ನವದೆಹಲಿ(ಜ.13): ವಿಶ್ವವೇ ಈಗ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದು ಪರಿಸರಕ್ಕೆ ಪೂರಕ ಅನ್ನೋ ಕಾರಣದಿಂದ ಎಲ್ಲಾ ದೇಶಗಳು ಎಲೆಕ್ಟ್ರಿಕ್ ವಾಹನದತ್ತ ಗಮನಹರಿಸಿದೆ. 2030ರಲ್ಲಿ ಭಾರತವನ್ನು ಸಂಪೂರ್ಣ ಎಲೆಕ್ಟ್ರಿಕ್ ಮಯ ಮಾಡಲು ಕೇಂದ್ರ ಸರ್ಕಾರ ಬಹುದೊಡ್ಡ ಯೋಜನೆ ಹಾಕಿಕೊಂಡಿದೆ. ಆದರೆ ಎಲೆಕ್ಟ್ರಿಕ್ ವಾಹನ ಯುಗ ಭಾರತಕ್ಕೆ ಇತರ ದೇಶಗಳಿಗಿಂತ ಹೆಚ್ಚಿನ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ ಅನ್ನೋದು ಅಧ್ಯಯನದಿಂದ ಬಹಿರಂಗವಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರು ಶೋರೂಂ; ದಕ್ಷಿಣ ಭಾರತದಲ್ಲೇ ಮೊದಲು!

ಜರ್ಮನಿ ಆಟೋಮೊಬೈಲ್ ಕ್ಷೇತ್ರದ ರಾಜಧಾನಿ ಎಂದೇ ಪರಿಗಣಿಸಲಾಗುತ್ತದೆ. ಇದೇ ಜರ್ಮನಿ ಕೂಡ ಎಲೆಕ್ಟ್ರಿಕ್ ಕಾರುಗಳತ್ತ ಮುಖಮಾಡಿದೆ. ಇದೇ ಜರ್ಮನಿಯಲ್ಲಿ ಹ್ಯಾಂಡಲ್ಸ್‌ಬ್ಲಾಟ್ ನಡೆಸಿದ ಅಧ್ಯಯನದಲ್ಲಿ 2030ರ ವೇಳೆಗೆ ಎಲೆಕ್ಟ್ರಿಕ್ ವಾಹನದಿಂದ 4 ಲಕ್ಷ ಉದ್ಯೋಗಕ್ಕೆ ಕತ್ತರಿ ಬೀಳಲಿದೆ ಅನ್ನೋ ಆತಂಕಕಾರಿ ವರದಿ ಹೊರಬಿದಿದ್ದಿದೆ.

ಇದನ್ನೂ ಓದಿ: ಮಹೀಂದ್ರ KUV100 ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ!

ಜರ್ಮನಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಮಶೀನ್ ಮೂಲಕ ವಾಹನ ನಿರ್ಮಾಣ, ಬಿಡಿ ಭಾಗ ತಯಾರಿಕೆ ಮಾಡಲಾಗುತ್ತಿದೆ. ಯಂತ್ರಗಳಿಂದಲೇ ಹೆಚ್ಚಿನ ಕೆಲಸಗಳು ನಡೆಯುತ್ತವೆ. ಈ ದೇಶದಲ್ಲೇ 4 ಲಕ್ಷ ಉದ್ಯೋಗ ಕಡಿತಗೊಂಡರೆ,  ಭಾರತದ ಪರಿಸ್ಥಿತಿ ಶೋಚನೀಯವಾಗಲಿದೆ. ಕಾರಣ ಭಾರತದಲ್ಲಿ ಕಾರ್ಮಿಕರನ್ನೇ ನೆಚ್ಚಿಕೊಂಡ ಕಂಪನಿಗಳು ಹೆಚ್ಚು. ವಾಹನದ ಬಿಡಿ ಭಾಗ ತಯಾರಿಕೆ ಸೇರಿದಂತೆ ಆಟೋಕಂಪನಿಗಳ ಪೂರಕ ಉದ್ಯೋಗಗಳು ಕಾರ್ಮಿಕರನ್ನೇ ನೆಚ್ಚಿಕೊಂಡಿದೆ. ಇದೀಗ ಎಲೆಕ್ಟ್ರಿಕ್ ಮಯವಾದರೆ ಇತರ ದೇಶಗಳಿಗಿಂತ ಹೆಚ್ಚು ಉದ್ಯೋಗ ಕಡಿತ ಭಾರತದಲ್ಲಿ ಆಗಲಿದೆ ಅನ್ನೋ ಎಚ್ಚರಿಕೆ ಕರೆ ಗಂಟೆ ಬಂದಿದೆ. 

ಭಾರತಕ್ಕೆ ಬರುತ್ತಿದೆ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು; 350KM ಮೈಲೇಜ್!

ಎಲೆಕ್ಟ್ರಿಕ್ ಕಾರು ನಿರ್ಮಾಣ ಮಾತ್ರವಲ್ಲ,  ಎಲೆಕ್ಟ್ರಿಕ್ ಕಾರಿನ ಎಂಜಿನ್ ಹಾಗೂ ನಿರ್ವಹಣೆ ಇಂಧನ ಕಾರಿನಂತಲ್ಲ. ಎಲ್ಲವೂ ಕಂಪ್ಯೂಟರೈಸಡ್ ಸರ್ವೀಸ್. ಇಂಧನ ವಾಹನದಲ್ಲಿರುವಂತೆ ಹೆಚ್ಚಿನ ಬಿಡಿ ಭಾಗಗಳು, ಪಿಸ್ಟನ್, ಆಯಿಲ್‌ಗಳಂತ ಅವಶ್ಯಕತೆ ಇಲ್ಲ. ಇದು ಕೂಡ ಉದ್ಯೋಗ ಕಡಿತಕ್ಕೆ ಕಾರಣಾಗಲಿದೆ. 

2019ರಲ್ಲಿನ ವಾಹನ ಮಾರಾಟ ಕುಸಿತದಿಂದ ಜರ್ಮನಿಯಲ್ಲಿ ಉದ್ಯೋಗ ಕಡಿತ ಹೆಚ್ಚಾಗಿದೆ. ಇದೀಗ ಎಲೆಕ್ಟ್ರಿಕ್ ಮಯದಿಂದ ಮತ್ತಷ್ಟು ಹೊಡೆತ ಬೀಳಲಿದೆ. ಇದು ಭಾರತಕ್ಕೂ ಅನ್ವಯವಾಗಲಿದೆ. ಸದ್ಯ ಭಾರತದ ಅಟೋಮೊಬೈಲ್ ಕ್ಷೇತ್ರ ತೀವ್ರ ಹೊಡೆತದಿಂದ ಚೇತರಿಸಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಆಘಾತಕಾರಿ ವರದಿ, ಭಾರತದ ಆಟೋಮೊಬೈಲ್ ಉದ್ಯೋಗಿಗಳ ಚಿಂತೆ ಹೆಚ್ಚಿಸಿದೆ.