Asianet Suvarna News Asianet Suvarna News

ಟ್ರಾಫಿಕ್ ಭಾರೀ ದಂಡಕ್ಕೆ ಗುಜರಾತ್ ಕಟ್ ಆಫ್... ನಮ್ಮಲ್ಲಿ ಯಾವಾಗ?

ಜನರ ಮನವಿಗೆ ಸ್ಪಂದಿಸಿದ ಗುಜರಾತ್ ಸರ್ಕಾರ/ ಟ್ರಾಫಿಕ್ ನಿಯಮದ ದಂಡಗಳನ್ನು ಅರ್ಧಕ್ಕಿಂತ ಕಡಿಮೆ ಮಾಡಿದ ವಿಜಯ್ ರೂಪಾನಿ/ ಕರ್ನಾಟಕದಲ್ಲಿ ಯಾವಾಗ? 

Gujarat Reduces Fines For Traffic Rules Helmet Seatbelt And Licence Violations
Author
Bengaluru, First Published Sep 10, 2019, 11:05 PM IST

ಗಾಂಧಿನಗರ[ಸೆ. 10]  ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆ ಸಾರ್ವಜನಿಕರಿಂದ ಇಡೀ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಗುಜರಾತ್ ಸರ್ಕಾರ ದಂಡದ ಪ್ರಮಾಣ ತಗ್ಗಿಸುವ ತೀರ್ಮಾನ ತೆಗೆದುಕೊಂಡಿದೆ.

ಗುಜರಾತ್ ಸಿಎಂ ವಿಜಯ್ ರೂಪಾನಿ ಈ ಬಗ್ಗೆ ಮಾಹಿತಿ ನೀಡಿದ್ದು, ಹೊಸ ಕಾಯ್ದೆಯಲ್ಲಿ ವಿಧಿಸುತ್ತಿರುವ ದಂಡದ ಮೊತ್ತ ಗರಿಷ್ಠ ಪ್ರಮಾಣದಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

6 ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!

ಹೊಸ ನಿಯಮ ಮತ್ತು ಗುಜರಾತ್ ದಂಡದ ವಿವರ

ಹೆಲ್ಮೆಟ್ ಹಾಕದಿದ್ದರೆ- 1000  ಗುಜರಾತ್- 500

ಸೀಟ್ ಬೆಲ್ಟ್ ಹಾಕದಿದ್ದರೆ- 1000 ಗುಜರಾತ್ 500

ಲೈಸನ್ಸ್ ಇಲ್ಲದಿದ್ದರೆ- 5000- ಗುಜರಾತ್ 2000

ಇನ್ನು ಆದರೆ ಲೈಸನ್ಸ್, ಆರ್ ಸಿ, ವಿಮೆ ಮೊದಲ ಬಾರಿಗೆ ಇಲ್ಲದಿದ್ದರೆ 500 ರೂ. ದಂಡ ವಿಧಿಸಿದರೆ, 2ನೇ ಬಾರಿಗೆ ಈ ಮೊತ್ತ ಕೇಂದ್ರ ಸರ್ಕಾರ ನೀತಿಗೆ ಅಡಿ ಅನ್ವಯವಾಗಲಿದೆ. ತ್ರಿಬಲ್ ರೈಡಿಂಗ್ ಮಾಡುವವರಿಗೆ ವಿಧಿಸಲಾಗುತ್ತಿದ್ದ 1 ಸಾವಿರ ರೂ. ದಂಡವನ್ನು 100 ರೂ.ಗಳಿಗೆ ಇಳಿಸಲಾಗಿದೆ.  

Follow Us:
Download App:
  • android
  • ios