ಬರುತ್ತಿದೆ TVS ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ - 80KM ಮೈಲೇಜ್ ರೇಂಜ್!

TVS ಮೋಟಾರ್ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಕ್ರಿಯಾನ್ ಮೂಲದ ನೂತನ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ಏನು? ಇದರ ಬೆಲೆ, ಮೈಲೇಜ್ ಎಷ್ಟು? ಇಲ್ಲಿದೆ ವಿವರ.
 

TVS Creon-based electric scooter will launch soon

ಚೆನ್ನೈ(ಮೇ.08): ಸ್ಕೂಟರ್ ಹಾಗೂ ಬೈಕ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ TVS ಇದೀಗ ಎಲೆಕ್ಟ್ರಿಕ್ ಸ್ಕೂಟರ್  ಬಿಡುಗಡೆ ಮಾಡಲು ಸಜ್ಜಾಗಿದೆ.  ಕ್ರಿಯಾನ್ ಮಾದರಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ತಯಾರಿ ನಡೆಸಿರುವ TVS  ಎಲೆಕ್ಟ್ರಿಕ್ ವಾಹನದಲ್ಲಿ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ. ಈ ಮೂಲಕ ಸದ್ಯ ಮಾರುಕಟ್ಟೆಯಲ್ಲಿರುವ ಒಕಿನಾವ, ಎದೆರ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪೈಪೋಟಿ ನೀಡಲು ರೆಡಿಯಾಗಿದೆ.

TVS Creon-based electric scooter will launch soon

ಇದನ್ನೂ ಓದಿ: 18 ತುಂಬಿಲ್ಲ, ಬೈಕ್ ಮೇಲೆ ಸವಾರಿ- 172 ಹುಡುಗರಿಗೆ ಪೊಲೀಸ್ ಕ್ಲಾಸ್!

ನೂತನ ಎಲೆಕ್ಟ್ರಿಕ್ ಸ್ಕೂಟರ್‍‌ನಲ್ಲಿ ಕ್ರಿಯಾನ್ ಬ್ಯಾಟರಿ ಬಳಸಲಾಗುತ್ತೆ. 3 ಲೀಥಿಯಂ-ಐಯಾನ್ ಬ್ಯಾಟರಿ ಉಪಯೋಗಿಸಲಾಗಿದೆ.   ಒಂದು ಗಂಟೆಯಲ್ಲಿ ಶೇಕಡಾ 80 ರಷ್ಟು  ಬ್ಯಾಟರಿ ಚಾರ್ಜ್ ಆಗಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ.  

ಇದನ್ನೂ ಓದಿ: ಬಜಾಜ್ ಅವೆಂಜರ್ 160 ABS ಬೈಕ್ ಬಿಡುಗಡೆ- ಬೆಲೆ ಎಷ್ಟು?

ಈ ವರ್ಷದ ಅಂತ್ಯದಲ್ಲಿ ಅಥವಾ 2020ರ ಆರಂಭದಲ್ಲಿ TVS ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿದೆ. ನೂತನ ಸ್ಕೂಟರ್ ಬೆಲೆ 72,000 ರೂಪಾಯಿಂದ  82,000 ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.  ವಿಶೇಷ ಅಂದರೆ ರೋಡ್ ಮ್ಯಾಪ್, ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಈ ಸ್ಕೂಟರ್‌ನಲ್ಲಿರಲಿದೆ.

Latest Videos
Follow Us:
Download App:
  • android
  • ios