ನವದೆಹಲಿ(ಜ.10): ಮಹೀಂದ್ರ ಕಂಪನಿಯ e2o ಹಾಗೂ e2o ಪ್ಲಸ್ ಎಲೆಕ್ಟ್ರಿಕ್ ಕಾರನ್ನು ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ನೂತನ ಕಾರಿನ ಬೆಲೆ ಮಾರುತಿ ವ್ಯಾಗನರ್ ಎಲೆಕ್ಟ್ರಿಕ್ ಕಾರಿಗಿಂತ ಕಡಿಮೆ ಇದೆ. ಮಹೀಂದ್ರ KUV100 ಎಲೆಕ್ಟ್ರಿಕ್ ಕಾರಿನ ಬೆಲೆ 9 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಮಹೀಂದ್ರ MD ಪವನ್ ಗೋಯೆಂಕಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಬರುತ್ತಿದೆ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು; 350KM ಮೈಲೇಜ್!

ಸದ್ಯ ಭಾರತದಲ್ಲಿ ಬಿಡುಗಡೆಯಾಗಿರುವ ಹಾಗೂ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರುಗಳ ಬೆಲೆ 12 ಲಕ್ಷ ರೂಪಾಯಿಗಿಂತ ಹೆಚ್ಚಿದೆ. ಇದೀಗ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು 9 ಲಕ್ಷ ರೂಪಾಯಿಗೆ ಲಭ್ಯವಾಗಲಿದೆ ಅನ್ನೋ ಘೋಷಣೆ, ಭಾರತೀಯ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಕಡಿಮೆ ಬೆಲೆ; ಟಾಟಾ ಅಲ್ಟ್ರೋಝ್ ಎಲೆಕ್ಟ್ರಿಕ್ ಕಾರು ಲಾಂಚ್ ಡೇಟ್ ಬಹಿರಂಗ!.

ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು 2020ರಲ್ಲೇ ಬಿಡುಗಡೆಯಾಗಲಿದೆ. ನೂತನ ಕಾರು 300 ರಿಂದ 400 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಶೀಘ್ರದಲ್ಲೇ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಇದರ ಬೆಲೆ 12 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.