ನವದೆಹಲಿ(ಫೆ.14): ಪ್ರೇಮಿಗಳ ದಿನ ಭಾರತದ ಪ್ರಮುಖ 3 ವಿಮಾನ ಯಾನ ಸಂಸ್ಥೆಗಳು ಭರ್ಜರಿ ಆಫರ್ ನೀಡಿದೆ. ಈ ಆಫರ್ ನಿಗದಿತ ಅವಧಿಗೆ ಮೀಸಲಿಡಲಾಗಿದೆ. ಗೋ ಏರ್ ಫ್ಲೈಟ್ ಇಂದಿನಿಂದ(ಫೆ.14) ಸೆಪ್ಟೆಂಬರ್  30ರ ವರೆಗೆ ಆರಂಭಿಕ ಬೆಲೆ 957 ರೂಪಾಯಿಗೆ ವಿಮಾನ ಟಿಕೆಟ್ ನೀಡುತ್ತಿದೆ. 

ಇದನ್ನೂ ಓದಿ: ಶೀಘ್ರದಲ್ಲೇ ಕಲಬುರಗಿ ಏರ್ಪೋರ್ಟ್‌ನಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ

ನಿಗದಿತ ಅವಧಿ ಹಾಗೂ ನಿಗಧಿತ ಸ್ಥಳಗಳಿಗೆ  ವಿಮಾನ ಟಿಕೆಟ್ ಆರಂಭಿಕ ಬೆಲೆ 957 ರೂಪಾಯಿ ನಿಗದಿ ಮಾಡಲಾಗಿದೆ. ಟಿಕೆಟ್ ಬುಕ್ ಮಾಡುವ ಮುನ್ನ ಗೋ ಏರ್ ಟಿಕೆಟ್ ಷರತ್ತು ಸಂಪೂರ್ಣವಾಗಿ ಓದಿ ಬುಕ್ ಮಾಡಿಕೊಳ್ಳಿ. 

ಇದನ್ನೂ ಓದಿ: ಕೋಲಾರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ

ಗೋ ಏರ್ ಜೊತೆಗೆ ಇಂಡಿಗೋ ಕೂಡ ಭರ್ಜರಿ ಆಫರ್ ನೀಡಿದೆ. ಇಂಡಿಯಾ ಟೂರ್ ಪ್ಯಾಕೇಜ್ ಅಡಿ ಕೇವಲ 999 ರೂಪಾಯಿ ಆಫರ್ ನೀಡಲಾಗಿದೆ. ಫೆ.11 ರಿಂದ ಫೆ.14ರ ಒಳಗೆ ಬುಕ್ ಮಾಡಿಕೊಂಡವರಿಗೆ ಈ ಆಫರ್ ಸಿಗಲಿದೆ. ಆಫರ್ ಪ್ರಯಾಣದ ದಿನಾಂಕ ಮಾರ್ಚ್ 1 ರಿಂದ ಸೆಪ್ಟೆಂಬರ್ 30 ವರೆಗೆ ಇರಲಿದೆ.

ಫೆಬ್ರವರಿ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ