ಪೊಲೆಂಡ್(ನ.01): ಬಜಾಜ್ ಮೋಟಾರ್ ನೂತನ ಪಲ್ಸರ್ 125 ಬೈಕ್ ಖರೀದಿಸಿದರೆ, 6,000 ರೂಪಾಯಿ ಮೌಲ್ಯದ ಹೆಲ್ಮೆಟ್ ಉಚಿತ ಉಡುಗೊರೆ ಘೋಷಿಸಲಾಗಿದೆ. ಆದರೆ ಈ ಕೊಡುಗೆ ಭಾರತದಲ್ಲಿ ಇಲ್ಲ. ಇದು ಪೊಲೆಂಡ್‌ನಲ್ಲಿ ಮಾತ್ರ.

ಬಜಾಜ್ ಕಂಪೆನಿ ಪೊಲೆಂಡ್‌ನಲ್ಲಿ ನೂತನ ಪಲ್ಸರ್ 125 ಬೈಕ್ ಬಿಡುಗಡೆ ಮಾಡಿದೆ. ಪೊಲೆಂಡ್‌ನಲ್ಲಿ ಈ ಬೈಕ್ ಬೆಲೆ 1.56 ಲಕ್ಷ ರೂಪಾಯಿ. ಎಬಿಎಸ್ ಬ್ರೇಕ್ ಸೌಲಭ್ಯವಿರೋ ನೂತನ ಪಲ್ಸರ್ ಪೊಲೆಂಡ್ ಬಳಿಕ ಭಾರತದಲ್ಲೂ ಬಿಡುಗಡೆಯಾಗಲಿದೆ.

ಭಾರತದಲ್ಲಿ ಇದರ ಬೆಲೆ 60,000 ರೂಪಾಯಿ ಒಳಗಿರಲಿದೆ ಎಂದು ಅಂದಾಜಿಸಲಾಗಿದೆ.   ನೂತನ ಬೈಕ್ ಸಿಂಗಲ್ ಸಿಲಿಂಡರ್, 4 ವಾಲ್ವ್, ಫ್ಯೂಯೆಲ್ ಇಂಜೆಕ್ಟ್, ಎರ್ ಕೂಲ್‌ಡ್, 124.4 ಸಿಸಿ ಇಂಜಿನ್ ಹೊಂದಿದೆ. ಇನ್ನು ಟೆಲೆಸ್ಕೋಪಿಕ್ ಫೋರ್ಕ್ ಸಸ್ಪೆಶನ್ ಹೊಂದಿದೆ. ಬೈಕ್ ತೂಕ 126.5 ಕೆಜಿ.