ಬೆಂಗಳೂರು(ಡಿ.24): ವರ್ಷದಿಂದ ವರ್ಷಕ್ಕೆ ಭಾರತದ ಅಟೋಮೊಬೈಲ್ ಕ್ಷೇತ್ರ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಅದರಲ್ಲೂ ದ್ವಿಚಕ್ರವಾಹನಗ ವಿಭಾಗ ಮಾರಾಟದಲ್ಲಿ ದಾಖಲೆ ಬರೆಯುತ್ತಿದೆ. 2018ರ ಬೈಕ್ ಕಂಪೆನಿ ಹಾಗೂ ಗ್ರಾಹಕರಿಗೂ ಹೆಚ್ಚು ಖುಷಿ ನೀಡಿದೆ. 2018ರಲ್ಲಿ ಹಲವು ಬೈಕ್ ಲಾಂಚ್ ಆಗಿದ್ದರೆ, ಹಲವು ಬೈಕ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಲಾಂಚ್ ಆದ ಬೈಕ್‌ಗಳಲ್ಲಿ ಕೆಲವು ಗ್ರಾಹಕರ ನೆಚ್ಚಿನ ಬೈಕ್‌ಗಳಾಗಿವೆ. 2018ರಲ್ಲಿ ಗರಿಷ್ಠ ಟ್ರೆಂಡ್ ಆದ ಬೈಕ್‌ಗಳಲ್ಲಿ ಟಾಪ್ 5 ಬೈಕ್‌ ವಿವರ ಇಲ್ಲಿದೆ.

ಜಾವಾ ಮೋಟರ್‌ಸೈಕಲ್


2018ರಲ್ಲಿ ಟ್ರೆಂಡ್ ಆದ ಬೈಕ್‌ಗಳಲ್ಲಿ ಜಾವಾಗೆ ಮೊದಲ ಸ್ಥಾನ. ಜಾವಾ ಗೂಗಲ್‌‌ನಲ್ಲಿ ಟ್ರೆಂಡ್ ಆಗಿದ್ದು ಮಾತ್ರವಲ್ಲ, ಬೈಕ್ ಪ್ರೀಯರಲ್ಲೂ ಸಂಚಲನ ಮೂಡಿಸಿದೆ. 2019ರ ಮಾರ್ಚ್‌ನಲ್ಲಿ ಜಾವಾ ಬೈಕ್ ಗ್ರಾಹಕರ ಕೈಸೇರಲಿದೆ.

ಇದನ್ನೂ ಓದಿ: ನಿದ್ದೆ ಕಣ್ಣಿನಲ್ಲಿ BMW ಕಾರನ್ನ ವಿಮಾನ ತರ ಹಾರಿಸಿದ ಭೂಪ-ವೀಡಿಯೋ ವೈರಲ್!

ಟಿವಿಎಸ್ ಅಪಾಚೆ 160


ಗೂಗಲ್ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿ ಟಿವಿಎಸ್ ಅಪಾಚೆ ಬೈಕ್, ಅತ್ಯಾಕರ್ಷಕ ವಿನ್ಯಾಸ, ಆಧುನಿಕ ತಂತ್ರಜ್ಞಾನದೊಂದಿಗೆ ಗ್ರಾಹಕರಿಗೂ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿದೆ. 

ಇದನ್ನೂ ಓದಿ: ಸೆಪ್ಟೆಂಬರ್ 2019ರ ವರೆಗಿನ ಜಾವಾ ಬೈಕ್ ಸೋಲ್ಡ್ ಔಟ್!

ಸುಜುಕಿ ಇಂಟ್ರುಡರ್


ಸುಜುಕಿ ಇಂಟ್ರುಡರ್ 2017ರಲ್ಲಿ ಟ್ರೆಂಡ್ ಆಗಿತ್ತು. ಇನ್ನು 2018ರಲ್ಲೂ ಸುಜುಕಿ ಇಂಟ್ರುಡರ್ ಗ್ರಾಹಕರನ್ನ ಸೆಳೆದಿದೆ. ಬೈಕ್ ಪ್ರಿಯರು ಗೂಗಲ್‌ನಲ್ಲಿ ಸುಜುಕಿ ಇಂಟ್ರುಡರ್ ಬೈಕ್ ಕುರಿತು ಅನ್ವೇಷಿಸಿದ್ದಾರೆ. 

ಇದನ್ನೂ ಓದಿ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇದೆ ದುಬಾರಿ 5 ಕಾರುಗಳು!

ಟಿವಿಎಸ್ Nಟಾರ್ಕ್ 125


ಟಿವಿಎಸ್ ಕಂಪೆನಿಯ ಮೊದಲ 125 ಸ್ಕೂಟರ್  Nಟಾರ್ಕ್ ಸ್ಟೈಲೀಶ್ ಸ್ಕೂಟರ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. 2018ರಲ್ಲಿ ಟ್ರೆಂಡಿಂಗ್ ಪೈಕ್ ಈ ಸ್ಕೂಟರ್ 4ನೇ ಸ್ಥಾನ ಪಡೆದಿದೆ. 

ರಾಯಲ್ ಎನ್‌ಫೀಲ್ಡ್ ಟ್ವಿನ್ 650


ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಟ್ವಿನ್ ಬೈಕ್ ಬೈಕ್ ಕುರಿತು ಹೆಚ್ಚಿನ ಮಂದಿ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಬಿಡುಗಡೆಯಾಗ ಕೆಲ ದಿನಗಳಲ್ಲೇ ಇತರ ಟ್ರೆಂಡಿಂಗ್ ಬೈಕ್‌ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: