ನವದೆಹಲಿ(ಫೆ.15): ಫೋರ್ಡ್ ಸಂಸ್ಥೆ ನೂತನ ಆಸ್ಪೈರ್ ಕಾರು CNG ವೇರಿಯೆಂಟ್ ಬಿಡುಗಡೆ ಮಾಡಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರಿಗೆ CNG ಕಿಟ್ ಅಳವಡಿಸಿದ ಫ್ರೋರ್ಡ್ ಆಸ್ಪೈರ್ ರಸ್ತೆಗಿಳಿದಿದೆ. CNG ಆಸ್ಪೈರ್ ಆಂಬಿಯೆಂಟ್ ಮಾಡೆಲ್ ಬೆಲೆ 6.27 ಲಕ್ಷ ರೂಪಾಯಿ ಹಾಗೂ CNG ಟ್ರೆಂಡ್ ಪ್ಲಸ್ ಬೆಲೆ 7.12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ಇದನ್ನೂ ಓದಿ: ರೈಲನ್ನೇ ನಿಲ್ಲಿಸಿತು ಮಹೀಂದ್ರ ಬೊಲೆರೋ ಜೀಪ್!

1.2 ಲೀಟರ್ ಫೋರ್ಡ್ ಆಸ್ಪೈರ್ CNG ಕಾರು 95 bhp ಪವರ್ ಹಾಗೂ 120 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ವಿಶೇಷ ಅಂದರೆ CNG ಕಾರು ಪ್ರತಿ ಕಿ.ಮೀ ಪ್ರಯಾಣದ ವೆಚ್ಚ ಕೇವಲ 46 ಪೈಸೆ ಮಾತ್ರ. 10,000 ಕಿ.ಮೀ ಕಾರು ಸರ್ವೀಸ್ ಹಾಗೂ 20,000 ಕಿ.ಮೀ ಗೆ CNG ಕಿಟ್ ಸರ್ವೀಸ್ ಮಾಡಬೇಕು.

ಇದನ್ನೂ ಓದಿ: ಮನೆ ಮುಂದೆ ಕಾರು ನಿಲ್ಲಿಸಿದರೂ ನೀಡಬೇಕು ಪಾರ್ಕಿಂಗ್ ಚಾರ್ಚ್!

ಸುರಕ್ಷತೆಯಲ್ಲಿ ಯಾವುದೇ ರಾಜಿಯಾಗಿಲ್ಲ. ABS, EBD ಏರ್‌ಬ್ಯಾಗ್, ರೇರ್ ಕ್ಯಾಮರ ಸೇರಿದಂತೆ ಎಲ್ಲಾ ಸುರಕ್ಷತಾ ಸೌಲಭ್ಯಗಳು ಈ ಕಾರಿನಲ್ಲಿದೆ. ಸ್ಯಾಟಲೈಟ್ ನ್ಯಾವಿಗೇಶನ್, 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಕಾರ್ ಪ್ಲೇ, ಅಟೋಮ್ಯಾಟ್ ಕ್ಲೈಮೇಟ್ ಕಂಟ್ರೋಲ್, ರಿಮೂಟ್ ಸೆಂಟ್ರಲ್ ಲಾಂಕಿಂಗ್ ಸೇರಿದಂತೆ ಆಸ್ಪೈರ್ ಕಾರಿನ ಎಲ್ಲಾ ಫೀಚರ್ಸ್ ಈ ಕಾರಿನಲ್ಲಿದೆ.