Asianet Suvarna News Asianet Suvarna News

ಪೈಲಟ್ ಆಗಲು ಬಿಡದ ಬಡತನ: ತನ್ನದೇ ’ಹೆಲಿಕಾಪ್ಟರ್’ ನಿರ್ಮಿಸಿದ ರೈತನ ಮಗ!

ಪೈಲಟ್ ಆಗಲು ಬಿಡದ ಬಡತನ| ಪೈಲಟ್ ಆಗದಿದ್ದರೇನಂತೆ, ಹೆಲಿಕಾಪ್ಟರ್ ನಿರ್ಮಿಸಿದ ರೈನ ಮಗ| ಈತನ ಆವಿಷ್ಕಾರ ಕಂಡು ಇಡೀ ಊರೇ ಈತನೆಡೆ ಬೆರಗು ಕಣ್ಣುಗಳಿಂದ ನೋಡುತ್ತೆ

He Couldn Afford A Helicopter So This Guy From Bihar Decided To Turn His Car Into One
Author
Bangalore, First Published Aug 6, 2019, 3:23 PM IST

ಪಾಟ್ನಾ[ಆ.06]: ಬಿಹಾರದ ಓರ್ವ ಯುವಕ ಬಾಲ್ಯದಿಂದಲೂ ತಾನೊಬ್ಬ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದ, ಆದರೆ ಬಡತನದಿಂದಾಗಿ ಆತನ ಈ ಕನಸು ನನಸಾಗಲಿಲ್ಲ. ಆದರೆ ಇದರಿಂದ ಧೃತಿಗೆಡದ ಆತ ತನ್ನದೇ ಹೆಲಿಕಾಪ್ಟರ್ ಒಂದನ್ನು ನಿರ್ಮಿಸಿದ್ದಾನೆ. ಸದ್ಯ ೀತನ ಈ ಆವಿಷ್ಕಾರ ವಿಶ್ವದ ಗಮನ ಸೆಳೆದಿದೆ. ಸದ್ಯ ಈತನ ಕಠಿಣ ಪರಿಶ್ರಮ ಫಲ ಕೊಟ್ಟಿದ್ದು, ಖುದ್ದು ಇಂಜಿನಿಯರ್ ಗಳು ಕೂಡಾ ಇದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಿಹಾರದ ಛಾಪ್ರಾದ ಯುವಕ ಮಿಥಿಲೇಶ್

ವರದಿಗಳನ್ವಯ ಈ ಯುವಕ ಬಿಹಾರದ  ಛಾಪ್ರಾದ ರೈತ ಕುಟುಂಬದಲ್ಲಿ ಜನಿಸಿದ ಮಿಥಿಲೇಶ್ ತಾನೊಬ್ಬ ಪೈಲೆಟ್ ಆಗಬೇಕೆಂಬ ಕನಸು ಹೊತ್ತಿದ್ದ. ಆದರೆ ಆರ್ಥಿಕ ಸ್ಥಿತಿ ಚೆನ್ನಾಗಿರದ ಪರಿಣಾಮ ಅವರ ಈ ಇಚ್ಛೆ ಈಡೇರಲಿಲ್ಲ.

ಗಾಳಿಯಲ್ಲಿ ಹಾರುವುದಿಲ್ಲ ಈ ಹೆಲಿಕಾಪ್ಟರ್

ಮಿಥಿಲೇಶ್ ಪೈಲಟ್ ಆಗಬೇಕೆಂಬ ತನ್ನ ಆಸೆ ಈಡೇರಿಸಲು ಒಂದು ಟಾಟಾ ನ್ಯಾನೋ ಕಾರು ಖರೀದಿಸಿ, ಅದಕ್ಕೆ ಹೆಲಿಕಾಪ್ಟರ್ ರೂಪ ಕೊಟ್ಟಿದ್ದಾನೆ. ಈ ಕಾರಿನ ಡಿಸೈನ್ ಹೆಲಿಕಾಪ್ಟರ್ ನಂತಿದೆ. ಆದರೆ ಇದೊಂದು ಕಾರು-ಹೆಲಿಕಾಪ್ಟರ್ ಆಗಿದ್ದು, ಇದು ಕೇವಲ ರಸ್ತೆ ಮೇಲೆ ಚಲಿಸುತ್ತದೆ. ಈ ಕಾರು ಮಕ್ಕಳಿಗೆ ಬಹಳ ಇಷ್ಟವಾಗಿದೆ. ಅಲ್ಲದೇ ಮಿಥಿಲೇಶ್ ಇದನ್ನು ಡ್ರೈವ್ ಮಾಡಿಕೊಂಡು ಹೋಗುವಾಗ ಜನರೆಲ್ಲಾ ಆತನೆಡೆ ನೋಡುತ್ತಾರಂತೆ.

Follow Us:
Download App:
  • android
  • ios