ, ಡೆಲೆವರಿ ಎಲ್ಲವೂ ಸುಲಭವಾಗಿದೆ. ವೆಬ್‌ಸೈಟ್‌ನಲ್ಲಿ ಎಕ್ಸ್ ಶೋ ರೂಂ ಬೆಲೆ, ಆನ್ ರೋಡ್ ಬೆಲೆ, ದಾಖಲೆ ಸಲ್ಲಿಕೆ ವಿವರ, ಡೀಲರ್ ಮಾಹಿತಿ, ಸಾಲ ಸೌಲಭ್ಯ, ಮಾರಾಟ ಆರ್ಡರ್, ದೃಢೀಕರಣ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ.
ಬೆಂಗಳೂರಿನಲ್ಲಿ ಸಾಮ್ರಾಜ್ಯ ವಿಸ್ತರಿಸಿದ ಹೀರೋ ಮೋಟಾರ್!
ಗ್ರಾಹಕರು ತಮಗೆ ಇಷ್ಟವಾದ ವಾಹನ, ಮಾಡೆಲ್, ಕಲರ್ ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ನಗರವನ್ನು ಆಯ್ಕೆ ಮಾಡಬೇಕು. ಈ ವೇಳೆ ಡೀಲರ್‌ಶಿಪ್ ಪಟ್ಟಿ ತೆರೆದಕೊಳ್ಳುತ್ತದೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್‍ಶಿಪ್ ಆಯ್ಕೆ ಮಾಡಿಕೊಳ್ಳಬಹುದು ಹಾಗೂ ಹಣ ಪಾವತಿಸಬಹುದು. ಎಕ್ಸ್ ಶೋರೂಂ ಹಾಗೂ ರಸ್ತೆ ಮೇಲಿನ ಬೆಲೆಯನ್ನು, ವೆಚ್ಚದ ಅಂಶಗಳ ಸಹಿತ ತೋರಿಸಲಾಗುತ್ತದೆ.
BS6 ಹೀರೋ ಸ್ಪ್ಲೆಂಡರ್ ಲಾಂಚ್, ಕಡಿಮೆ ಬೆಲೆ!
ಒಮ್ಮೆ ಹಣ ಪಾವತಿಯಾದ ನಂತರ ಗ್ರಾಹಕರಿಗೆ ಇ-ರಸೀದಿ ನೀಡಲಾಗುತ್ತದೆ. ಇದರ ತಪಾಸಣೆಗೆ ಸಂಖ್ಯೆ ನೀಡಲಾಗುತ್ತದೆ.ಒಮ್ಮೆ ಸಿಸ್ಟಮ್‍ನಲ್ಲಿ ತಪಾಸಣೆ ಮುಗಿದ ಮೇಲೆ, ಆಯ್ಕೆ ಮಾಡಲಾಗಿದ್ದ ಡೀಲರ್, ಒಬ್ಬ ಮಾರಾಟ ಸಹಾಯಕನನ್ನು ನಿಯೋಜಿಸುತ್ತದೆ. ಒಂದೊಮ್ಮೆ ಗ್ರಾಹಕರಿಗೆ ಆಸಕ್ತಿ ಇದ್ದಲ್ಲಿ, ರೀಟೈಲ್ ಸಾಲದ ವಿಕಲ್ಪವನ್ನೂ ಪಾವತಿ ಮಾಡುವ ಪ್ರಕ್ರಿಯೆ ಸಂದರ್ಭದಲ್ಲಿ ತೋರಿಸಲಾಗುತ್ತದೆ. ಗ್ರಾಹಕರ ಎಲ್ಲಾ ಪ್ರಶ್ನೆ/ವಿಚಾರಣೆಗಳಿಗೆ ಮಾರಾಟ ಸಹಾಯಕ ಉತ್ತರಿಸುತ್ತಾರೆ ಹಾಗೂ ದಾಖಲೀಕರಣ, ಸಾಲ ಸೌಲಭ್ಯ, ಇನ್‍ವಾಯ್ಸಿಂಗ್, ನೊಂದಣಿ ಮತ್ತು ಡೆಲಿವರಿ( ಮನೆಗೆ ಡೆಲಿವರಿ ಮಾಡುವ ವಿಕಲ್ಪದೊಂದಿಗೆ) ಮುಂತಾದ ಮುಂದಿನ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.
ಒಮ್ಮೆ ಆರ್ಡರ್ ಸೃಷ್ಟಿಯಾದ ನಂತರ ಗ್ರಾಹಕರಿಗೆ SMS ಬರುವುದರ ಜೊತೆಗೆ ಅವರು ದಾಖಲೆಗಳನ್ನು ಅಪ್ ಲೋಡ್ ಮಾಡುವ ವಿಭಾಗಕ್ಕೆ ಲಿಂಕ್ ಕಳುಹಿಸಲಾಗುತ್ತದೆ. ತಪಾಸಣೆ ನಂತರ ಮಾರಾಟ ಆರ್ಡರ್‌ನ ಪೂರ್ವವೀಕ್ಷಣೆಯನ್ನು ಗ್ರಾಹಕರಿಗೆ ಕಳಿಸಲಾಗುತ್ತದೆ. ಗ್ರಾಹಕರ ಒಪ್ಪಿಗೆ ದೊರೆತ ಬಳಿಕ ಇನ್‍ವಾಯ್ಸ್ ಸೃಷ್ಟಿಯಾಗುತ್ತದೆ, ಡೀಲರ್‌ನಿಂದ ನೊಂದಣಿಗೆ ಅರ್ಜಿ ಸಿದ್ಧಪಡಿಸಲಾಗುತ್ತದೆ ಹಾಗೂ ಗ್ರಾಹಕರು ಆಯ್ಕೆ ಮಾಡಿದ ಡೆಲಿವರಿ ವಿಕಲ್ಪದ ಪ್ರಕಾರ ವಾಹನವನ್ನು ಡೆಲಿವರಿ ಮಾಡಲಾಗುತ್ತದೆ. ಡೆಲಿವರಿ ಸಮಯದಲ್ಲಿ, ಆರ್ ಟಿ ಓ ನಿಂದ ಭೌತಿಕವಾಗಿ ಸಹಿ ಮಾಡಲಾದ ಅವಶ್ಯ ದಾಖಲೆಗಳನ್ನು ಗ್ರಾಹಕರಿಂದ ಸಂಗ್ರಹಿಸಲಾಗುತ್ತದೆ.
ಎಲ್ಲರ ಸುರಕ್ಷತೆ ಹಾಗೂ ಆರೋಗ್ಯವನ್ನು ಪ್ರಥಮ ಆದ್ಯತೆಯಾಗಿ ಗಮನದಲ್ಲಿರಿಸಿಕೊಂಡು, ಕಂಪನಿಯು ಬಹುಮುಖ ಡಿಜಿಟಲ್ ಮಾರಾಟ ನಂತರ ಸೇವೆಗಳನ್ನೂ ಆರಂಭಿಸಿದೆ. ಹೀರೊ ಆ್ಯಪ್ ಬಳಸಿ ಗ್ರಾಹಕರು ತಮಗೆ ಸಮೀಪವಿರುವ ಕಾರ್ಯಾಗಾರದಲ್ಲಿ ಸರ್ವಿಸ್ ಸೇವೆಯನ್ನು ಮುಂಗಡ ಕಾಯ್ದಿರಿಸಬಹುದು. ತಮ್ಮ ಸ್ವಂತ ಸರ್ವಿಸ್ ಜಾಬ್ ಕಾರ್ಡ್ ಸೃಷ್ಟಿಸಿಕೊಳ್ಳುವ ಮೂಲಕ ಕಾರ್ಯಾಗಾರಗಳಲ್ಲಿ ಯಾವುದೇ ರೀತಿಯ ಕಾಗದಪತ್ರ ಕೆಲಸಕ್ಕಾಗಿ ಭೌತಿಕ ಸಂಪರ್ಕವನ್ನು ತಪ್ಪಿಸಬಹುದು ಹಾಗೂ ಡಿಜಿಟಲ್ ಸ್ವೀಕೃತಿಯನ್ನು ಪಡೆದುಕೊಳ್ಳಬಹುದು. ಇದರಿಂದಾಗಿ, ವಾಹನದ ಪಿಕ್ ಅಪ್ ಮತ್ತು ಡ್ರಾಪ್ ಸಮಯಗಳಲ್ಲಿ ಕಾರ್ಯಾಗಾರಗಳಲ್ಲಿ ವ್ಯಯಿಸಬೇಕಾಗುವ ಸಮಯವನ್ನು ಕಡಿಮೆ ಮಾಡಬಹುದು.
ಭೇಟಿಗಳನ್ನು ಮುಂಗಡ ಕಾಯ್ದಿರಿಸಲು ಗ್ರಾಹಕರನ್ನು ಪ್ರೋತ್ಸಾಹಿಸುವುದರ ಜೊತೆಗೆ, ಡೀಲರ್/ಸರ್ವಿಸ್ ಸೆಂಟರ್‌ಗಳಲ್ಲಿ ಟೆಲಿ ಕರೆಗಾರರನ್ನು ನೇಮಿಸಿ ಡಿಜಿಟಲ್ ಮುಂಗಡ ಭೇಟಿಗೆ ಗ್ರಾಹಕರ ಕರೆಗಳನ್ನು ಸ್ವೀಕರಿಸಿ ಉತ್ತರಿಸುತ್ತಾರೆ. ವಿಪರೀತ ಜನಜಂಗುಳಿ ಸೇರುವುದನ್ನು ಹಾಗೂ ಸಾಮಾಜಿಕ ಅಂತರ ಕಾಪಾಡಲು ಸೇವೆಯ ರೂಪವನ್ನು ಬದಲಾಯಿಸಲಾಗಿದೆ.