ತುಂಬಿ ಹರಿಯುತ್ತಿರುವ ನದಿ ದಾಟಿದ ಫೋರ್ಡ್ ಇಕೋಸ್ಪೋರ್ಟ್!
ಪ್ರವಾಹ ಪರಿಸ್ಥಿತಿಯಿಂದ ರಸ್ತೆ ಎಲ್ಲಿದೆ ಅನ್ನೋದೇ ತಿಳಿಯುತ್ತಿಲ್ಲ. ರಸ್ತೆ, ಮನೆ ಎಲ್ಲವೂ ಸಾಗರಗಳಾಗಿವೆ. ಇನ್ನು ನದಿಗಳಂತೂ ಅಪಯಾದ ಮಟ್ಟ ಮೀರಿ ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಫೋರ್ಡ್ ಇಕೋಸ್ಫೋರ್ಟ್ ತುಂಬಿ ಹರಿಯುತ್ತಿದ್ದ ನದಿ ದಾಟಿದೆ.
ಹೈದರಾಬಾದ್(ಆ.20): ಭಾರತದ ಬಹುತೇಕ ರಾಜ್ಯಗಳಲ್ಲಿ ರಣಭೀಕರ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದೆ. ಬೆಟ್ಟ ಗುಡ್ಡಗಳು ಧರೆಗುರುಳುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಲಾಶಯಗಳು ಭರ್ತಿಯಾಗಿದೆ. ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ದೇಶದ ಹೆಚ್ಚಿನ ಭಾಗದಲ್ಲಿ ಇದೇ ಪರಿಸ್ಥಿತಿ ಇದೆ. ಜನರಿಗೆ ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ. ಆದರೆ ಫೋರ್ಡ್ ಇಕೋಸ್ಪೋರ್ಟ್ ಕಾರು ತುಂಬಿ ಹರಿಯುತ್ತಿರುವ ನದಿ ದಾಟಿ ಸೈ ಎನಿಸಿಕೊಂಡಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ to ಬಾದ್‌ಶಾ; ಸೆಲೆಬ್ರೆಟಿಗಳಲ್ಲಿದೆ ಸೆಕೆಂಡ್ ಹ್ಯಾಂಡ್ ಕಾರು!
ಹೈದರಾಬಾದ್ ಸಮೀಪ ನದಿ ಮಳೆಯಿಂದ ತುಂಬಿ ಹರಿಯುತ್ತಿದೆ. ನದಿಯಾಚೆಗಿನ ಜನರಿಗೆ ಇತ್ತ ಬರಲು ಸಾಧ್ಯವಾಗದೆ ಪರದಾಡುತ್ತಿದ್ದರು. ಇತ್ತ ಟ್ರಕ್ ನದಿ ದಾಟುವ ಸಂದರ್ಭದಲ್ಲಿ ಸಿಲುಕಿಕೊಂಡ ಪರಿಣಾಯ ಟ್ರಕ್‌ನಲ್ಲಿದ್ದವರನ್ನು ಅಪಾಯದಿಂದ ರಕ್ಷಿಸಲಾಯಿತು. ಇದೇ ವೇಳೆ ಫೋರ್ಡ್ ಇಕೋಸ್ಪೋರ್ಟ್ ಕಾರು ಯಾವ ಅಳುಕಿಲ್ಲದೆ ಸಲೀಸಾಗಿ ನದಿ ದಾಟಿತು. ಫೋರ್ಡ್ ಇಕೋ ಸ್ಫೋರ್ಟ್ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Youtubeಗಾಗಿ ರೈಲು ಹಳಿಯಲ್ಲಿ ಸ್ಟಂಟ್; ಟ್ರೇಲರ್ ಬಿಟ್ಟು ಅರೆಸ್ಟ್ ಆದ ಯುವಕ!
ಫೋರ್ಡ್ ಇಕೋ ಸ್ಫೋರ್ಟ್ ಸಲೀಸಾಗಿ ನದಿ ದಾಟಲು ಕೆಲ ಕಾರಣಗಳಿವೆ. ಭಾರತದ SUV, ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಫೋರ್ಟ್ ಇಕೋಸ್ಪೋರ್ಟ್ ಗರಿಷ್ಠ ವಾಟರ್ ವೇಡಿಂಗ್ ಡೆಪ್ತ್ ಹೊಂದಿದೆ. ನೀರಿನಲ್ಲೂ ಚಲಿಸುವ ಸಾಮರ್ಥ್ಯ ಇತರ ಕಾರುಗಳಿಗಿಂತ ಇಕೋಸ್ಫೋರ್ಟ್ ಕಾರಿಗೆ ಹೆಚ್ಚಿದೆ. ನೀರಿನಲ್ಲಿ ಹೆಚ್ಚಿನ ಅಪಾಯವಿಲ್ಲದೆ ಪ್ರಯಾಣಿಸುಲ ಸಾಮರ್ಥ್ಯ ಹೊಂದಿರುವ ವಾಹನಗಳ ಪೈಕಿ ಮಹೀಂದ್ರ ಥಾರ್ ಮೊದಲ ಸ್ಥಾನದಲ್ಲಿದೆ. ನಂತರ ಸ್ಥಾನ ಫೋರ್ಡ್ ಇಕೋಸ್ಪೋರ್ಟ್‌ಗೆ ಸಲ್ಲಲಿದೆ. ಫೋರ್ಡ್ ಇಕೋಸ್ಪೋರ್ಟ್ ವಾಟರ್ ವೇಡಿಂಗ್ ಡೆಪ್ತ್ 550mm ಇದ್ದರೆ, ಮಹೀಂದ್ರ ಥಾರ್ ವಾಟರ್ ವೇಡಿಂಗ್ ಡೆಪ್ತ್ ಗರಿಷ್ಟ 500mm ಇದೆ.