Youtubeಗಾಗಿ ರೈಲು ಹಳಿಯಲ್ಲಿ ಸ್ಟಂಟ್; ಟ್ರೇಲರ್ ಬಿಟ್ಟು ಅರೆಸ್ಟ್ ಆದ ಯುವಕ!

ಕಷ್ಟಪಡದೇ ಹಣ ಸಂಪಾದಿಸಬೇಕು. ಇದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದ ಅನ್ನೋ ಮನಸ್ಥಿತಿ ಹೆಚ್ಚಾಗುತ್ತಿದೆ. ಇದೀಗ ಯುವಕನೋರ್ವ Youtube ಲೈಕ್ಸ್‌ಗಾಗಿ ರೈಲು ಹಳಿಯಲ್ಲಿ ಬೈಕ್ ಹಾಗೂ ಸಿಲಿಂಡರ್ ಸ್ಫೋಟಿಸಲು ಮುಂದಾದ ಘಟನೆ ನಡೆದಿದೆ. ಈ ತಲೆ ತಿರುಗೋ ಪ್ಲಾನ್ ಮಾಡಿದ್ದು ಬಿ-ಟೆಕ್ ಒದಿದ ಯುವಕ.

Police arrest Btech guy for put his bike gas cylinder in railway track

ಚಿತ್ತೂರ್(ಆ.12): ಸಾಮಾಜಿಕ ಜಾಲತಾಣದಲ್ಲಿ ದಿನಬೆಳಗಾಗುವುದರೊಳಗೆ ಸ್ಟಾರ್ ಆಗಬೇಕು,  ಹಣ ಗಳಿಸಬೇಕು ಎಂದು ಅವಾಂತರಗಳನ್ನು ಮಾಡುವವರ ಸಂಖ್ಯ ಹೆಚ್ಚಾಗುತ್ತಿದೆ. ಇದೀಗ ಬಿಟೆಕ್ ಓದಿದ ಯುವಕ Youtube ಚಾನೆಲ್‌ನಲ್ಲಿ ಅತೀ  ಹೆಚ್ಚು ಲೈಕ್ಸ್ ಹಾಗೂ ಹಣ ಗಳಿಸಲು ತಲೆ ತಿರುಗಿದ ಐಡಿಯಾ ಮಾಡಿದ್ದಾನೆ. ಈತನ ಪ್ಲಾನ್ ವರ್ಕೌಟ್ ಆಗಿದ್ದರೆ ಬಹುದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆದರೆ ಅದೃಷ್ಠವಶಾತ್ ಪೊಲೀಸರು ಇದನ್ನು ತಡೆದಿದ್ದಾರೆ.

ಇದನ್ನೂ ಓದಿ: BMW ಕಾರು ಗಿಫ್ಟ್ ನೀಡಿದ್ರೂ ಪೋಷಕರಿಗೆ ತಪ್ಪಲಿಲ್ಲ ತಲೆನೋವು!

ಆಂಧ್ರಪ್ರದೇಶದ ಚಿತ್ತೂರಿನ ಯುವಕ ಕೊಂಗರ ರಿಮಿ ರೆಡ್ಡಿ ಬಿಟೆಕ್ ಓದಿದ್ದಾನೆ. ಆದರೆ ಈತ ಸರಿಯಾಗಿ ಕ್ಲಾಸ್‌ನಲ್ಲಿ ಕುಳಿತಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ತನ್ನ ಯೂಟ್ಯೂಬ್ ಚಾಲೆನ್‍‌ನ ವಿಡಿಯೋಗಳು ಅತೀ ಹೆಚ್ಚು ಲೈಕ್ ಪಡೆಯಲು ಹೊಸ ತಂತ್ರ ಮಾಡಿದ್ದಾನೆ. ರೈಲು ಹಳಿಯಲ್ಲಿ ತನ್ನ ಹೊಂಡಾ ಶೈನ್ ಬೈಕನ್ನು ನಿಲ್ಲಿಸಿದ್ದಾನೆ. ಇದರ ಜೊತೆ ಭರ್ತಿಯಾಗಿರುವ ಗ್ಯಾಸ್ ಸಿಲಿಂಡರ್ ಕೂಡ ಹಳಿಯಲ್ಲಿ ಇಟ್ಟಿದ್ದಾನೆ.

ಇದನ್ನೂ ಓದಿ: ಪೈಲಟ್ ಆಗಲು ಬಿಡದ ಬಡತನ: ತನ್ನದೇ ’ಹೆಲಿಕಾಪ್ಟರ್’ ನಿರ್ಮಿಸಿದ ರೈತನ ಮಗ!

ರೈಲು ವೇಗಾಗಿ ಬೈಕ್ ಬೈಕ್ ಹಾಗೂ ಗ್ಯಾಸ್ ಸಿಲಿಂಡರ್‌ಗೆ ಡಿಕ್ಕಿ ಹೊಡೆಯವು ದೃಶ್ಯವನ್ನು ಚಿತ್ರಿಕರಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾನೆ. ಈತನ ಪ್ಲಾನ್ ಪ್ರಕಾರ ವೇಗವಾಗಿ ಬರುವ ರೈಲು, ಬೈಕ್ ಹಾಗೂ ಗ್ಯಾಸ್ ಸಿಲಿಂಡರ್‌ಗೆ ಡಿಕ್ಕಿ ಹೊಡೆದಾಗ ಸಿಲಿಂಡರ್ ಸ್ಫೋಟ ಗೊಳ್ಳುವ ಹಾಗೂ ಬೈಕ್ ನಜ್ಜು ಗುಜ್ಜಾಗುವ ದೃಶ್ಯ ಯುಟ್ಯೂಬ್‌ನಲ್ಲಿ ಹೆಚ್ಚು ಲೈಕ್ಸ್ ಬರಲಿದೆ. ಇದರಿಂದ ತನಗೆ ಹೆಚ್ಚು ಆದಾಯ ಬರಲಿದೆ ಅನ್ನೋ ಲೆಕ್ಕಾಚಾರದಲ್ಲಿದ್ದ.  ರೋಚಕ ದೃಶ್ಯಕ್ಕಾಗಿ ಕಾಯುತ್ತಿರಿ ಈ ಅವಾಂತರದ ತಯಾರಿ ವಿಡಿಯೋ ಟ್ರೈಲರ್ ಕೂಡ Youtubeನಲ್ಲಿ ಬಿಟ್ಟಿದ್ದಾನೆ 

ವಿಷಯ ತಿಳಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಬೈಕ್ ರಿಜಿಸ್ಟ್ರೇಶನ್ ನಂಬರ್ ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ. ಮಿಂಚಿನ ವೇಗದಲ್ಲಿ ಕಾರ್ಯಚರಣೆಗೆ ಇಳಿದ ಪೊಲೀಸರು ಚಿತ್ರೀಕರಣ ಸ್ಥಳಕ್ಕೆ ಧಾವಿಸಿ, ಕೊಂಗರ ರಿಮಿ ರೆಡ್ಡಿಯನ್ನು ಬಂಧಿಸಿದ್ದಾರೆ. ಇನ್ನು ಗ್ಯಾಸ್ ಸಿಲಿಂಡರ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅನಾಹುತವನ್ನು ತಪ್ಪಿಸಿದ್ದಾರೆ.

ಇದನ್ನೂ ಓದಿ: ಕಟ್ಟುಪಾಡು ಮುರಿದು ಬೈಕ್ ಸವಾರಿ; ಇಲ್ಲಿದೆ ರೋಶನಿ ಮಿಸ್ಬಾ ರೋಚಕ ಸ್ಟೋರಿ!

Youtube ವಿಡಿಯೋ ವೈರಲ್‌ಗಾಗಿ ಈ ರೀತಿ ಮಾಡಿದೆ. ಇದು ತಪ್ಪೇ ಎಂದು  ಪ್ರಶ್ನಿಸೋ ಮೂಲಕ ತನ್ನನ್ನು ಸಮರ್ಥಿಸಿಕೊಂಡಿದ್ದಾನೆ. ರೈಲು ಹಳಿಯಲ್ಲಿ ಸ್ಟಂಟ್, ಪ್ರಯಾಣಿಕರ ಸುರಕ್ಷತೆಗೆ ಅಡ್ಡಿ ಸೇರಿದಂತೆ ಸೆಕ್ಷನ್ 153, 143 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios